ವಿಮಾನದಲ್ಲಿ ಸುಂದರ ಯುವತಿ ಪಕ್ಕದಲ್ಲಿ ಕೂರುವ ಕನಸಿಗೆ ಬಿತ್ತು ಕತ್ತರಿ!

ನವದೆಹಲಿ, ಬುಧವಾರ, 2 ಆಗಸ್ಟ್ 2017 (10:03 IST)

ನವದೆಹಲಿ: ಜಾಹೀರಾತೊಂದರಲ್ಲಿ ಮಹಿಳೆ ಸ್ವಲ್ಪ ಸೀಟ್ ಅಡ್ಜಸ್ಟ್ ಮಾಡುವಂತೆ ಕೇಳಿಕೊಳ್ಳುತ್ತಾಳೆ. ಆಗ ಯುವಕ ಮಧ್ಯದ ಸೀಟ್ ಬಿಟ್ಟುಕೊಟ್ಟು ಯುವತಿ ಜತೆ ಕೂರುವ ಕನಸು ಕಾಣುತ್ತಾನೆ. ಇಂತಹದ್ದೊಂದು ಜಾಹೀರಾತಿನ ದೃಶ್ಯ ಇನ್ನು ಈ ಏರ್ ಲೈನ್ಸ್ ನಲ್ಲಿ ಸಿಗದು.


 
ವಿಸ್ತಾರಾ ವಿಮಾನ ಸಂಸ್ಥೆ ತನ್ನ ವಿಮಾನದಲ್ಲಿ ಇನ್ನು ಮುಂದೆ ಮಹಿಳೆಯರಿಗೆ ಮಧ್ಯದ ಸೀಟು ನೀಡದೇ ಇರಲು ತೀರ್ಮಾನಿಸಿದೆ. ಮಹಿಳೆಯರಿಗೆ ಕಿಟಿಕಿ ಪಕ್ಕದ ಅಥವಾ ಇನ್ನೊಂದು ತುದಿಯ ಸೀಟು ಕಾದಿರಿಸಲು ಅವಕಾಶ ನೀಡಲಿದೆ. ಇದರಿಂದ ಏಕಾಂಗಿಯಾಗಿ ಪ್ರಯಾಣಿಸುವ ಮಹಿಳೆಯರು ಅಪರಿಚಿತ ಪುರುಷರೊಂದಿಗೆ ಕೂರುವ ಕಿರಿ ಕಿರಿ ತಪ್ಪಿಸುವುದು ಸಂಸ್ಥೆಯ ಉದ್ದೇಶವಾಗಿದೆ.
 
ಮಹಿಳಾ ಪ್ರಯಾಣಿಕರ ಬೇಡಿಕೆಯ ಮೇರೆ ಏರ್ ಲೈನ್ಸ್ ಸಂಸ್ಥೆ ಇಂತಹದ್ದೊಂದು ಕ್ರಮಕ್ಕೆ ಮುಂದಾಗಿದೆ. ಅಲ್ಲದೆ ಮಹಿಳೆಯರು ತಮ್ಮ ಬ್ಯಾಗ್ ಪಡೆದುಕೊಳ್ಳಲು ವಿಸ್ತಾರ ಸಿಬ್ಬಂದಿಯ ಸಹಾಯ ಪಡೆದುಕೊಳ್ಳಬಹುದಂತೆ. ಇದು ಮಹಿಳೆಯರ ಹಿತದೃಷ್ಟಿಯಿಂದ ಮಾಡಿರುವ ಯೋಜನೆ ಎಂದು ಸಂಸ್ಥೆ ಹೇಳಿಕೊಂಡಿದೆ.
 
ಇದನ್ನೂ ಓದಿ..  ಶಾರುಖ್ ಖಾನ್ ರನ್ನು ನೋಡಲು ಬಂದ ಆ ವಿಶೇಷ ‘ಅಭಿಮಾನಿ’!
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ವಿಸ್ತಾರ ಏರ್ ಲೈನ್ಸ್ ಮಹಿಳೆಯರು ವಾಣಿಜ್ಯ ಸುದ್ದಿಗಳು Women Visthara Airlines Business News

ವ್ಯವಹಾರ

news

ಮೋದಿ ಎಫೆಕ್ಟ್ : ಪ್ರತಿ ತಿಂಗಳು ಎಲ್‌ಪಿಜಿ ದರದಲ್ಲಿ ಏರಿಕೆ

ನವದೆಹಲಿ: ಪ್ರತಿ ತಿಂಗಳು ಎಲ್‌ಪಿಜಿ ದರದಲ್ಲಿ ಏರಿಕೆಯಾಗಲಿದೆ ಎಂದು ಕೇಂದ್ರದ ಅನಿಲ ಖಾತೆ ಸಚಿವಾಲಯದ ...

news

ಆಧಾರ ಲಿಂಕ್ ಮಾಡದಿದ್ರೆ ಪ್ಯಾನ್‌ಕಾರ್ಡ್ ಕ್ಯಾನ್ಸಲ್

ನವದೆಹಲಿ: ಆಧಾರ ಲಿಂಕ್ ಮಾಡದಿದ್ದರೆ ಪ್ಯಾನ್‌ಕಾರ್ಡ್‌ ಕ್ಯಾನ್ಸಲ್ ಆಗುತ್ತದೆ ಎಂದು ಕೇಂದ್ರ ಕಂದಾಯ ...

news

ಟೊಮೆಟೋ ಬಳಕೆದಾರರಿಗೆ ಸಿಹಿ ಸುದ್ದಿ

ಬೆಂಗಳೂರು: ದೇಶದಲ್ಲೆಡೆ ಟೊಮೆಟೋ ಬೆಲೆ ಗಗನಕ್ಕೇರಿ ಸಾರು, ರಸಂ ಮಾಡದ ಪರಿಸ್ಥಿತಿಗೆ ಬಂದಿತ್ತು ಗೃಹಿಣಿಯರ ...

news

ಫೇಸ್ಬುಕ್`ನಲ್ಲಿ ಹಾಕುವ ನಿಮ್ಮ ಫೋಟೋ ನಿಮ್ಮ ಆದಾಯದ ಗುಟ್ಟು ರಟ್ಟು ಮಾಡುತ್ತೆ..!

ಈಗೇನಿದ್ದರೂ ಸಾಮಾಜಿಕ ಜಾಲತಾಣಗಳ ಜಮಾನ. ಎಲ್ಲೇ ಪ್ರವಾಸಕ್ಕೆ ಹೋದರೂ.. ಏನನ್ನಾದರೂ ಖರೀದಿಸಿದರೂ ಸರಿ ಜೀವನದ ...

Widgets Magazine