ಬಳ್ಳಾರಿ ಸೋಲಿನ ಬೆನ್ನಲ್ಲೇ ಜನಾರ್ಧನ ರೆಡ್ಡಿಗೆ ಹೊಸ ಸಂಕಟ

ಬಳ್ಳಾರಿ, ಬುಧವಾರ, 7 ನವೆಂಬರ್ 2018 (09:40 IST)

ಬಳ್ಳಾರಿ: ಲೋಕಸಭೆ ಉಪಚುನಾವಣೆಯಲ್ಲಿ ಬಳ್ಳಾರಿಯಲ್ಲಿ ಸ್ನೇಹಿತ ಬಿ ಶ್ರೀರಾಮುಲು ಅಷ್ಟೆಲ್ಲಾ ಪ್ರಚಾರ ನಡೆಸಿಯೂ ತವರಿನಲ್ಲಿ ತಮ್ಮ ಪರ ಅಭ್ಯರ್ಥಿ ಸೋಲುಂಡ ಹತಾಶೆಯಲ್ಲಿರುವಾಗಲೇ ಗಣಿ  ದಣಿ ಜನಾರ್ಧನ ರೆಡ್ಡಿಗೆ ಹೊಸ ಸಂಕಟ ಎದುರಾಗಿದೆ.
 
ಅಕ್ರಮವಾಗಿ ಹಣ ವರ್ಗಾವಣೆ ಮಾಡಿದ್ದಲ್ಲದೆ, ಕಳೆದ ವಿಧಾನಸಭೆ ಚುನಾವಣೆಗೆ ಸುಮಾರು 20 ಕೋಟಿ ರೂ. ಹಣವನ್ನು ಖರ್ಚು ಮಾಡಿದ್ದಾರೆಂಬ ಗಂಭೀರ ಆರೋಪಗಳ ಹಿನ್ನಲೆಯಲ್ಲಿ ಜನಾರ್ಧನ ರೆಡ್ಡಿ ಬಂಧನಕ್ಕೆ ಸಿಸಿಬಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.
 
ಇದೀಗ ಜನಾರ್ಧನ ರೆಡ್ಡಿ ತಲೆಮರೆಸಿಕೊಂಡು ಅಲೋಕ್‍ ಕುಮಾರ್ ನೇತೃತ್ವದ ಸಿಸಿಬಿ ಪೊಲೀಸರು ತೀವ್ರ ಹುಡುಕಾಟ ನಡೆಸಿದ್ದಾರೆ. ಇಡಿ ಪ್ರಕರಣದಿಂದ ಹೊರ ಬರಲು ಇಡಿ ಇಲಾಖೆಯ ಅಧಿಕಾರಿಗಳಿಗೆ ಲಂಚ ಕೊಡಲು ಮುಂದಾಗಿದ್ದಾರೆಂಬ ಗಂಭೀರ ಪ್ರಕರಣವೂ ಅವರ ವಿರುದ್ಧ ದಾಖಲಾಗಿದೆ.
 
ಚುನಾವಣೆಯ ಸಂದರ್ಭದಲ್ಲಿಯೇ ಜನಾರ್ಧನ ರೆಡ್ಡಿ ವಿರುದ್ಧ ಸಾಕ್ಷ್ಯ ಸಂಗ್ರಹಿಸಲಾಗಿತ್ತಾದರೂ, ಆ ಸಂದರ್ಭದಲ್ಲಿ ಬಂಧಿಸಿದರೆ ಇದಕ್ಕೆ ರಾಜಕೀಯ ಬಣ್ಣ ಬರಬಹುದು ಎಂಬ ಉದ್ದೇಶಕ್ಕೆ ಚುನಾವಣೆ ಫಲಿತಾಂಶದ ನಂತರ ಸಿಸಿಬಿ ಪೊಲೀಸರು ಬಂಧನಕ್ಕೆ ಬಲೆ ಬೀಸಿದ್ದಾರೆ. ಜನಾರ್ಧನ ರೆಡ್ಡಿ ಜತೆಗೆ ಅವರ ಆಪ್ತ ಅಲಿಖಾನ್ ಬಂಧನಕ್ಕೂ ಪೊಲೀಸರು ಹೊಂಚು ಹಾಕಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಸೋತರೂ ಬಿಜೆಪಿಯವರು ಈ ಕೆಲಸ ಮಾಡೋದು ಬಿಟ್ಟಿಲ್ಲ ಎಂದು ಸಿಎಂ ಎಚ್ ಡಿಕೆ ಆರೋಪ

ಬೆಂಗಳೂರು: ಮೊನ್ನೆಯಷ್ಟೇ ನಡೆದ ಲೋಕಸಭೆ ಉಪಚುನಾವಣೆಯಲ್ಲಿ ಐದು ಕ್ಷೇತ್ರಗಳ ಪೈಕಿ ನಾಲ್ಕರಲ್ಲಿ ಸೋತರೂ ...

news

ಕರ್ನಾಟಕ ಬಿಜೆಪಿಗೆ ಸೋಲಿಗೆ ಕಾರಣ ಕಾಂಗ್ರೆಸ್-ಜೆಡಿಎಸ್ ಅಲ್ಲ!

ಬೆಂಗಳೂರು: ಲೋಕಸಭೆ ಉಪಚುನಾವಣೆಯಲ್ಲಿ ಗೆದ್ದು ಬೀಗುತ್ತಿರುವ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಪಕ್ಷಗಳು ಇದು ...

news

ಜಗಳ ತಾರಕಕ್ಕೇರಿ ಮಗನನ್ನೇ ಕೊಂದ ದಂಪತಿ

ಪಾಟ್ನಾ: ವೈಯಕ್ತಿಕ ಬದುಕಿನ ವಿಚಾರವಾಗಿ ತಂದೆ-ತಾಯಿ ಮತ್ತು ಮಗನ ನಡುವೆ ನಡೆದ ವಾಗ್ದಾವ ಕೊಲೆಯಲ್ಲಿ ...

news

ರಾಜ್ಯೋತ್ಸವ ನಿಮಿತ್ತ ಶೇ. 50 ರಿಯಾಯಿತಿ ದರದಲ್ಲಿ ಪುಸ್ತಕ ಮಾರಾಟ

ಕರ್ನಾಟಕ ರಾಜ್ಯೋತ್ಸವ ಪ್ರಯುಕ್ತ ಕನ್ನಡ ಪುಸ್ತಕ ಪ್ರಾಧಿಕಾರದಿಂದ ಪ್ರಕಟವಾಗಿರುವ ಎಲ್ಲ ಪುಸ್ತಕಗಳು ...