ಸಿಎಂ, ಪರಮೇಶ್ವರ್ ಬ್ರದರ್ಸ್, ಭಿನ್ನಾಭಿಪ್ರಾಯವಿಲ್ಲ: ಕೆ.ಸಿ.ವೇಣುಗೋಪಾಲ್

ಬೆಂಗಳೂರು, ಮಂಗಳವಾರ, 5 ಡಿಸೆಂಬರ್ 2017 (14:12 IST)

ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಮಧ್ಯೆ ಮನಸ್ತಾಪವಿದೆ ಎನ್ನುವ ವರದಿಗಳಲ್ಲಿ ಸತ್ಯಾಂಶವಿಲ್ಲ. ಅವರಿಬ್ಬರು ಸಹೋದರರಂತಿದ್ದಾರೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ವರದಿಗಳನ್ನು ತಳ್ಳಿಹಾಕಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನಾಶೀರ್ವಾದ ಯಾತ್ರೆ ರದ್ದುಗೊಳ್ಳಲು ಮತ್ತು ಜಿ.ಪರಮೇಶ್ವರ್ ಮಧ್ಯದ ಮನಸ್ತಾಪವೇ ಕಾರಣ ಎನ್ನುವ ವರದಿಗಳು ಹರಡಿವೆ. ಆದರೆ. ಅಂತಹ ವರದಿಗಳಲ್ಲಿ ಸತ್ಯಾಂಶವಿಲ್ಲ ಎಂದು ತಿಳಿಸಿದ್ದಾರೆ.
 
ನಾವೆಲ್ಲರು ದೆಹಲಿಯಿಂದ ಒಂದೇ ವಿಮಾನದಲ್ಲಿ ಬಂದಿದ್ದೇವೆ. ನಮ್ಮಲ್ಲಿ ಯಾವುದೇ ಭಿನ್ನಮತವಿಲ್ಲ. ಬಿಜೆಪಿಯವರು ಉದ್ದೇಶಪೂರ್ವಕವಾಗಿ ಇಂತಹ ವರದಿಗಳನ್ನು ಹರಡಿಸುತ್ತಿದ್ದಾರೆ ಎಂದು ಆರೋಪಿಸಿದರು.
 
ಸಿಎಂ ಸಿದ್ದರಾಮಯ್ಯ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ರಾಜ್ಯದ ಜನತೆ ಸಂತುಷ್ಟರಾಗಿದ್ದಾರೆ. ಸೋಲಿನ ಭಯದಿಂದ ಬಿಜಪಿ ನಾಯಕರು ಹತಾಷೆ ಹೇಳಿಕೆ ನೀಡುತ್ತಿದ್ದಾರೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ತಿರುಗೇಟು ನೀಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಬಿಎಸ್‌ವೈಗೆ ಬರೀ ಸುಳ್ಳಿನ ಹಾವು ಬಿಡುವುದೇ ಕಾಯಕ: ಸಚಿವ ಪಾಟೀಲ್

ವಿಜಯಪುರ: ಪ್ರಧಾನಿ ಮೋದಿ ಕಾಲಿಗೆ ಬಿದ್ದು ಮಹಾದಾಯಿ ಸಮಸ್ಯೆ ಬಗೆಹರಿಸ್ತೇನೆ ಎಂದಿದ್ದ ಬಿಜೆಪಿ ...

news

ಅನೈತಿಕ ಸಂಬಂಧ: ಪತಿಗೆ ಪತ್ನಿ ಮಾಡಿದ್ದು ನೋಡಿದ್ರೆ ಬೆಚ್ಚಿ ಬೀಳುವುದು ಖಚಿತ

ಮಧುರೈ: ಪತಿ ಅನೈತಿಕ ಸಂಬಂಧ ಹೊಂದಿದ್ದಾನೆ ಎನ್ನುವ ಆಕ್ರೋಶದಿಂದ ಪತ್ನಿ ಆತನ ಗುಪ್ತಾಂಗದ ಮೇಲೆ ...

news

ಗೌರಿ ಲಂಕೇಶ್ ಹತ್ಯೆಗೆ ಇಂದು 3 ತಿಂಗಳು

ಬೆಂಗಳೂರು: ಖ್ಯಾತ ಪ್ರತಕರ್ತೆ ಗೌರಿ ಲಂಕೇಶ್ ಅವರನ್ನು ಹತ್ಯೆಗೈದು ಇಂದಿಗೆ ಮೂರು ತಿಂಗಳುಗಳು ಕಳೆದಿದೆ. ...

news

ಸಿಎಂ ಸಿದ್ದರಾಮಯ್ಯ ಜನಾಶ್ರೀರ್ವಾದ ಯಾತ್ರೆ ರದ್ದು

ಬೆಂಗಳೂರು: ಡಿಸೆಂಬರ್ 13ರಿಂದ ಆರಂಭವಾಗಬೇಕಿದ್ದ ಸಿಎಂ ಸಿದ್ದರಾಮಯ್ಯ ಅವರ ಜನಾಶೀರ್ವಾದ ಯಾತ್ರೆ ...

Widgets Magazine
Widgets Magazine