ದಕ್ಷಿಣ ಕನ್ನಡದಲ್ಲಿ ಕಾಂಗ್ರೆಸ್, ಬಿಜೆಪಿ ಮ್ಯಾಚ್ ಫಿಕ್ಸಿಂಗ್: ಕುಮಾರಸ್ವಾಮಿ

ಬೆಂಗಳೂರು, ಮಂಗಳವಾರ, 11 ಜುಲೈ 2017 (13:14 IST)

ಮಂಗಳೂರಿನಲ್ಲಿ ನಡೆಯುತ್ತಿರುವ ಕೋಮು ವಿಚಾರದಲ್ಲಿ ಕಾಂಗ್ರೆಸ್, ಬಿಜೆಪಿ ಒನ್ ಡೇ ಮ್ಯಾಚ್ ಆಡುತ್ತಿವೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.   
 
ಅಭಿವೃದ್ಧಿ ಹೆಸರಲ್ಲಿ ಚುನಾವಣೆಗೆ ಸಿದ್ದವಾಗುವ ಬದಲಿಗೆ, ಕೋಮುವಿಚಾರದಲ್ಲಿ ಕಾಂಗ್ರೆಸ್, ಬಿಜೆಪಿ ಸಜ್ಜುಗೊಳ್ಳುತ್ತಿವೆ ಎಂದು ಲೇವಡಿ ಮಾಡಿದರು. 
 
ಹಿಂದು, ಮುಸ್ಲಿಂ ಸಮುದಾಯಗಳ ಮಧ್ಯೆ ಬಿಕ್ಕಟ್ಟು ಸೃಷ್ಟಿಸಿ ಬಿಜೆಪಿ ರಾಜಕೀಯ ಲಾಭ ಹೆಚ್ಚಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಕೇಂದ್ರ ಸಚಿವರಾದ ಡಿ.ವಿ.ಸದಾನಂದಗೌಡ ಮತ್ತು ಸಂಸದೆ ಶೋಭಾ ಕರಂದ್ಲಾಜೆ ಮನಬಂದಂತೆ ಹೇಳಿಕೆ ನೀಡುತ್ತಿರುವುದು ಸರಿಯಲ್ಲ ಎಂದರು.
 
ಶೋಭಾ ತಾಯಿ ಹೃದಯ ಇರಬೇಕಾದ ಹೆಣ್ಣುಮಗಳು. ದಕ್ಷಿಣ ಕನ್ನಡ ಜಿಲ್ಲೆಯ ಜನರು ಷಂಡರಾ ಅಂದರೆ ಹೇಗೆ? ಪ್ರತಿಯೊಬ್ಬ ನಾಯಕರು ಎಲ್ಲಾ ಸಮಾಜಗಳಲ್ಲಿ ಶಾಂತಿಯ ವಾತಾವರಣ ನಿರ್ಮಿಸಲು ಪ್ರಯತ್ನಿಸಬೇಕು. ಅಮಾಯಕರ ಸಮಾದಿಯ ಮೇಲೆ ಸಾಮ್ರಾಜ್ಯ ಕಟ್ಟೋದು ಸರಿಯಲ್ಲ ಎಂದು ಕರಂದ್ಲಾಜೆಗೆ ಮಾಜಿ ಸಿಎಂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಗೋವುಗಳ ಮಾರಾಟ, ಸರಬರಾಜು ನಿಷೇಧಕ್ಕೆ ಸುಪ್ರೀಂಕೋರ್ಟ್ ತಡೆ

ಕೇಂದ್ರ ಸರ್ಕಾರದ ಗೋಹತ್ಯೆ ನಿಷೇಧ ಅಧಿಸೂಚನೆಗೆ ಸುಪ್ರೀಂಕೋರ್ಟ್ ತಡೆ ನೀಡಿದೆ. ಕೇಂದ್ರದ ನಿರ್ಧಾರದ ಬಗ್ಗೆ ...

news

ಈಶ್ವರಪ್ಪ ಪಿಎ ವಿನಯ್‌ ಅಪಹರಣ ಪ್ರಕರಣ: ಬಿಎಸ್‌ವೈ ಆಪ್ತ ರಾಜೇಂದ್ರ ವಿಚಾರಣೆ

ಬೆಂಗಳೂರು: ಈಶ್ವರಪ್ಪ ಆಪ್ತ ಸಹಾಯಕ ವಿನಯ್‌ನನ್ನು ಅಪಹರಿಸಲು ವಿಫಲಯತ್ನ ನಡೆಸಿ ಹಲ್ಲೆಗೈದಿದ್ದ ಆರೋಪದ ಮೇಲೆ ...

news

ಉದ್ಯಮಿ ಮುಖೇಶ್ ಅಂಬಾನಿ ನಿವಾಸದಲ್ಲಿ ಅಗ್ನಿ ಅವಘಡ

ಉದ್ಯಮಿ ಮುಖೇಶ್ ಅಂಬಾನಿ ನಿರ್ಮಿಸಿರುವ ಮುಂಬೈನ ಬಿಲಿಯನ್ ಡಾಲರ್ ನಿವಾರ್ ಆಂಟಿಲಿಯಾದಲ್ಲಿ ಕಳೆದ ರಾತ್ರಿ ...

news

ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಕಾರು ಅಪಘಾತ

ನವದೆಹಲಿ: ಮಾಜಿ ಪ್ರಧಾನಿ, ಕಾಂಗ್ರೆಸ್ ನಾಯಕ ಮನಮೋಹನ್ ಸಿಂಗ್ ಪ್ರಯಾಣಿಸುತ್ತಿದ್ದ ಕಾರು ಇಂದು ಬೆಳಗ್ಗೆ ...

Widgets Magazine