ಗಣೇಶ ಪೂಜೆಗೆ ತೆರಳಿದ್ದ ವೇಳೆ ಹಾಡುಹಗಲೇ ಮನೆ ಕಳ್ಳತನ

ಕಾರವಾರ, ಶನಿವಾರ, 15 ಸೆಪ್ಟಂಬರ್ 2018 (14:00 IST)

ಮನೆಯವರು ಸಾರ್ವಜನಿಕ ಗಣೇಶನ ಪೂಜೆಗೆ ತೆರಳಿದ್ದ ಸಂದರ್ಭದಲ್ಲಿ ಹಾಡುಹಗಲೇ ಮನೆಗೆ ಒಳ ನುಗ್ಗಿದ ಕಳ್ಳರು ನಗದು, ಚಿನ್ನಾಭರಣ ದೋಚಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಜಾಲಿ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಮನೆಯವರು ಸಾರ್ವಜನಿಕ ಗಣೇಶನ ಪೂಜೆಗೆ ತೆರಳಿದ್ದ ಸಂದರ್ಭದಲ್ಲಿ ಹಾಡುಹಗಲೇ ಮನೆಗೆ ಒಳ ನುಗ್ಗಿದ ಕಳ್ಳರು ಕಪಾಟಿನಲ್ಲಿದ್ದ ನಗದು ಹಾಗೂ ಚಿನ್ನಾಭರಣಗಳನ್ನು ದೋಚಿ ಪರಾರಿಯಾದ ಘಟನೆ  ನಡೆದಿದೆ.

ಭಟ್ಕಳ ತಾಲೂಕಿನ ಹೆಬ್ಳೆ ಗ್ರಾಮ ಪಂಚಾಯತಿ ಕಾರ್ಯದರ್ಶಿ ಲಿಂಗಪ್ಪ ನಾಯ್ಕ ಎಂಬುವರ ಮನೆಯಲ್ಲಿ ಈ ನಡೆದಿದೆ. ಮನೆಯ ಹಿಂಬದಿಯ ಬಾಗಿಲನ್ನು ಭದ್ರವಾಗಿ ಹಾಕದೇ ಇದ್ದುದರಿಂದ  ಯಾರೋ ಇದನ್ನು ಗಮನಿಸಿದ ಕಳ್ಳರು ಒಳಗೆ ನುಗ್ಗಿ 20 ಸಾವಿರ ನಗದು ಹಾಗೂ 10 ಗ್ರಾಮ್ ಉಂಗುರ, ಸರ, ಬಳೆ ಸೇರಿದಂತೆ 2 ಲಕ್ಷಕ್ಕೂ ಹೆಚ್ಚು ಮೌಲ್ಯದ ಚಿನ್ನದ ಆಭರಣ ದೋಚಲಾಗಿದೆ. ಸ್ಥಳಕ್ಕೆ ಪೊಲೀಸರು ಶ್ವಾನ ದಳದೊಂದಿಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಭಟ್ಕಳ ಸಿಪಿಐ ಕೆ.ಎಲ್.ತನಿಖೆ ಕೈಗೊಂಡಿದ್ದಾರೆ.

ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಜಾರಕಿಹೊಳಿ ದೊಡ್ಡ ನಾಯಕರಲ್ಲ, ಮಾಧ್ಯಮಗಳೇ ಆ ರೀತಿ ಬಿಂಬಿಸುತ್ತಿವೆ: ವೀರಪ್ಪ ಮೊಯಿಲಿ

ಚಿಕ್ಕಬಳ್ಳಾಪುರ: ಬೆಳಗಾವಿ ಕಾಂಗ್ರೆಸ್ ನಲ್ಲಿ ಎದ್ದಿರುವ ಭಿನ್ನಮತದ ಬಗ್ಗೆ ಮಾತನಾಡಿರುವ ಮಾಜಿ ಕೇಂದ್ರ ...

news

ಅಮಿತ್ ಶಾರನ್ನು ಮೊಹಮ್ಮದ್ ಅಲಿ ಜಿನ್ನಾಗೆ ಹೋಲಿಸಿದವರು ಯಾರು ಗೊತ್ತೇ?

ನವದೆಹಲಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಎಂದರೆ ಪಾಕಿಸ್ತಾನ ನಿರ್ಮಾತೃ ಮೊಹಮ್ಮದ್ ಅಲಿ ...

news

ಮತ್ತೆ ಮೋದಿ ಪತ್ನಿಯ ವಿಚಾರ ಕೆದಕಿದ ರಮ್ಯಾ

ಬೆಂಗಳೂರು: ಪ್ರಧಾನಿ ಮೋದಿ ವೈಯಕ್ತಿಕ ವಿಚಾರವನ್ನು ಕೆದಕಿ ಮತ್ತೆ ಕಾಂಗ್ರೆಸ್‍ ಸಾಮಾಜಿಕ ಜಾಲತಾಣದ ...

news

ಪೊಲೀಸ್ ಅಧಿಕಾರಿಯ ಪುತ್ರನಿಂದ ಯುವತಿಗೆ ಹಿಗ್ಗಾಮುಗ್ಗಾ ಥಳಿತ

ನವದೆಹಲಿ: ದೆಹಲಿಯ ಪೊಲೀಸ್ ಅಧಿಕಾರಿಯೊಬ್ಬರ ಪುತ್ರ ಯುವತಿಯೊಬ್ಬಳ ಮೇಲೆ ಹಿಗ್ಗಾ ಮುಗ್ಗಾ ಥಳಿಸುತ್ತಿರುವ ...

Widgets Magazine