ಈಶ್ವರಪ್ಪ ಪಿಎ ಕಿಡ್ನಾಪ್‌ ಪ್ರಕರಣಕ್ಕೆ ಹೊಸ ಟ್ವಿಸ್ಟ್: ಅಶ್ಲೀಲ ವಿಡಿಯೋಗಾಗಿ ಅಪಹರಣ ಸಂಚು

ಬೆಂಗಳೂರು, ಶನಿವಾರ, 23 ಸೆಪ್ಟಂಬರ್ 2017 (15:24 IST)

ವಿಧಾನಪರಿಷತ್ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಆಪ್ತ ಸಹಾಯಕ ವಿನಯ್ ಅಪಹರಣ ಪ್ರಕರಣಕ್ಕೆ ಹೊಸ ಟ್ವಿಸ್ಟ್ ದೊರೆತಿದ್ದು, ವಿನಯ್ ಬಳಿಯಿರುವ ಅಶ್ಲೀಲ ವಿಡಿಯೋ ಪಡೆಯಲು ಅಪಹರಣ ಸಂಚು ರೂಪಿಸಲಾಗಿತ್ತು ಎನ್ನುವ ಮಾಹಿತಿ ಮಾಧ್ಯಮಗಳಿಂದ ಬಹಿರಂಗವಾಗಿದೆ.
ಈಶ್ವರಪ್ಪ ಪಿಎ ವಿನಯ್ ಬಳಿಯಿದ್ದ ಮಾಡೆಲ್‌ ಒಬ್ಬಳ ಅಶ್ಲೀಲ ವಿಡಿಯೋ ಪಡೆಯಲು ಆಪ್ತ ಸಂತೋಷ್ ಪ್ರಯತ್ನಿಸುತ್ತಿದ್ದ. ಆದರೆ, ಪ್ರಯತ್ನಗಳು ವಿಫಲವಾಗಿದ್ದರಿಂದ ಅಪಹರಣಕ್ಕೆ ಸಂಚು ರೂಪಿಸಿರುವುದು ಬೆಳಕಿಗೆ ಬಂದಿದೆ.
 
ವಿಡಿಯೋ ಕ್ಲಿಪ್ ಕುರಿತಂತೆ ಮಾತನಾಡುವುದಿದೆ ಎಂದು ಸಂತೋಷ್, ಈಶ್ವರಪ್ಪ ಪಿಎ ವಿನಯ್‌ಗೆ ಅಶೋಕಾ ಹೋಟೆಲ್‌ಗೆ ಬರುವಂತೆ ಕೋರಿದ್ದ. ಆದರೆ ವಿನಯ್, ಅಶೋಕ್ ಹೋಟಲ್‌ಗೆ ಬರಲು ನಿರಾಕರಿಸಿದ್ದ. ಇದರಿಂದಾಗಿ ವಿನಯ್‌ನನ್ನು ಅಪಹರಿಸಲು ಸಂತೋಷ್ ಸಂಚು ರೂಪಿಸಿದ್ದ ಎನ್ನಲಾಗಿದೆ.
 
ಸಂತೋಷ್‌ ಮತ್ತು ಮಾಡೆಲ್ ನಡುವಿನ ಸಂಬಂಧದ ಬಗ್ಗೆ ಆಘಾತಕಾರಿ ಅಂಶಗಳನ್ನು ಬಹಿರಂಗಗೊಳಿಸುವ ವಿಡಿಯೋವನ್ನು ಶತಾಯ ಗತಾಯ ಪಡೆಯಲು ಆರೋಪಿಗಳು ಯತ್ನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
 
ಇದೀಗ ಪ್ರಕರಣ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹೇಳಿಕೆ ಪಡೆಯುವಂತಹ ಹಂತಕ್ಕೆ ಬಂದ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ತೀವ್ರ ಕುತೂಹಲ ಕೆರಳಿಸಿದೆ ಎಂದು ಮೂಲಗಳು ತಿಳಿಸಿವೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಜಯಲಲಿತಾ ಆರೋಗ್ಯದ ಬಗ್ಗೆ ನಾವೆಲ್ಲರು ಸುಳ್ಳು ಹೇಳಿದ್ದೇವೆ ಕ್ಷಮಿಸಿ: ತಮಿಳುನಾಡು ಸಚಿವ

ಚೆನ್ನೈ: ತಮಿಳುನಾಡು ಮಾಜಿ ಸಿಎಂ ದಿವಂಗತ ಜಯಲಲಿತಾ ಆರೋಗ್ಯದ ಬಗ್ಗೆ ನಾವೆಲ್ಲರು ಜನತೆಗೆ ಸುಳ್ಳು ...

news

ವಿದೇಶಿ ಯುವತಿ ಮೇಲೆ ಅತ್ಯಾಚಾರಕ್ಕೆ ಯತ್ನ: ಬಾಲಕನಿಗೆ ಧರ್ಮದೇಟು

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ/ ಮಂಗಳೂರು ಹೊರವಲಯದ ದೇರಳಕಟ್ಟೆಯಲ್ಲಿ ಅಪ್ರಾಪ್ತ ಬಾಲಕನೊಬ್ಬ ವಿದೇಶಿ ...

news

ಗೋಮಾಂಸ ತಿಂದಿದ್ದೇನೆ.. ಕೇಳೋಕೆ ನೀವ್ಯಾರು ಎಂದ ಸಚಿವ ಕಾಗೋಡು ತಿಮ್ಮಪ್ಪ

ಶಿವಮೊಗ್ಗ: ನಾನು ದನದ ಮಾಂಸ ತಿಂದಿದ್ದೇನೆ. ಅದನ್ನು ಕೇಳಲು ನೀವ್ಯಾರು ಎಂದು ಗೋರಕ್ಷಕರಿಗೆ ಸಚಿವ ಕಾಗೋಡು ...

news

ಸಚಿವ ಟಿ.ಬಿ.ಜಯಚಂದ್ರಗೆ ಛೀಮಾರಿ ಹಾಕಿದ ಗ್ರಾಮಸ್ಥರು

ತುಮಕೂರು: ಕಾನೂನುಖಾತೆ ಸಚಿವ ಟಿ.ಬಿ.ಜಯಚಂದ್ರಗೆ ಜಿಲ್ಲೆಯ ಶಿರಾ ತಾಲೂಕಿನ ಚಿರತಹಳ್ಳಿ ಗ್ರಾಮಸ್ಥರು ಛೀಮಾರಿ ...

Widgets Magazine
Widgets Magazine