ಪೆಟ್ರೋಲ್ ತುಂಬಿಕೊಳ್ಳಲು ಮುಗಿಬಿದ್ದ ಜನರು!

ಕಲಬುರಗಿ, ಶನಿವಾರ, 1 ಸೆಪ್ಟಂಬರ್ 2018 (20:13 IST)

ಪೆಟ್ರೋಲ್ ಟ್ಯಾಂಕರ್ ಪಲ್ಟಿಯಾಗಿ ಬಿದ್ದಿದೆ ತಡ, ಜನರು ನಾ ಮುಂದು ತಾ ಮುಂದು ಎಂದು ಟ್ಯಾಂಕರ್ ಸುತ್ತ ಮುಗಿಬಿದ್ದು ಪೆಟ್ರೊಲ್ ತುಂಬಿಕೊಂಡ ಘಟನೆ ನಡೆದಿದೆ.

ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಎಸ್.ಎನ್.ಹಿಪ್ಪರಗಾ ಕ್ರಾಸ್ ಬಳಿ ಪೆಟ್ರೊಲ್ ಟ್ಯಾಂಕರ್ ಪಲ್ಟಿಯಾಗಿದೆ. ಹೀಗಾಗಿ ಜನರು ಮುಗಿಬಿದ್ದು ಪೆಟ್ರೊಲ್ ತುಂಬಿಕೊಂಡರು. ರಾಷ್ಟ್ರೀಯ ಹೆದ್ದಾರಿ 18ರಲ್ಲಿ ಹಿಪ್ಪರಗಾ ಸೇತುವೆ ಬಳಿ ರಿಲಯನ್ಸ್ ಕಂಪನಿಗೆ ಸೇರಿದ ಪೆಟ್ರೋಲ್ ಟ್ಯಾಂಕರ್ ಚಾಲಕನ ನಿಯಂತ್ರಣ ತಪ್ಪಿ ನಡು ರಸ್ತೆಯಲ್ಲಿಯೇ ಪಲ್ಟಿ ಹೊಡೆದಿದೆ.

ವಿಜಯಪುರದಿಂದ ಕಲಬುರಗಿ ಕಡೆಗೆ ಬರುತ್ತಿದ್ದ ಟ್ಯಾಂಕರ್ ಇದಾಗಿತ್ತು. ಸೋರಿ ಹೋಗುತ್ತಿದ್ದ ಪೆಟ್ರೊಲ್ ನನ್ನು ಜನರು ಜೀವದ ಭಯ ಬಿಟ್ಟು ತುಂಬಿಕೊಂಡರು. ಪೊಲೀಸರು, ಅಗ್ನಿ ಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಜನರನ್ನು ನಿಯಂತ್ರಿಸಲು ಹರಸಾಹಸ ಪಟ್ಟರು.

ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಚುನಾವಣೆ ಗಿಮಿಕ್ ಗಾಗಿ ಖರ್ಗೆ ವಿಮಾನ ಹಾರಿಸಿದ್ದಾರೆಂದ ಬಿಎಸ್ ವೈ

ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಹಿನ್ನೆಲೆಯಲ್ಲಿ ಚುನಾವಣೆ ಗಿಮಿಕ್ ಗಾಗಿ ಸಂಸದ ಮಲ್ಲಿಕಾರ್ಜುನ ಖರ್ಗೆ ...

news

ಕೊಪ್ಪಳದಿಂದ ಸ್ಪರ್ಧೆಯಿಲ್ಲ ಎಂದರಾ ಸಿದ್ದು?

ಲೋಕಸಭೆ ಚುನಾವಣೆಗೆ ಸಿದ್ಧತೆಗಳು ಎಲ್ಲ ಪಕ್ಷಗಳೂ ಈಗಿನಿಂದಲೇ ಆರಂಭಿಸಿವೆ. ಏತನ್ಮಧ್ಯೆ ಮಾಜಿ ಮುಖ್ಯಮಂತ್ರಿ ...

news

ಹೈದ್ರಾಬಾದ್ ಕರ್ನಾಟಕ ವಿಮೋಚನಾ ದಿನಾಚರಣೆ ಅರ್ಥಪೂರ್ಣ ಆಚರಣೆಗೆ ತೀರ್ಮಾನ

ಹೈದ್ರಾಬಾದ ಕರ್ನಾಟಕ ವಿಮೋಚನಾ ದಿನವನ್ನು ಕಲಬುರಗಿ ನಗರ ಮತ್ತು ಜಿಲ್ಲೆಯಾದ್ಯಂತ ಸೆಪ್ಟೆಂಬರ್ 17ದಂದು ...

news

ರಾಷ್ಟ್ರ ಧ್ವಜಕ್ಕೆ ಅವಮಾನ: ಪ್ರತಿಭಟನೆ

ಪಂಚಾಯತಿ ಆವರಣದಲ್ಲಿ ದಿನನಿತ್ಯ ಬೆಳಿಗ್ಗೆ ದ್ವಜಾರೋಹಣ ಮಾಡಿ ಸಂಜೆಯ ಹೊತ್ತಿಗೆ ಧ್ವಜವನ್ನು ಇಳಿಸಬೇಕು. ...

Widgets Magazine