ಪ್ರಧಾನಿ ಮೋದಿ ಜೈಲಿಗೆ ಹೋಗಿದ್ದ ಬಿಎಸ್‌ವೈರನ್ನು ಕೇಳಿದ್ರೆ ಹೇಳುತ್ತಿದ್ದರು: ಸಿಎಂ

ಬೆಂಗಳೂರು, ಸೋಮವಾರ, 5 ಫೆಬ್ರವರಿ 2018 (13:28 IST)

ಕರ್ನಾಟಕ ದೇಶದಲ್ಲಿಯೇ ಭ್ರಷ್ಟಾಚಾರದಲ್ಲಿ ನಂಬರ್ ಒನ್ ಸ್ಥಾನದಲ್ಲಿದೆ ಎನ್ನುವ ಮೋದಿ ಹೇಳಿಕೆಗೆ ತಿರುಗೇಟು ನೀಡಿದ ಸಿಎಂ ಸಿದ್ದರಾಮಯ್ಯ, ಬಿಜೆಪಿ ಸರಕಾರವಿದ್ದಾಗ ಯಾವ ರೀತಿ ಭ್ರಷ್ಟಾಚಾರ ನಡೆದಿತ್ತು ಎಂದು ಯಡಿಯೂರಪ್ಪ ಅವರನ್ನೇ  ಕೇಳಿದ್ರೆ ಹೇಳುತ್ತಿದ್ದರು ಎಂದು ಟಾಂಗ್ ನೀಡಿದ್ದಾರೆ.
ವಿಧಾನಸೌಧದಲ್ಲಿ ಆಯೋಜಿಸಲಾದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿ ತಮ್ಮ ಪಕ್ಕದಲ್ಲಿಯೇ ಕುಳಿತಿದ್ದ ಜೈಲಿಗೆ ಹೋಗಿ ಬಂದ ಯಡಿಯೂರಪ್ಪ ಅವರನ್ನು ಭ್ರಷ್ಟಾಚಾರದ ಬಗ್ಗೆ ಕೇಳಬೇಕಾಗಿತ್ತು. ಅವರು ಬಿಜೆಪಿ ಸರಕಾರದಲ್ಲಿ ಯಾವ ರೀತಿ ಭ್ರಷ್ಟಾಚಾರ ನಡೆದಿತ್ತು ಎನ್ನುವ ಬಗ್ಗೆ ಮಾಹಿತಿ ನೀಡಿದ್ದಾರೆ.
 
ಯಾವುದೇ ದಾಖಲೆಗಳಿಲ್ಲದೇ ರಾಜ್ಯ ಸರಕಾರದ ವಿರುದ್ಧ ಆರೋಪ ಮಾಡುವ ಪ್ರಧಾನಿ ಮೋದಿಯದ್ದು ನಾಚಿಕೆಗೇಡಿತನ ಮತ್ತು ಬೇಜವಾಬ್ದಾರಿಯಲ್ಲಯೇ ಮತ್ತೇನು ಅಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
 
ನಿನ್ನೆ ಇಲ್ಲಿ ಮೋದಿ ದೇಶದ ಪ್ರಧಾನಿಯಾಗಿ ಮಾತನಾಡಲಿಲ್ಲ. ಸುಳ್ಳಿನ ಕಂತೆ, ಪೊಳ್ಳಿನ ಆರೋಪ ಮಾಡಿ ಯಡಿಯೂರಪ್ಪ ಲೆವೆಲ್‌ಗೆ ಇಳಿದಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಭ್ರಷ್ಟಾಚಾರಗಳು ಬಹಿರಂಗವಾಗುತ್ತವೆ ಎನ್ನುವ ಕಾರಣದಿಂದ ಪ್ರಧಾನಿ ಮೋದಿ ಗುಜರಾತ್ ಸಿಎಂ ಆಗಿದ್ದಾಗ 9 ವರ್ಷಗಳ ಕಾಲ ಲೋಕಾಯುಕ್ತರನ್ನೇ ನೇಮಿಸಲಿಲ್ಲ. ಇದೀಗ ನಮ್ಮ ವಿರುದ್ಧವೇ ಆರೋಪ ಮಾಡುತ್ತಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.  ಇದರಲ್ಲಿ ಇನ್ನಷ್ಟು ಓದಿ :  
ಪ್ರಧಾನಿ ಮೋದಿ ಸಿಎಂ ಸಿದ್ದರಾಮಯ್ಯ ಬಿ.ಎಸ್.ಯಡಿಯೂರಪ್ಪ ಕಾಂಗ್ರೆಸ್ ಬಿಜೆಪಿ Congress Bjp Pm Modi Cm Siddaramaiah B.s.yeddyurappa

ಸುದ್ದಿಗಳು

news

ರಮ್ಯಾ ಟ್ವೀಟ್ ಗೆ ಶಾಸಕ ಜಮೀರ್ ಅಹಮದ್ ಅಸಮಾಧಾನ!

ಬೆಂಗಳೂರು : ಬಿಜೆಪಿ ಪರಿವರ್ತನಾ ಯಾತ್ರೆ ಸಮಾರೋಪ ಸಮಾರಂಭದಲ್ಲಿ ಪ್ರಧಾನಿ ಮೋದಿ ಅವರ ಹೇಳಿಕೆಗಳನ್ನು ಮಾಜಿ ...

news

ಶಾಲೆಗ ರಜೆ ಘೋಷಿಸಿ ಗುಂಡು ತುಂಡಿನ ಪಾರ್ಟಿ ಮಾಡಿದ ಶಿಕ್ಷಕರು!

ವಿಜಯಪುರ: ಶಿಕ್ಷಕರೊಬ್ಬರು ನಿವೃತ್ತಿ ಹೊಂದಿದ ಹಿನ್ನೆಲೆ ಉಳಿದ ಶಿಕ್ಷಕರೆಲ್ಲಾ ಒಟ್ಟಿಗೆ ಸೇರಿ ಗುಂಡು, ...

news

ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ವಿರುದ್ಧ ವಾಗ್ದಾಳಿ ನಡೆಸಿದ ಸಚಿವ ಸದಾನಂದ ಗೌಡ

ಬೆಂಗಳೂರು : ‘ಮೋದಿ ಆಗಮನದಿಂದ ಹೊಸ ಅಲೆ ಸೃಷ್ಠಿಸಿದೆ’ ಎಂದು ಹೇಳುವುದರ ಮೂಲಕ ಸಚಿವ ಸದಾನಂದ ಗೌಡ ಅವರು ...

news

ಇಂದಿನಿಂದ ವಿಧಾನಮಂಡಲ ಅಧಿವೇಶನ: ಬಜೆಟ್ ಯಾವಾಗ ಗೊತ್ತಾ?

ಬೆಂಗಳೂರು: ಇಂದಿನಿಂದ ವಿಧಾನಮಂಡಲ ಜಂಟಿ ಅಧಿವೇಶನ ಆರಂಭವಾಗುತ್ತಿದ್ದು, ಸದನವನ್ನುದ್ದೇಶಿಸಿ ಮಾತನಾಡಲು ...

Widgets Magazine
Widgets Magazine