ವಜ್ರ ಮಹೋತ್ಸವದ ವಿಶೇಷ ಕಾರ್ಯಕ್ರಮಗಳೇನು

ಬೆಂಗಳೂರು, ಬುಧವಾರ, 25 ಅಕ್ಟೋಬರ್ 2017 (12:15 IST)

ಬೆಂಗಳೂರು: ಅದ್ಭುತ ಶಿಲ್ಪಕಲಾ ವೈಭವ ಹೊಂದಿರುವ ವಿಧಾನಸೌಧಕ್ಕೆ ವಜ್ರ ಮಹೋತ್ಸವದ ಸಂಭ್ರಮ. ಹೀಗಾಗಿ ಅನೇಕ ಕಾರ್ಯಕ್ರಮಗಳು ನಡೆಯಲಿವೆ. ಅವುಗಳ ಕುರಿತಾದ ಮಾಹಿತಿ ಇಲ್ಲಿದೆ.


ಈಗಾಗಲೇ ಜಂಟಿ ಅಧಿವೇಶನವನ್ನುದ್ದೇಶಿಸಿ ರಾಷ್ಟ್ರಪತಿ ರಾಮನಾಥ ಕೋವಿಂದ ಭಾಷಣ ಆರಂಭಿಸಿದ್ದಾರೆ. ಮಧ್ಯಾಹ್ನ 12.30ಕ್ಕೆ ರಾಷ್ಟ್ರಪತಿ ಅವರಿಂದ ವಿಧಾನಪರಿಷತ್ ಸಭಾಂಗಣ ವೀಕ್ಷಿಸಲಿದ್ದಾರೆ. ನಂತರ ಗಾಂಧಿ ಪ್ರತಿಮೆ ಎದುರು ರಾಷ್ಟ್ರಪತಿಗಳೊಂದಿಗೆ ಉಭಯ ಸದನಗಳ ಶಾಸಕರ ಗ್ರೂಪ್ ಫೋಟೊ ಸೆಷನ್‌ ನಡೆಯಲಿದೆ.

ಮಧ್ಯಾಹ್ನ 1.30ಕ್ಕೆ ವಿಧಾನಸೌಧದ ಹುಲ್ಲುಹಾಸಿನ ಮೇಲೆ ಭೋಜನ ವ್ಯವಸ್ಥೆ ಏರ್ಪಡಿಸಲಾಗಿದೆ. ಮಧ್ಯಾಹ್ನ 3ರಿಂದ 5ರವರೆಗೆ ಕಟ್ಟಡ ನಿರ್ಮಾಣ ಕುರಿತಾದ ಸಾಕ್ಷ್ಯಚಿತ್ರ ಹಾಗೂ ವಿಧಾನಮಂಡಲ ಶಾಸನಸಭೆ ನಡೆದುಬಂದ ಹಾದಿ ಸಾಕ್ಷ್ಯಚಿತ್ರ ಪ್ರದರ್ಶನವಿದೆ. ಸಂಜೆ 5ರಿಂದ 6ರವರೆಗೆ ವಿವಿಧ ಜಾನಪದ ಕಲಾ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಸಂಜೆ 6ರಿಂದ 6.30ರವರೆಗೆ ಗೌರವ ಸಮರ್ಪಣೆ, 6.30ರಿಂದ ಹಂಸಲೇಖ ಹಾಗೂ ತಂಡದಿಂದ ರಸಮಂಜರಿ ಕಾರ್ಯಕ್ರಮವಿದೆ. ಸಮಾನಾಂತರವಾಗಿ ವಿಧಾನಸೌಧ ಕಟ್ಟಡದ ಮೇಲೆ 3ಡಿ ಮ್ಯಾಪಿಂಗ್ ಮೂಲಕ ಸರ್ಕಾರದ ಯೋಜನೆಗಳ ಚಿತ್ರ ಪ್ರದರ್ಶನಗೊಳ್ಳಲಿದೆ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಸುರಂಗದಲ್ಲಿ ಪತ್ತೆಯಾಗಿದ್ದು ಶೆರಿನ್ ಶವ: ದೃಢಪಡಿಸಿದ ಪೊಲೀಸರು

ಅಮೆರಿಕ: ಎರಡು ವಾರದ ಹಿಂದೆ ನಾಪತ್ತೆಯಾಗಿದ್ದ ಭಾರತ ಮೂಲದ ಅಮೆರಿಕ ನಿವಾಸಿ ಬಾಲಕಿ ಶೆರಿನ್ ಮ್ಯಾಥ್ಯೂಸ್ ...

news

ಉತ್ತರ ಪ್ರದೇಶ ಸಿಎಂ ಯೋಗಿ ಸಹೋದರ ಗಡಿ ಕಾಯುವ ಯೋಧ!

ನವದೆಹಲಿ: ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಕುಟುಂಬದವರ ಬಗ್ಗೆ ಹೆಚ್ಚಿನವರಿಗೆ ಗೊತ್ತಿಲ್ಲ. ಅಣ್ಣ ...

news

ಚೀನಾಗೆ ಅವರದ್ದೇ ಭಾಷೆಯಲ್ಲಿ ಪಾಠ ಕಲಿಸಲು ಭಾರತೀಯ ಸೇನೆ ಸಜ್ಜು

ನವದೆಹಲಿ: ಡೋಕ್ಲಾಂ ಗಡಿ ವಿವಾದದ ನಂತರ ಚೀನಾ ಗಡಿಯಲ್ಲಿ ಭಾರತೀಯ ಸೈನಿಕರ ಕಾರ್ಯಕ್ಷಮತೆ ಮೇಲ್ದರ್ಜೆಗೇರಿಸಲು ...

news

ಕೊಲ್ಲೂರು ಮೂಕಾಂಬಿಕೆಯ ಕಾಣಿಕೆ ಹುಂಡಿಯಲ್ಲಿ ಸಿಕ್ತು ಕೋಟಿ ಹಣ!

ಮಂಗಳೂರು: ಇದೆಲ್ಲಾ ನವರಾತ್ರಿ ಇಫೆಕ್ಟ್ ಎಂದರೂ ತಪ್ಪಾಗಲಾರದು. ರಾಜ್ಯದ ಶ್ರೀಮಂತ ದೇಗುಲಗಳ ಪೈಕಿ ಒಂದಾದ ...

Widgets Magazine
Widgets Magazine