Widgets Magazine
Widgets Magazine

ಸಚಿವ ಎಂ.ಬಿ.ಪಾಟೀಲರನ್ನ ಮಂಪರು ಪರೀಕ್ಷೆಗೊಳಪಡಿಸಿ: ವಿ.ಸೋಮಣ್ಣ

ಬೆಂಗಳೂರು, ಮಂಗಳವಾರ, 12 ಸೆಪ್ಟಂಬರ್ 2017 (14:52 IST)

Widgets Magazine

ಬೆಂಗಳೂರು: ಚುನಾವಣೆ ಸಮೀಪಿಸುತ್ತಿದ್ದಂತೆ ಲಿಂಗಾಯತರ ಮಧ್ಯೆ ಒಡಕು ಮೂಡಿಸಲು ಸಚಿವ ಎಂ.ಬಿ.ಪಾಟೀಲ್ ಯತ್ನಿಸುತ್ತಿದ್ದಾರೆ. ಅಂತಹ ಪುಣ್ಯಾತ್ಮನಿಗೆ ನೆಮ್ಮದಿ ಸಿಗಂದಂತಾಗಲಿ ಎಂದು ಮಾಜಿ ಸಚಿವ ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಬೆಂಗಳೂರಿನಲ್ಲಿ ಮಾತನಾಡಿದ ಅವರು, ಎಂ.ಬಿ.ಪಾಟೀಲ್ ಸುದ್ದಿಗೋಷ್ಠಿಯಲ್ಲಿ ಸಿದ್ದಗಂಗಾ ಶ್ರೀಗಳ ಹೇಳಿಕೆಯನ್ನು ತಿರುಚಿದ್ದಾರೆ. ಸ್ವಾಮೀಜಿ ಧರ್ಮದ ಪರ ಎಂದಿರುವುದು ಸರಿಯಲ್ಲ. ನೀರಾವರಿ ಸಚಿವರಿಗೆ ಇದು ಶೋಭೆ ತರುವುದಿಲ್ಲ ಎಂದು ಹೇಳಿದ್ದಾರೆ.

ಶ್ರೀಗಳು ಸಮಾಜ ಒಗ್ಗಟ್ಟಿನಿಂದ ಹೋಗಬೇಕೆಂದಿದ್ದಾರೆ. ಸಮಾಜ ಬಾಂಧವರಲ್ಲಿ ನಾನು ವಿನಂತಿ ಮಾಡುತ್ತೇನೆ. ಸಿದ್ದಗಂಗಾ ಶ್ರೀಗಳು ಮಠ ಅಥವಾ ಒಂದು ಸಮಾಜಕ್ಕೆ ಸೀಮಿತವಾಗಿಲ್ಲ. ಎಲ್ಲಾ ವರ್ಗ, ದುರ್ಬಲರಿಗೂ ಆಶ್ರಯದಾತರಾಗಿದ್ದಾರೆ. ಪ್ರತಿ ದಿನ 10 ಸಾವಿರ ಮಕ್ಕಳಿಗೆ ವಿದ್ಯಾದಾನ, ಅನ್ನದಾನ ಮಾಡುತ್ತಿದ್ದಾರೆ. ಅಂತಹ ತಪಸ್ವಿಗಳ ಹೆಸರು ಪದೇ ಪದೇ ಹೇಳುವುದು ಎಷ್ಟರ ಮಟ್ಟಿಗೆ ಸರಿ. ಶ್ರೀಗಳು ತಮ್ಮ ಭಾವನೆಗಳನ್ನು ತಿಳಿಸಿದ್ದಾರೆ. ಎಂ.ಬಿ.ಪಾಟೀಲರು ಆಣೆ ಮಾಡುತ್ತೇನೆ ಎಂದಿದ್ದಾರೆ. ಸಚಿವರಾಗಿ ಮೊದಲು ಆ ಕೆಲಸ ಮಾಡಲಿ. ಮುತ್ಸದ್ದಿಯ ಹೊಟ್ಟೆಯಲ್ಲಿ ಎಂಥವನು ಹುಟ್ಟಿದ್ದಾನೆ ಎಂದು ಕಿಡಿಕಾರಿದ್ದಾರೆ.

2018ರಲ್ಲಿ ಬಿಎಸ್ ವೈ ಸಿಎಂ ಎಂದು ಘೋಷಣೆಯಾದ ಕೂಡಲೇ ಹೊಟ್ಟೆಯುರಿ ಶುರುವಾಗಿದೆ. ನಮ್ಮ ಧರ್ಮ ಕಾಪಾಡಲು ಮಹಾಸಭಾ, ಸ್ವಾಮೀಜಿಗಳು ಇದ್ದಾರೆ. ಹೀಗಿರುವಾಗ ಏಕೆ ಪಾಟೀಲರು ಹೀಗೆ ಮಾತನಾಡುತ್ತಾರೆ. ಸಮಾಜ ಇಬ್ಭಾಗ ಮಾಡುವುದು ಒಳಿತಲ್ಲ ಎಂದಿದ್ದಾರೆ. ಅವರು ಸಮಾಜವನ್ನು ಗೊಂದಲಕ್ಕೀಡು ಮಾಡಿದ್ದಾರೆ. ಅವರನ್ನು ಮಂಪರು ಪರೀಕ್ಷೆಗೊಳಪಡಿಸಬೇಕು. ಸಚಿವರ ಗಾಂಭೀರ್ಯತೆ ಬಿಟ್ಟು ಮಾತಾಡುತ್ತಿದ್ದಾರೆ. ವೀರಶೈವ ಮಹಾಸಭಾ ಎಲ್ಲವನ್ನೂ ನೊಡಿಕೊಳ್ಳಲಿದೆ. ನಮ್ಮ ಸಮಾಜವನ್ನು ಬೀದಿಗೆ ತರೋರಿಗೆ ಬುದ್ಧಿ ಹೇಳಬೇಕು. ಇಂದು ಸಂಜೆ 5 ಕ್ಕೆ ವೀರಶೈವ ಮಹಾಸಭಾದಿಂದ ಶ್ರೀಗಳನ್ನು ಭೇಟಿಯಾಗಿ ಈ ಕುರಿತು ಚರ್ಚಿಸುವುದಾಗಿ ತಿಳಿಸಿದ್ದಾರೆ.Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಎಲ್ಲೆಂದರಲ್ಲಿ ಕಾರ್ಡ್ ಸ್ವೈಪ್ ಮಾಡ್ತೀರಾ..? ಹಾಗಿದ್ದರೆ ಈ ಸುದ್ದಿ ತಪ್ಪದೇ ನೋಡಿ

ಪುಣೆಯ ವ್ಯಕ್ತಿಯೊಬ್ಬ ಟೋಲ್ ಗೇಟ್`ನಲ್ಲಿ ಕಾರ್ಡ್ ಸ್ವೈಪ್ ಮಾಡಿ 87,000 ರೂ. ಕಳೆದುಕೊಂಡಿರುವ ಘಟನೆ ...

news

ಲಿಂಗಾಯುತ-ವೀರಶೈವ ಎರಡು ಪದಗಳ ಅರ್ಥ ಒಂದೇ: ಸಿದ್ದಗಂಗಾಮಠ

ಬೆಂಗಳೂರು: ವೀರಶೈವ ಪದವನ್ನು ವಿದ್ಯಾವಂತರು ಬಳಸುತ್ತಾರೆ. ಗ್ರಾಮೀಣ ಪ್ರದೇಶಗಳಲ್ಲಿ ಲಿಂಗಾಯುತ ಪದ ...

news

BBMPಯಲ್ಲಿ ಜೆಡಿಎಸ್ ಜತೆ ಮೈತ್ರಿ ಮುಂದುವರೆಯುತ್ತೆ: ರಾಮಲಿಂಗಾರೆಡ್ಡಿ

ಬೆಂಗಳೂರು: ಬಿಬಿಎಂಪಿಯಲ್ಲಿ ಮತ್ತೆ ಜೆಡಿಎಸ್ ಜತೆ ಕಾಂಗ್ರೆಸ್ ಮೈತ್ರಿ ಮುಂದುವರೆಯುತ್ತೆ ಎಂದು ಗೃಹ ಸಚಿವ ...

news

ಎಂಎಲ್‌ಸಿ‌ಗಳ ಪ್ರತಿಭಟನೆ: ಸರಕಾರದ ಧೋರಣೆಗೆ ಜಗದೀಶ್ ಶೆಟ್ಟರ್ ಕಿಡಿ

ಶಿಕ್ಷಕರ ಕ್ಷೇತ್ರದ ಸಮಸ್ಯೆಗಳ ಬಗೆಹರಿಸಲು ಶಿಕ್ಷಕರು ಹಗಲಿರಲು ಹೋರಾಟ ನಡೆಸುತ್ತಿದ್ದರೂ ಸರಕಾರದ ಮೌನ ...

Widgets Magazine Widgets Magazine Widgets Magazine