ಮಾಜಿ ಚುನಾವಣಾಧಿಕಾರಿ ಶೇಷನ್ ಗೆ ಈಗ ಈ ಪರಿಸ್ಥಿತಿ!

ನವದೆಹಲಿ, ಶುಕ್ರವಾರ, 12 ಜನವರಿ 2018 (08:57 IST)

ನವದೆಹಲಿ: ಭಾರತದ ಚುನಾವಣೆ ಪ್ರಕ್ರಿಯೆಯಲ್ಲಿ ಹೊಸ ಬದಲಾವಣೆಗಳ ಹರಿಕಾರ ಎಂದೇ ಖ್ಯಾತರಾಗಿದ್ದ ಮಾಜಿ ಮುಖ್ಯ ಚುನಾವಣಾಧಿಕಾರಿ ಟಿಎನ್ ಶೇಷನ್ ಇದೀಗ ವೃದ್ಧಾಶ್ರಮದಲ್ಲಿ ದಿನ ಕಳೆಯುತ್ತಿದ್ದಾರೆ!
 

ಮಕ್ಕಳಿಲ್ಲದ 85 ವರ್ಷದ ಶೇಷನ್ ದಂಪತಿ ತಮಿಳುನಾಡಿನ ರಾಜಧಾನಿ ಚೆನ್ನೈಯಲ್ಲಿರುವ ಗುರುಕುಲಂ ವೃದ್ಧಾಶ್ರಮದಲ್ಲಿ ದಿನ ಕಳೆಯುತ್ತಿದ್ದಾರೆ. ಶೇಷನ್ ಮತ್ತು ಪತ್ನಿ ಹಲವು ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದು, ವೃದ್ಧಾಶ್ರಮದಲ್ಲಿ ದಿನಕಳೆಯುತ್ತಿದ್ದಾರೆ.
 
ಇಬ್ಬರೂ ಕೇರಳದ ಪಾಲಕ್ಕಾಡಿನಲ್ಲಿ ಸ್ವಂತ ಮನೆ ಹೊಂದಿದ್ದಾರೆ. ಆದರೆ ನೋಡಿಕೊಳ್ಳುವವರಿಲ್ಲದ ಕಾರಣ, ನೆಮ್ಮದಿಯಿಂದ ಜೀವನ ಮಾಡಲು ಸೇರಿಕೊಂಡಿದ್ದಾರೆ ಎನ್ನಲಾಗಿದೆ. ತಮ್ಮ ಪಿಂಚಣಿ ಹಣದಿಂದ ತಮ್ಮ ಜತೆಗಿರುವ ವೃದ್ಧಾಶ್ರಮದ ಸದಸ್ಯರಿಗೂ ದಂಪತಿ ಆರ್ಥಿಕವಾಗಿ ನೆರವಾಗುತ್ತಿದ್ದಾರಂತೆ. ತಮ್ಮಅಧಿಕಾರಾವಧಿಯಲ್ಲಿ ನಿರ್ಬೀಡೆಯಿಂದ ಕರ್ತವ್ಯ ನಿರ್ವಹಿಸಿದ ಶೇಷನ್ ಇಂದು ಯಾರಿಗೂ ಹೊರೆಯಾಗಲು ಇಷ್ಟಪಡದೆ ವೃದ್ಧಾಶ್ರಮ ಸೇರಿಕೊಂಡಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಚೀನಾ, ಅಮೆರಿಕಾ ಅಧ್ಯಕ್ಷರನ್ನು ಮೀರಿಸಿದ ಪ್ರಧಾನಿ ಮೋದಿ ಹೊಸ ದಾಖಲೆ!

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಹೊಸದೊಂದು ದಾಖಲೆ ಮಾಡಿದ್ದಾರೆ. ಪ್ರಪಂಚದ ಅತೀ ಜನಪ್ರಿಯ ನಾಯಕರ ...

news

ಸನ್ನಿ ಲಿಯೋನ್ ಕಾರ್ಯಕ್ರಮಕ್ಕೆ ಕರವೇ ಲಂಚ ತೆಗೆದುಕೊಂಡಿತೇ?!

ಬೆಂಗಳೂರು: ಸದಾ ಕನ್ನಡ ನಾಡು ನುಡಿ ವಿಚಾರದಲ್ಲಿ ಹೋರಾಟಕ್ಕಿಳಿಯುವ ಕರ್ನಾಟಕ ರಕ್ಷಣಾ ವೇದಿಕೆ ವಿರುದ್ಧ ...

news

ಇಂದು ಸಕ್ಕರೆ ನಾಡಿನಲ್ಲಿ ಸಿಎಂ ಸಾಧನಾ ಸಮಾವೇಶ

ಮಂಡ್ಯ: ಸಿಎಂ ಸಿದ್ದರಾಮಯ್ಯ ಇಂದು ಸಕ್ಕರೆ ನಾಡು ಮಂಡ್ಯದಲ್ಲಿ ತಮ್ಮ ಸರ್ಕಾರದ ಸಾಧನಾ ಸಮಾವೇಶದಲ್ಲಿ ...

news

ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಹುದ್ದೆಗೆ ನೇರವಾಗಿ ನೇಮಕವಾಗಲಿರುವ ಮೊದಲ ಮಹಿಳೆ ಯಾರು ಗೊತ್ತಾ...?

ನವದೆಹಲಿ: ಹಿರಿಯ ವಕೀಲರಾದ ಇಂದು ಮಲ್ಹೋತ್ರಾ ಅವರನ್ನು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಹುದ್ದೆಗೆ ...

Widgets Magazine