ಕ್ರೀಡಾ ಇಲಾಖೆಯ ಸಚಿವರಾಗಲು ಇವರಿಗಿಂತ ಉತ್ತಮರು ಇರಬಹುದೇ?!

ನವದೆಹಲಿ, ಸೋಮವಾರ, 4 ಸೆಪ್ಟಂಬರ್ 2017 (08:14 IST)

Widgets Magazine

ನವದೆಹಲಿ: ಕೊನೆಗೂ ಕ್ರೀಡಾ ಇಲಾಖೆಯ ಚುಕ್ಕಾಣಿ ಹಿಡಿಯುವುದಕ್ಕೆ ಸಮರ್ಥ ಕ್ರೀಡಾಳುವೇ ಬಂದಿದ್ದಾರೆ. ಇದು ಕ್ರೀಡಾಳುಗಳ ಪಾಲಿಗೆ ಶುಭ ಸೂಚನೆಯೇ.


 
ದೇಶದ ನೂತನ ಕ್ರೀಡಾ ಸಚಿವರಾಗಿ ಒಲಿಂಪಿಕ್ ಬೆಳ್ಳಿ ಪದಕ ವಿಜೇತ ಶೂಟರ್ ರಾಜ್ಯವರ್ಧನ್ ಸಿಂಗ್ ರಾಥೋಡ್ ಆಯ್ಕೆಯಾಗಿದ್ದಾರೆ. ಪ್ರಧಾನಿ ಮೋದಿ ನಿನ್ನೆಯಷ್ಟೇ ತಮ್ಮ ಸಂಪುಟವನ್ನು ಮತ್ತೆ ಪುನರ್ ರಚಿಸಿದ್ದರು.
 
ಈ ಸಂದರ್ಭದಲ್ಲಿ ಇದೀಗ ಮಾಹಿತಿ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವರಾಗಿ ಸೇವೆ ಸಲ್ಲಿಸುತ್ತಿದ್ದ ರಾಜ್ಯವರ್ಧನ್ ಸಿಂಗ್ ಗೆ ಬಡ್ತಿ ನೀಡಿ ಕ್ರೀಡಾ ಸಚಿವರಾಗಿ ನೇಮಕ ಮಾಡಿದ್ದಾರೆ. ರಾಜಕಾರಣಿಯಾಗುವ ಮೊದಲು ಸೆನೆಯಲ್ಲಿ ಸೇವೆ ಸಲ್ಲಿಸಿದ್ದ ಇವರು ಸಾಕಷ್ಟು ಕಷ್ಟಪಟ್ಟು ಮೇಲೆ ಬಂದವರು.
 
ಹಾಗಾಗಿ ಇವರಿಗೆ ದೇಶದ ಕ್ರೀಡಾಳುಗಳ ಸಂಕಷ್ಟಗಳ ಅರಿವು ಇರುತ್ತದೆ. ರಾಥೋಡ್ ಕ್ರೀಡಾ  ಸಚಿವರಾಗಿ ನೇಮಕವಾಗುತ್ತಿದ್ದಂತೆ ಸಹ ಆಟಗಾರ ಅಭಿನವ್ ಬಿಂದ್ರಾ ಮುಕ್ತ ಕಂಠದಿಂದ ಅಭಿನಂದಿಸಿದ್ದಾರೆ. ರಾಜ್ಯವರ್ಧನ್ ಆಯ್ಕೆ ದೇಶದ ಕ್ರೀಡಾ ಪಟುಗಳಲ್ಲಿ ಹೊಸ ಆಶಾಕಿರಣ ಮೂಡಿಸಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಕ್ರಿಕೆಟ್‌

news

ಮಲಿಂಗ ಮನೆಯಲ್ಲಿ ರಾತ್ರಿ ಕಳೆದ ಟೀಂ ಇಂಡಿಯಾ ಆಟಗಾರರು

ಕೊಲೊಂಬೊ: ಐಪಿಎಲ್ ದೆಸೆಯಿಂದಾಗಿ ಟೀಂ ಇಂಡಿಯಾ ಆಟಗಾರರಿಗೆ ಶ್ರೀಲಂಕಾ ತಂಡದ ಆಟಗಾರರೂ ಉತ್ತಮ ...

news

ಲಂಕಾದ ಭವಿಷ್ಯ ಟೀಂ ಇಂಡಿಯಾ ಕೈಯಲ್ಲಿ!

ಕೊಲೊಂಬೊ: ಟೀಂ ಇಂಡಿಯಾ ವಿರುದ್ಧ ನಾಲ್ಕೂ ಏಕದಿನ ಪಂದ್ಯಗಳನ್ನು ಸೋತು ಸುಣ್ಣವಾಗಿರುವ ಶ್ರೀಲಂಕಾಗೆ ಇಂದು ...

‘ನಾನಲ್ಲ ತಂಡದ ಬಾಸ್ ಯಾವತ್ತಿದ್ರೂ ವಿರಾಟ್ ಕೊಹ್ಲಿ’

ಕೊಲೊಂಬೊ: ಟೀಂ ಇಂಡಿಯಾದಲ್ಲಿ ಯಾರ ಮಾತು ನಡೆಯೋದು? ಕೋಚ್ ಹೇಳಿದ್ದಾ? ನಾಯಕನದ್ದಾ? ಅದಕ್ಕೆ ಕೋಚ್ ...

news

ಧೋನಿ ಭವಿಷ್ಯದ ಬಗ್ಗೆ ರವಿಶಾಸ್ತ್ರಿ ಹೇಳಿದ್ದೇನು?

ಕೊಲೊಂಬೊ: ಧೋನಿ ಮುಂದಿನ ವಿಶ್ವಕಪ್ ನಲ್ಲಿ ಆಡುತ್ತಾರೋ ಇಲ್ಲವೋ ಎಂಬ ಗೊಂದಲಗಳಿಗೆ ಟೀಂ ಇಂಡಿಯಾ ಕೋಚ್ ರವಿ ...

Widgets Magazine