ಮುಖ್ಯ ಪುಟ  ಮನರಂಜನೆ > ಪ್ರವಾಸೋದ್ಯಮ > ಕರ್ನಾಟಕ ದರ್ಶನ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಆಕಾಶದಾಗೆ ಯಾರೊ ಹೋಟೆಲ್‌ಗಾರನೋ... !
PTI
ಜನರನ್ನು ಅಪಾಯದಿಂದ ಸಂರಕ್ಷಿಸಲು ಭಾರಿ ಪ್ರಮಾಣದಲ್ಲಿ ಆಗಸದಲ್ಲಿ ಹಾರುವ ನೌಕೆಗಳನ್ನು ಒಳಗೊಂಡಿರುವ ಇಂಗ್ಲಿಷ್ ಟಿವಿ ಸರಣಿ "ಥಂಡರ್ ಬರ್ಡ್ಸ್" ನೆನಪಾಗಬಹುದು ನಿಮಗೆ. ಈ ಪ್ರದರ್ಶನವು ಸಾಕಷ್ಟು ಚಲನಚಿತ್ರಗಳಿಗೆ ಪ್ರೇರಣೆಯಾಗಿದ್ದು ಮಾತ್ರವೇ ಅಲ್ಲ, ವಾಸ್ತವ ಜಗತ್ತನ್ನೂ ಇದು ಪ್ರೇರೇಪಿಸಿದೆ ಎಂದರೆ ಅಚ್ಚರಿಯಾಗಲೇಬೇಕು.

ಮಸ್ಸಾದ್ ಎಂಬ ಫ್ರೆಂಚ್ ಕಂಪನಿ, ಈ ವಾಸ್ತವಿಕ ಜಗತ್ತಿನ ಸಾಹಸಕ್ಕೆ ಇಳಿದಿದೆ. 'ಮ್ಯಾನ್‌ಡ್ ಕ್ಲೌಡ್' (ಮೋಡದಲ್ಲಿ ಮಾನವ) ಎಂಬ ತೇಲುವ ವಾಯುನೌಕೆಯ ಹೋಟೆಲನ್ನು ಅದು ತೆರೆಯಲಿದ್ದು, ಈ ಹಾರಾಡುವ ಹೋಟೆಲ್ ಹತ್ತು ದಿನಗಳಲ್ಲಿ ಜಗತ್ತನ್ನು ಸುತ್ತಲಿದೆ.

ವಿಶೇಷ ರಜಾಕಾಲದ ಮಜಾ ಉಡಾಯಿಸಲು ನೀವು ಯೋಚಿಸುತ್ತಿದ್ದರೆ, ಇದಕ್ಕಾಗಿ ಸಾಕಷ್ಟು ವರ್ಷ ಕಾಯಲೇಬೇಕು. ಯಾಕೆಂದರೆ ಈ ಕನಸಿನ ಯೋಜನೆ ಸಾಕಾರಗೊಳ್ಳುವುದು 2020ರ ಆಸುಪಾಸಿಗೆ.

ಈ ಒಂದು ಯೋಜನೆಯ ಕುರಿತಾಗಿ ವಿನ್ಯಾಸಕಾರ ಜೀನ್ ಮಾರೀ ಮಸ್ಸಾದ್ ಅವರ ತಂಡವು ಫ್ರಾನ್ಸ್‌ನ ರಾಷ್ಟ್ರೀಯ ವೈಮಾನಿಕ ಸಂಶೋಧನಾ ಕೇಂದ್ರದ ಸಹಾಯದೊಂದಿಗೆ 2005ರಿಂದಲೇ ಪ್ರಯೋಗ ಆರಂಭಿಸಿದೆ.

ಅದೇ ಹಳೆಯ ಹೋಟೆಲ್‌ಗಳಲ್ಲಿ ಉಳಿದುಕೊಂಡು ಕೆರಿಬಿಯನ್ ಅಥವಾ ಥಾಯ್ಲೆಂಡ್‌ನ ಆಕರ್ಷಕ ತಾಣಗಳನ್ನು ನೋಡುತ್ತಿದ್ದ ಪ್ರವಾಸಿಗರಿಗೆ ಇದೊಂದು ವಿಶಿಷ್ಟ ಅನುಭವ ನೀಡಲಿದೆ. 'ಮೋಡದಲ್ಲಿ ಮಾನವ' ಕಾನ್ಸೆಪ್ಟ್‌ನಡಿ, ವಿಶಿಷ್ಟ ವಿಮಾನವು ನೈಸರ್ಗಿಕವಾದ ರಮಣೀಯ ರಜಾದಿನಗಳ ಅನುಭವ ನೀಡಲಿದೆ, ಆದರೆ ಈ 'ಹಾರುವ ಹೋಟೆಲ್'ನ ಒಂದು ರಾತ್ರಿಯ ವೆಚ್ಚ ಮಾತ್ರ ಸಖತ್ ತುಟ್ಟಿ ಇರಲಿದೆ.

ಸುಮಾರು 40 ಮಂದಿಯನ್ನು ಈ ವಿಮಾನವು ಮೇಲಕ್ಕೇರಿಸುವ ಸಾಮರ್ಥ್ಯ ಹೊಂದಿರುತ್ತದೆ. 700 ಅಡಿ ಉದ್ದ, 270 ಅಡಿ ಅಗಲ ಮತ್ತು 170 ಅಡಿ ಎತ್ತರವಿರುವ ಈ ವೈಮಾನಿಕ ಹೋಟೆಲ್, ಗಂಟೆಗೆ 80 ಮೈಲಿ ವೇಗದಲ್ಲಿ ಸಾಗಲಿದ್ದು, ತೇಲುವ ಅನುಭವ ನೀಡುತ್ತದೆ ಎನ್ನುತ್ತಾರೆ ಅದರ ವಿನ್ಯಾಸಕಾರರು.

ಇದು 18 ಸಾವಿರ ಅಡಿಗಳ ಎತ್ತರದಲ್ಲಿ ಹಾರಾಡಲಿದ್ದು, 20 ಕೊಠಡಿಗಳಿರುತ್ತವೆ. ರೆಸ್ಟಾರೆಂಟ್, ಲೈಬ್ರರಿ, ಲಾಂಜ್, ಜಿಮ್, 20 ಕೊಠಡಿಗಳು, ಸೌಂದರ್ಯ ವೀಕ್ಷಣೆಗೆ ಟೆರೇಸ್, ಪುಟ್ಟ ಕಾರಂಜಿ, ಬಾರ್... ಎಲ್ಲವೂ ಇರುವ ಈ ಹಾರುವ ಹೋಟೆಲ್ ಪೂರ್ಣ ತೃಪ್ತಿಯ ಭರವಸೆ ಮೂಡಿಸಿದೆ.

10-12 ವರ್ಷಗಳ ನಂತರ ಸಾಕಾರಗೊಳ್ಳಲಿರುವ ಈ ಕನಸಿನ ಪ್ರವಾಸಕ್ಕೆ ಕಿಸೆ ಗಟ್ಟಿಯಾಗಿದ್ದರೆ ಈಗಲೇ ಹೊರಡಿ ಸಿದ್ಧವಾಗಿರಿ!
ಮತ್ತಷ್ಟು
ಮಹಾಬಲಿಪುರದ ಶಿಲ್ಪಕಲಾವೈಭವ
ಹನಿಮೂನ್‌ಗೆ ಮೊದಲ ಹೆಸರು ಕೊಡೈಕೆನಾಲ್
ಅರಕು ಕಣಿವೆಯ ರಮಣೀಯ ತಾಣ
ದಕ್ಷಿಣ ಕಾಶ್ಮೀರ, ಭಾರತದ ಸ್ಕಾಟ್ಲೆಂಡ್ - ಬೆಡಗಿನ ಕೊಡಗು
ಕೇರಳದಲ್ಲಿ ತಂಗುವ ವಿಶೇಷ ಪ್ಯಾಕೇಜ್ ಗೆಲ್ಲಿರಿ...
ದಕ್ಷಿಣಭಾರತ ಪ್ರವಾಸೋದ್ಯಮಕ್ಕೆ ಉತ್ತೇಜನ