ಆರ್ಎಸ್ಎಸ್ ಎಂಬುದು ‘ರಿಯಲೀ ಸಿಂಪಲ್ ಸಿಂಡಿಕೇಶನ್’ ಎಂಬುದರ ಹೃಸ್ವ ರೂಪ. ಇದು ಪತ್ರಿಕೆಗಳು, ಮ್ಯಾಗಜಿನ್‌ಗಳು ಹಾಗೂ ಬ್ಲಾಗ್‌ಗಳು ಸೇರಿದಂತೆ ವೆಬ್‌ಸೈಟ್‌ಗಳಿಂದ ನಮಗೆ ಬೇಕಾಗಿರುವ ವಿಷಯಗಳನ್ನು ಪಡೆದುಕೊಳ್ಳುವ ಅತ್ಯಂತ ಸರಳ ವಿಧಾನಗಳಲ್ಲೊಂದು.
ಇಂಟರ್ನೆಟ್ ಜಗತ್ತಿನಲ್ಲಿ ಲಭ್ಯವಿರುವ ಯಾವುದೇ ಸುದ್ದಿ ಅಥವಾ ಇತರ ಮಾಹಿತಿಗಳನ್ನು ಸಂಗ್ರಹಿಸಲು ಮತ್ತು ನೋಡಲು ಆರ್ಎಸ್ಎಸ್ ಉಪಯೋಗವಾಗುತ್ತದೆ. ಅವುಗಳಲ್ಲಿ ಲಿಂಕ್‌ಗಳು, ಶೀರ್ಷಿಕೆಗಳು ಮತ್ತು ಸಂಕ್ಷಿಪ್ತ ವಿವರಣೆಗಳೂ ಇರಬಹುದು. ಇತ್ತೀಚಿನ ದಿನಗಳಲ್ಲಿ, ಹೆಚ್ಚಿನ ವೆಬ್‌ಸೈಟ್‌ಗಳು ಸುದ್ದಿ ಮತ್ತು ಮಾಹಿತಿಯನ್ನು ಆರ್ಎಸ್ಎಸ್ ಫೀಡ್ ಮೂಲಕವೇ ಒದಗಿಸುತ್ತವೆ.
ಇದೀಗ ವೆಬ್‌ದುನಿಯಾ ಕನ್ನಡ ಪೋರ್ಟಲ್ ಕೂಡ ಆರ್ಎಸ್ಎಸ್ ಸೌಲಭ್ಯವನ್ನು ಒದಗಿಸಲು ಮುಂದಾಗಿದ್ದು, ನಿಮ್ಮ ನೆಚ್ಚಿನ ಲೇಖನಗಳು/ಕಥನಗಳು ನಿಮಗೆ ಬೇಕೆನಿಸಿದಾಗ ದೊರೆಯುವಂತಾಗಲಿದೆ. ಯಾವುದೇ ಆರ್ಎಸ್ಎಸ್ ನ್ಯೂಸ್ ರೀಡರ್ ಸಾಫ್ಟ್‌ವೇರನ್ನು ಬಳಸಿ ನೀವು ವೆಬ್‌ದುನಿಯಾ ಪೋರ್ಟಲ್‌ನ ಈ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ.