ಮುಖ್ಯ ಪುಟ > ಕ್ರೀಡಾ ಜಗತ್ತು > ಇತರ ಕ್ರೀಡೆಗಳು > ಕ್ರೀಡಾಸುದ್ದಿ > 'ಡಬಲ್ಸ್'ಗೆ ಅಣಿಯಾಗುತ್ತಿರುವ ಮದುವಣಗಿತ್ತಿ ಸಾನಿಯಾ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
'ಡಬಲ್ಸ್'ಗೆ ಅಣಿಯಾಗುತ್ತಿರುವ ಮದುವಣಗಿತ್ತಿ ಸಾನಿಯಾ
ಕೋಟ್ಯಂತರ ಕಣ್ಣುಗಳನ್ನು ತನ್ನತ್ತ ಸೆಳೆಯುವಂತೆ ಮಾಡಿ ಭಾರತೀಯ ಟೆನಿಸ್‌ಗೆ ಹೊಸ ಭಾಷ್ಯ ಬರೆದ ಸಾನಿಯಾ ಮಿರ್ಜಾ ತನ್ನ ಜೀವನದ 'ಸಿಂಗಲ್ಸ್' ಆಟವನ್ನು ಕೊನೆಗೊಳಿಸುವ ಹಾದಿಯಲ್ಲಿದ್ದಾರೆ.

ಹೈದರಾಬಾದ್ ಉದ್ಯಮಿಯ ಪುತ್ರ, ಬಾಲ್ಯದ ಗೆಳೆಯ 23ರ ಸೊಹ್ರಾಬ್ ಮಿರ್ಜಾ ಜತೆ ನಗರದ 'ತಾಜ್ ಕೃಷ್ಣ' ಐಷಾರಾಮಿ ಹೊಟೇಲ್‌ನಲ್ಲಿ 22ರ ಬೆಡಗಿ ಸಾನಿಯಾ ಶುಕ್ರವಾರ ರಾತ್ರಿ 8.30ಕ್ಕೆ ಉಂಗುರ ಬದಲಾಯಿಸಿಕೊಳ್ಳುವ ಮೂಲಕ 'ಡಬಲ್ಸ್' ಬಾಳ್ವೆಗೆ ಸಿದ್ಧರಾಗಲಿದ್ದಾರೆ.

ಇಂದು ನಿಶ್ಚಿತಾರ್ಥ ಮಾಡಿಕೊಳ್ಳಲಿರುವ ಸಾನಿಯಾ ಮದುವೆ ಆರು ತಿಂಗಳ ನಂತರ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಮದುವೆ ದಿನಾಂಕವನ್ನು ನಿಶ್ಚಿತಾರ್ಥದ ನಂತರ ಪ್ರಕಟಿಸುವ ಸಾಧ್ಯತೆಗಳಿವೆ.
Sania Mirza
PTI

ಆದಿಲ್ ಮಿರ್ಜಾ ಮತ್ತು ನೂರಾ ಬೇಗಮ್‌ರವರ ಪುತ್ರ ಸೊಹ್ರಬ್ ಮಿರ್ಜಾ. ಇವರು ಹೈದರಾಬಾದ್‌ನ ಹಲವೆಡೆ 'ಯುನಿವರ್ಸಲ್ ಬೇಕರ್ಸ್' ಎಂಬ ಸಮೂಹ ಬೇಕರಿಯನ್ನು ನಡೆಸುತ್ತಿದ್ದಾರೆ.

ಪ್ರಸಕ್ತ ಎಂಬಿಎ ವಿದ್ಯಾಭ್ಯಾಸ ಮಾಡುತ್ತಿರುವ ಸೊಹ್ರಾಬ್ ನಿಶ್ಚಿತಾರ್ಥದ ನಂತರವೂ ಸಾನಿಯಾ ಆಟವನ್ನು ಮುಂದುವರಿಸಲು ಪ್ರೋತ್ಸಾಹ ನೀಡುವುದಾಗಿ ಈಗಾಗಲೇ ಹೇಳಿಕೊಂಡಿದ್ದಾರೆ. ಎರಡೂ ಕುಟುಂಬಗಳು ಕಳೆದೊಂದು ದಶಕದಿಂದ ನಿಕಟ ಸಂಬಂಧ ಹೊಂದಿರುವ ಕಾರಣ ಮತ್ತು ಇಬ್ಬರೂ ಬಾಲ್ಯ ಸ್ನೇಹಿತರಾಗಿರುವುದರಿಂದ ಟೆನಿಸ್‌ಗೆ ತೊಂದರೆಯಾಗದು ಎಂಬ ಅಭಿಪ್ರಾಯ ಕೇಳಿ ಬಂದಿದೆ.

ನಿಶ್ಚಿತಾರ್ಥ ಸಮಾರಂಭಕ್ಕೆ ಆಯ್ದ ಕೆಲವರನ್ನು ಮಾತ್ರ ಆಹ್ವಾನಿಸಲಾಗಿದೆ. ಕ್ರೀಡಾಪಟುಗಳಾದ ಸಚಿನ್ ತೆಂಡೂಲ್ಕರ್, ಮೊಹಮ್ಮದ್ ಅಜರುದ್ದೀನ್, ಮಹೇಶ್ ಭೂಪತಿ ಮುಂತಾದವರು ಕಾರ್ಯಕ್ರಮಕ್ಕೆ ಆಗಮಿಸುವ ಸಾಧ್ಯತೆಗಳಿವೆ. ಚಿತ್ರನಟ ಚಿರಂಜೀವಿ ಆಗಮನ ನಿಚ್ಚಳ ಎಂದೂ ಮೂಲಗಳು ತಿಳಿಸಿವೆ.

" ಇದು ಸಾರ್ವಜನಿಕ ಪ್ರದರ್ಶನವಲ್ಲ. ಇದು ಸಂಪೂರ್ಣ ಖಾಸಗಿ ವಿಚಾರ. ದಯವಿಟ್ಟು ಮಾಧ್ಯಮಗಳು ನಮ್ಮೊಂದಿಗೆ ಸಹಕರಿಸಬೇಕೆಂದು ನಾವು ಮನವಿ ಮಾಡಿಕೊಳ್ಳುತ್ತಿದ್ದೇವೆ" ಎಂದು ಸಾನಿಯಾ ತಂದೆ ಇಮ್ರಾನ್ ಮಿರ್ಜಾ ಮನೆಯ ಹೊರಗಡೆ ನೆರೆದಿದ್ದ ಪತ್ರಕರ್ತರಿಗೆ ಇದೇ ಸಂದರ್ಭದಲ್ಲಿ ಮನವಿ ಮಾಡಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಇಂದಿನಿಂದ ಡೇವಿಸ್ ಕಪ್ ವಿಶ್ವ ಗ್ರೂಪ್ ಹಣಾಹಣಿ
ಗೋಲ್ಡ್ ಕಪ್: ಡ್ರಾ ಪಂದ್ಯದಲ್ಲಿ ಮೆಕ್ಸಿಕೊ
ನಿಲ್ಲದ ಪೆಲ್ಪ್ಸ್ 'ವಿಶ್ವದಾಖಲೆ' ಅಭಿಯಾನ
ಬಿಲಿಯರ್ಡ್ಸ್: ಶೇರಾಜಿಗೆ ಪ್ರಶಸ್ತಿ
ಟೆನಿಸ್ ಆಟಗಾರನಿಗೆ ನಿಷೇಧ
ಬಾಕ್ಸಿಂಗ್ ಫ್ರಾಂಚೈಸಿ ವಿಡಿಯೋಕಾನ್ ಮಡಿಲಿಗೆ