ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಭರ್ಜರಿ ಕುತೂಹಲ ಸೃಷ್ಟಿಸಿರುವ 'ದೇವನಹಳ್ಳಿ' (Devanahalli | Pallaki Radhakrishna | Radhika | Kumaraswamy)
ಸುದ್ದಿ/ಗಾಸಿಪ್
Feedback Print Bookmark and Share
 
Devanahalli
MOKSHA
ಬೆಂಗಳೂರು ಸಮೀಪದ ದೇವನಹಳ್ಳಿಯಲ್ಲಿ ಅಂತಾರಾಷ್ಟ್ತ್ರೀಯ ವಿಮಾನ ನಿಲ್ದಾಣ ಪ್ರಾರಂಭವಾದಂದಿನಿಂದಲೂ ಆ ಹೆಸರು ಒಂದಿಲ್ಲೊಂದು ವಿವಾದಗಳಿಗೆ ಗುರಿಯಾಗುತ್ತಲೇ ಇದೆ ಎಂಬುದು ಸೋಜಿಗದ ಸಂಗತಿ. ಈಗ ಎದ್ದಿರುವುದು ವಿವಾದವಲ್ಲ. ಆದರೆ ಅದೇ ಹೆಸರನ್ನು ಹೊತ್ತುಕೊಂಡು ಬರುತ್ತಿರುವ, ಅಂದರೆ, ದೇವನಹಳ್ಳಿ ಎಂಬ ಚಲನಚಿತ್ರವು ಸಾಕಷ್ಟು ಕುತೂಹಲವನ್ನಂತೂ ಕೆರಳಿಸಿದೆ.

ಈ ಚಿತ್ರದಲ್ಲಿನ 'ಲಂಡನ್‌ನಲ್ಲಿ ಮಗು ಆಯ್ತು ಮಹಾಮಂತ್ರಿಗೆ... ನಮ್ಮ ರಾಧವ್ವಗೆ...' ಎಂಬ ಹಾಡು ರಾಜಕೀಯ ಬಣ್ಣವನ್ನು ಹಚ್ಚಿಕೊಂಡೇ ಬಂದಿದೆ ಅಥವಾ ಅದನ್ನು ಅದ್ಕಾಗಿಯೇ ಬರೆಸಲಾಗಿದೆ ಎಂಬುದೊಂದು ಸುದ್ದಿ. ನಟಿ ರಾಧಿಕಾ ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಸುತ್ತ ಈ ಹಾಡು ಹೆಣೆಯಲಾಗಿದೆ ಎಂಬ ಗುಸುಗುಸು ಅಂದಿನಿಂದಲೇ ಇದೆ. ಇದಕ್ಕೆ ಪುಟವಿಟ್ಟಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಬಿ.ಶ್ರೀರಾಮುಲುರವರು ಈ ಚಿತ್ರವನ್ನು ಅರ್ಪಿಸುತ್ತಿರುವುದು ಮತ್ತಷ್ಟು ಕುತೂಹಲಕ್ಕೆ ಗ್ರಾಸವಾಗಿದೆ.

Pallaki Radhakrishna
MOKSHA
ಅದೆಲ್ಲಾ ಹಾಗಿರಲಿ. ಇದೀಗ ಬಂದ ಸುದ್ದಿಯೇನೆಂದರೆ, ಈ ಚಿತ್ರವನ್ನು ನಿರ್ದೇಶಿಸುತ್ತಿರುವ ಪಲ್ಲಕ್ಕಿ ರಾಧಾಕೃಷ್ಣರೇ ಸ್ವತಃ ಒಂದು ಪಾತ್ರದಲ್ಲಿ ನಟಿಸುತ್ತಿದ್ದು ಅದು ಖ್ಯಾತ ಪತ್ರಕರ್ತರೊಬ್ಬರ ಚಹರೆಯನ್ನು ಹೋಲುತ್ತಿದೆಯಂತೆ. ಹಾಗಂತ ಕೆಲವು ಕುತೂಹಲಿಗಳು ಚಿತ್ರದಲ್ಲಿರುವ ಸಂಭವನೀಯ ಕಥೆಯನ್ನು ಹೇಳಿಕೊಳ್ಳುತ್ತಿದ್ದಾರೆ. ಹೀಗೆ ದೇವನಹಳ್ಳಿಯ ಸುತ್ತ ಹಲವು ಅಂತೆ ಕಂತೆಗಳ ಸಂತೆಯೇ ಸುತ್ತಿತ್ತಿದೆ.

ಪಾಪ ಪಾಂಡು ಖ್ಯಾತಿಯ ಚಿದಾನಂದ, ಅರವಿಂದ ಪಾಲಹಳ್ಳಿ ಇವರೇ ಮೊದಲಾದ ಕಲಾವಿದರು ಈ ಚಿತ್ರದಲ್ಲಿ ನಟಿಸುತ್ತಿದ್ದು ಸಂಗೀತವನ್ನು ಸ್ಟೀಫನ್ ಪ್ರಯೋಗ್ ನೀಡಿದ್ದಾರೆ. ಅಂದ ಹಾಗೆ, ಈ ಚಿತ್ರದ ಶೀರ್ಷಿಕೆಯ ಕೆಳಗೆ, 'ಯಾರ ಹಣೆಬರಹಾನೂ ಬ್ರಹ್ಮ ಬರೆಯೋಲ್ಲ, ನಾವೇ ಬರ್ಕೋಬೇಕು' ಎಂಬ ಟ್ಯಾಗ್ ಲೈನ್ ನೀಡಲಾಗಿದೆ. ಇದು ಯಾರ ಕುರಿತಾದ ಕುಚೋದ್ಯ ಎಂಬುದೇ ಮಿಲಿಯನ್ ಡಾಲರ್ ಪ್ರಶ್ನೆ.

ಪೂರಕ ಓದಿಗೆ- ದೇವನಹಳ್ಳಿಯಲ್ಲಿ ದೇವೇಗೌಡ್ರು, ಕುಮಾರಣ್ಣ, ರಾಧಿಕಾ!
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ದೇವನಹಳ್ಳಿ, ಪಲ್ಲಕಿ ರಾಧಾಕೃಷ್ಣ, ರಾಧಿಕಾ, ಕುಮಾರಸ್ವಾಮಿ