ಅದೇನೇ ಇರಲಿ, ಭಾವನಾಗೆ ಇದೀಗ ವಿಜಯಲಕ್ಷ್ಮಿ ಸಿಂಗ್ ಕೈ ಹಿಡಿದಿದ್ದಾರೆ. ಮಳೆ ಬರಲಿ ಮಂಜು ಇರಲಿ ಚಿತ್ರ ನಿರ್ದೇಶಿಸಿ ಹಲವರಿಂದ ಬೆನ್ನು ತಟ್ಟಿಸಿಕೊಂಡಿದ್ದ ವಿಜಯಲಕ್ಷ್ಮಿ ಸಿಂಗ್ ತಮ್ಮ ವಾರೆ ವ್ಹಾ ಚಿತ್ರಕ್ಕೆ ಭಾವನಾರಿಗೆ ಆಫರ್ ನೀಡಿದ್ದಾರೆ. ನಾಯಕನಾಗಿ ಕೋಮಲ್ ಅಭಿನಯಿಸುತ್ತಿದ್ದಾರೆ. ಚಿತ್ರದ ನಿರ್ಮಾಣ ಜೈಜಗದೀಶ್ ಅವರದ್ದು. ಚಿತ್ರದಲ್ಲಿ ಭಾವನಾ ಎಂಬಿಎ ಸ್ಟುಡೆಂಟ್ ಅಂತೆ.