ವಿಶೇಷವೆಂದರೆ, ಕನ್ನಡದಲ್ಲಿ ಈಕೆಯ ನಿಜ ನಾಮಧೇಯ ಭಾವನಾ ರಾವ್ ಆದರೂ ತಮಿಳಿನಲ್ಲಿ ಶಿಖಾ. ಹೌದು. ಚಿತ್ರರಂಗದಲ್ಲಿ ಹೆಸರು ಬದಲಿಸಿರುವ ನಟಿಯರಿಗೇನೂ ಕೊರತೆಯಿಲ್ಲ. ಕನ್ನಡದಲ್ಲೇ ಉದಾಹರಣೆ ಸಾಕಷ್ಟಿವೆ. ನಿಜ ನಾಮಧೇಯ ಒಂದಾದರೂ, ಚಿತ್ರರಂಗದ ನಾಮಧೇಯ ಮತ್ತೊಂದು. ದಿವ್ಯ ಸ್ಪಂದನ ರಮ್ಯ ಆದಳು. ಸಂಜನಾ ಗಾಂಧಿ ಪೂಜಾ ಗಾಂಧಿಯಾದಳು. ಈಗ ಭಾವನಾ ರಾವ್ ಸರದಿ.