ವಿಚಿತ್ರವೆಂದರೆ, ಇಷ್ಟೆಲ್ಲಾ ಆದರೂ ಪೊಲೀಸ್ ಮೆಟ್ಟಿಲನ್ನು ರತ್ನಜಾ ಅವರು ಹತ್ತದಿರುವುದರ ಮೇಲೆಯೂ ಇದೀಗ ಚಲನಚಿತ್ರ ರಂಗದಲ್ಲಿ ಅನುಮಾನ ಸೃಷ್ಟಿಸಿದೆ. ರತ್ನಜರಿಗೆ ಈ ಮೊದಲೇ ವಿಜಯ ಕೃಷ್ಣ ಎಂಬವರು ಟೆಲಿಫೋನ್ ಮುಖಾಂತರ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದರೂ, ಯಾಕೆ ಅವರು ಪೊಲೀಸರಿಗೆ ದೂರು ನೀಡಿಲ್ಲ ಎಂಬ ಪ್ರಶ್ನೆಯೂ ಈಗ ಕೇಳಿ ಬರುತ್ತಿದೆ. ಅದೆಲ್ಲಾ, ಹಾಗಿರಲಿ. ಇದೀಗ ತಾನೇ ಸದ್ಯದಲ್ಲೇ ಸಿನಿಮಾ ಸಂಕಲನಕಾರರೊಬ್ಬರ ಸೋದರ ಸೊಸೆ ಜೊತೆ ನಿಶ್ಚಿತಾರ್ಥ ಮಾಡಿಕೊಳ್ಳಲು ಹೊರಟಿದ್ದ ರತ್ನಜ ಅವರ ಮದುವೆಯೂ ಇದೇ ಚುಂಬನ ಪ್ರಕರಣದಿಂದ ಮುರಿದು ಬಿದ್ದಿದೆ ಎಂಬ ಮಾತಿದೆ.