ನನಗೆ ಜೀವನವೇ ಬೇಸರ ಬಂದಿದೆ. ಕಳೆದೊಂದು ವರ್ಷಗಳಿಂದ ಮೇಲಿಂದ ಮೇಲೆ ಆಘಾತಗಳೇ ನನ್ನ ಪಾಲಿಗೆ ಬರ್ತಾ ಇದೆ. ಮೊದಲು ನನ್ನ ಪ್ರೀತಿಸುವ ತಾತ ಸತ್ತು ಹೋದ್ರು. ನಂತರ ನಮ್ಮಪ್ಪನ ಮರಣ ಆಘಾತ ತಂತು. ಇವೆಲ್ಲ ಆಗಿ ಚೇತರಿಸಿಕೊಳ್ಳುವಷ್ಟರಲ್ಲಿ ಯಾರೋ ಒಬ್ಬ ನನ್ನ ಬಗ್ಗೆ ವಿಪರೀತ ತಲೆಕೆಡಿಸಿಕೊಂಡು ಮೆಂಟಲ್ ಆಗಿ ಕಾಟ ಕೊಡ್ತಿದ್ದ. ಅವನ ವಿರುದ್ಧ ಪೊಲೀಸ್ ಕಂಪ್ಲೇಂಟ್ ಕೊಟ್ಟು ಕೊನೆಗೂ ಮುಕ್ತಿ ದೊರಕಿದಾಗ ಮತ್ತೊಬ್ಬ ಯಾರೋ ನನ್ನ ಥರಾನೇ ಆನ್‌ಲೈನಲ್ಲಿ ನನ್ನ ಫೋಟೋ ಬಳಸ್ಕೊಂಡು ಜನರನ್ನು ಮೋಸ ಮಾಡ್ತಿದ್ದ. ಇವೆಲ್ಲ ಸಮಸ್ಯೆ ಬಗೆಹರಿದ ಮೇಲೆ ಈ ಸಮಸ್ಯೆ ಬಂದಿದೆ ಎಂದು ಅಮೂಲ್ಯ ಕಣ್ಣೀರು ಹಾಕುತ್ತಾರೆ.