ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ನಕಲಿ ಚುಂಬನ ಫೋಟೋ: ಶಾಕ್‌ನಿಂದ ಹೊರಬಂದ ಅಮೂಲ್ಯ (Amoolya | Rathnaja | Kiss | Lip Lock)
ಸುದ್ದಿ/ಗಾಸಿಪ್
Bookmark and Share Feedback Print
 
Amulya
MOKSHA
ಭಾರೀ ವಿವಾದ ಸೃಷ್ಟಿಸಿದ್ದ ಅಮೂಲ್ಯ ಹಾಗೂ ರತ್ನಜ ಚುಂಬನ ಫೋಟೋ ನಕಲಿ ಎಂದು ಕೊನೆಗೂ ಸಾಬೀತಾಗಿದೆ. ಗ್ರಾಫಿಕ್ ತಜ್ಞರು ಈ ಫೋಟೋವನ್ನು ನಕಲಿ ಎಂದು ತಿಳಿಸಿದ್ದು, ಇದೊಬ್ಬ ಫೋಟೋಶಾಪನ್ನು ಸರಿಯಾಗಿ ಬಳಸಲು ಬರದ ವ್ಯಕ್ತಿ ಮಾಡಿದ ನಕಲಿ ಫೋಟೋ ಎಂದು ಹೇಳಿದ್ದಾರೆ.

ಆದರೆ ಅದೇನೇ ಇರಲಿ, ಅಮೂಲ್ಯರಿಗೆ ಮಾತ್ರ ಇದು ನುಂಗಲಾರದ ತುತ್ತಾಗಿ ಪರಿಣಮಿಸಿತ್ತು. ಇನ್ನೂ ಹದಿಹರೆಯ ದಾಟದ ಅಮೂಲ್ಯ ಈ ಘಟನೆಯಿಂದ ಸಂಪೂರ್ಣ ಖುದ್ದು ಹೋಗಿದ್ದು ಇದೀಗ ಆ ಶಾಕ್‌ನಿಂದ ಚೇತರಿಸಿಕೊಂಡು ಕಾಲೇಜಿಗೆ ಹೋಗಲು ಶುರು ಮಾಡಿದ್ದಾರೆ ಎನ್ನಲಾಗಿದೆ.

ಇನ್ನೂ ದ್ವಿತೀಯ ಪಿಯುಸಿ ಓದುವ ಕೂಸು ಅಮೂಲ್ಯ. ಹಾಗಾಗಿ ಸಹಜವಾಗಿಯೇ ಅಮೂಲ್ಯ ಇದರಿಂದ ಶಾಕಿಗೆ ಒಳಗಾಗಿದ್ದಾರೆ. ಯಾರೋ ನನ್ನ್ನನು ಹಾಗೂ ರತ್ನಜರನ್ನು ತುಂಬ ಹತ್ತಿರದಿಂದ ಬಲ್ಲವರೇ ಈ ಕೃತ್ಯ ನಡೆಸಿದ್ದಾರೆ. ಅರಳುತ್ತಿರುವ ಪ್ರತಿಭೆಯನ್ನು ಕೆಡವಲು ಮಾಡಿದ ತಂತ್ರ ಇದು. ನಮ್ಮ ಕನ್ನಡ ಚಿತ್ರೋದ್ಯಮದಲ್ಲಿ ಇಂಥಾ ಕೆಟ್ಟ ಮನುಷ್ಯರೂ ಇದ್ದಾರಾ ಎಂದು ಯೋಚಿಸಿದರೇ ಅಸಹ್ಯಾಗುತ್ತದೆ. ನನ್ನ ಅಮ್ಮ ತನ್ನ ಗಂಡನನ್ನು ಕಳೆದುಕೊಂಡ ಶಾಕ್‌ನಿಂದಲೇ ಇನ್ನೂ ಹೊರಬಂದಿಲ್ಲ. ಅಷ್ಟರಲ್ಲಾಗಲೇ ಈ ಶಾಕ್ ಎಂದು ಬೇಸರದಿಂದಲೇ ನುಡಿಯುತ್ತಾರೆ ಅಮೂಲ್ಯ.

ನಾನು ನನ್ನ ಫೋನ್ ಸಹ ಬಳಸುವುದಿಲ್ಲ. ಎವೆಲ್ಲವನ್ನು ನೋಡಿಕೊಳ್ಳುವುದು ನನ್ನ ಅಣ್ಣ ಹಾಗೂ ತಾಯಿ. ನನ್ನ ಕೆರಿಯರ್‌ನ ಸಂಪೂರ್ಣ ಜವಾಬ್ದಾರಿ ವಹಿಸಿರುವವರು ಅವರಿಬ್ಬರೇ. ನನ್ನ ಎಲ್ಲ ವಿಚಾರಗಳೂ ಅವರಿಗೆ ಗೊತ್ತು. ಆದರೆ ನನ್ನನ್ನು ಕೆಡವಲು ಮಾಡಿದ ಇಂಥ ತಂತ್ರಗಳಿಗೆಲ್ಲ ನಾನು ಬಗ್ಗೋದಿಲ್ಲ. ಖಂಡಿತ ನಾನು ಚಿತ್ರರಂಗದಲ್ಲಿ ಉತ್ತಮ ಸಾಧನೆ ಮಾಡುತ್ತೇನೆ. ಉತ್ತಮ ನಟಿ ಎಂಬ ಹೆಸರು ಪಡೆಯುತ್ತೇನೆ ಎನ್ನುತ್ತಾಳೆ ಅಮೂಲ್ಯ.

ಈ ವರ್ಷ ದ್ವಿತೀಯ ಪಿಯುಸಿ ಆದ್ದರಿಂದ ರಜೆಯ ಸಂದರ್ಭದಲ್ಲಿ ಮಾತ್ರ ಸಿನೆಮಾದಲ್ಲಿ ನಟಿಸಿ, ಉಳಿದ ಸಮಯವನ್ನು ಓದಿಗೆ ಮೀಸಲಿರಿಸಲಿದ್ದಾರಂತೆ ಅಮೂಲ್ಯ. ಕನ್ನಡದ ಈ ಪುಟ್ಟ ಕುವರಿಗೆ ಆಲ್ ದಿ ಬೆಸ್ಟ್.

ಅಮೂಲ್ಯಾರ ವರ್ಣರಂಜಿತ ಫೋಟೋಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ...
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಅಮೂಲ್ಯ ಚುಂಬನ, ಕಿಸ್, ರತ್ನಜ, ಚೆಲುವಿನ ಚಿತ್ತಾರ