ಜನರು ನನ್ನ ನಟನೆಯನ್ನು ಗುರುತಿಸುವಂತಹ ಚಿತ್ರಗಳಲ್ಲಿ ನಟಿಸಿ ನನ್ನ ನಟನಾ ಕೌಶಲ್ಯದ ಮೂಲಕ ಮೆಚ್ಚುಗೆ ಪಡೆಯಬೇಕೆಂಬುದು ನನ್ನ ಆಸೆ. ಆದರೆ ಇದಕ್ಕೆ ನಾನೆಷ್ಟೇ ಪ್ರಯತ್ನಿಸಿದರೂ ನಿರ್ಮಾಪಕರು ಪದೇ ಪದೇ ನನಗೆ ಬಿಕಿನಿ ಧರಿಸುವ ಪಾತ್ರಗಳನ್ನೇ ಸೃಷ್ಟಿಸುತ್ತಿದ್ದಾರೆ. ನಾನು ಬೇಡ ಎಂದರೆ, ನಿರ್ಮಾಪಕರು ಜನರು ನಿಮ್ಮಿಂದ ಅದನ್ನೇ ಬಯಸುತ್ತಾರೆ ಎಂದು ಹೇಳಿ ಒಪ್ಪಿಸುತ್ತಾರೆ ಎಂದು ಅಲವತ್ತುಕೊಂಡಿದ್ದಾರೆ.