ರಂಗಾಯಣ, ಕೋಮಲ್, ಅನಂತ್‌ನಾಗ್‌ರ ಸಂಭಾವನೆ... ಕೇವಲ ನಾಯಕ-ನಾಯಕಿಯರಿದ್ದರೆ ಸಿನಿಮಾ ಹಿಟ್ ಆಗುವುದಿಲ್ಲ ಅಥವಾ ಪೂರ್ಣವೆನಿಸುವುದಿಲ್ಲ. ಸಹನಟರು, ಹಾಸ್ಯ ಕಲಾವಿದರು ಇಲ್ಲಿ ಬೊಟ್ಟಿನಂತಿರುತ್ತಾರೆ. ಹಾಗೆಂದು ಅವರ ಸಂಭಾವನೆಗಳು ನಾಯಕರಂತೆ ಕೋಟಿಗಟ್ಟಲೆ ಅಥವಾ ನಾಯಕಿಯರಂತೆ ಲಕ್ಷಗಟ್ಟಲೆಗೆ ತಲುಪುವುದಿಲ್ಲ.
ಒಂದಾನೊಂದು ಕಾಲದಲ್ಲಿ ನಾಯಕನಾಗಿ ಮಿಂಚಿದ್ದ ಅನಂತ್‌ನಾಗ್ ಈಗ ಪಡೆಯುತ್ತಿರುವ ಸಂಭಾವನೆ ದಿನವೊಂದಕ್ಕೆ ಒಂದು ಲಕ್ಷ ರೂಪಾಯಿ. ಇದೇ ಲೆಕ್ಕಾಚಾರವನ್ನು ರಂಗಾಯಣ ರಘು ಅವರಿಗೆ ಹೇಳುವಂತಿಲ್ಲ. ಅವರು 1.5 ಲಕ್ಷ ರೂಪಾಯಿಗೆ ಪಟ್ಟು ಹಿಡಿಯುತ್ತಾರಂತೆ.
ಕೋಮಲ್ ಕುಮಾರ್ ಅಂತೂ ಈಗ ನಾಯಕನಾಗಿ ಅದೃಷ್ಟ ಪರೀಕ್ಷೆ ಮಾಡುತ್ತಿರುವವರು. ಈಗಿನ ಅವರ ಸಂಭಾವನೆ ಎರಡಂಕಿಯುಳ್ಳ ಲಕ್ಷಗಳನ್ನು ತಲುಪಿರಬಹುದು. ಅವರು 'ಆಪ್ತರಕ್ಷಕ'ದ ಪುಟ್ಟ ಪಾತ್ರಕ್ಕೆ ಎರಡು ಲಕ್ಷ ರೂಪಾಯಿ ಪಡೆದಿದ್ದರು.
ಕಚಗುಳಿಯಿಡುವಲ್ಲಿ ನಿಸ್ಸೀಮ ಎನಿಸಿಕೊಂಡಿರುವ ಶ್ರುತಿ ಸಹೋದರ ಶರಣ್ ದಿನಕ್ಕೆ 60ರಿಂದ 70 ಸಾವಿರ ಪಡೆಯುತ್ತಾರೆ. ಬುಲೆಟ್ ಪ್ರಕಾಶ್ 80 ಸಾವಿರಕ್ಕೆ ಬಗ್ಗುತ್ತಾರಂತೆ.