ಐಂದ್ರಿತಾ-ಪ್ರಿಯಾಮಣಿ ಅಜಗಜಾಂತರ... ಐಂದ್ರಿತಾ ರೇ ಮತ್ತು ಪ್ರಿಯಾಮಣಿ ಇಬ್ಬರೂ ಕರ್ನಾಟಕದಲ್ಲೇ ನೆಲೆಸಿರುವವರು, ಆದರೆ ಇಬ್ಬರೂ ಹೊರ ರಾಜ್ಯಗಳಿಗೆ ಸೇರಿದವರು. ಕನ್ನಡದ್ದೇ ನಟಿಯರಿಗಿಂತ ಹೆಚ್ಚು ಕನ್ನಡವನ್ನು ತಮ್ಮ ಮಾತಿನಲ್ಲಿ ಬಳಸುವವರು.
ಆದರೆ ಹಲವು ವಿಚಾರಗಳಲ್ಲಿ ಇವರಿಬ್ಬರಲ್ಲಿ ವೈರುಧ್ಯಗಳಿವೆ. ಅದು ಸಂಭಾವನೆಯಲ್ಲೂ ಕಂಡು ಬಂದಿದೆ. ಬಹುಭಾಷಾ ಪ್ರಶಸ್ತಿ ವಿಜೇತ ನಟಿ ಪ್ರಿಯಾಮಣಿ 30 ಲಕ್ಷ ಹಾಗೂ ಐಂದ್ರಿತಾ 10 ಲಕ್ಷ ಸಂಭಾವನೆ ಪಡೆಯುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.