ವಿವಾದದ ಹುಡುಗಿ ರಾಗಿಣಿ ದ್ವಿವೇದಿ... ಬೆಂಗಳೂರು ಹುಡುಗಿ ರಾಗಿಣಿ ದ್ವಿವೇದಿ 'ವೀರ ಮದಕರಿ' ಮೂಲಕ ಚಿತ್ರರಂಗಕ್ಕೆ ಬಂದವರು. ಹಿಂದಿ ಚಿತ್ರರಂಗದಲ್ಲೂ ಮುಖ ತೋರಿಸಿ ಬಂದವರು. ಜತೆಗೆ ತಮಿಳು, ಮಲಯಾಳಂಗಳಲ್ಲೂ ನಟಿಸಿ, ಕನ್ನಡ ಚಿತ್ರರಂಗವನ್ನು ಒಂದೊಮ್ಮೆ ತೆಗಳಲು ಹೋಗಿ ವಿವಾದಕ್ಕೆ ಸಿಲುಕಿದವರು.
ಈ 20ರ ಸೆಕ್ಸಿ ಐಕಾನ್ ಪ್ರಸಕ್ತ ಏಳು ಚಿತ್ರಗಳಲ್ಲಿ ನಟಿಸುವ ಮೂಲಕ ತನಗೆಷ್ಟು ಬೇಡಿಕೆ ಇದೆ ಎಂಬುದನ್ನು ತೋರಿಸಿ ಕೊಟ್ಟಿದ್ದಾರೆ. ತಮಿಳಿನಲ್ಲೂ ಒಂದು ಚಿತ್ರದಲ್ಲಿ ನಟಿಸುತ್ತಿದ್ದಾರೆ. ಮೂಲತಃ ಮಾಡೆಲ್ ಆಗಿರುವುದರಿಂದ ಸಂಭಾವನೆ ಕೂಡ ಅದೇ ಮಟ್ಟದಲ್ಲಿದೆ. ಅವರೀಗ 15 ಲಕ್ಷ ರೂಪಾಯಿ ಪಡೆಯುತ್ತಿದ್ದಾರಂತೆ.