ನನ್ನ ಜೀವಮಾನದಲ್ಲಿ ಎಂದೂ ಚಿತ್ರ ನಿರ್ದೇಶನಕ್ಕೆ ಇಳಿಯುವುದೇ ಇಲ್ಲ. ಅದರಷ್ಟು ಕಷ್ಟಕರ ಕೆಲಸ ಮತ್ತೊಂದಿಲ್ಲ. ಒಬ್ಬ ಚಿತ್ರ ನಿರ್ದೇಶಕನಾಗಬಯಸುವವನಿಗೆ ಸಾಕಷ್ಟು ತಾಳ್ಮೆಯಿರಬೇಕು, ಶಿಸ್ತು ರೂಢಿಸಿಕೊಳ್ಳಬೇಕು, ನಿರ್ದೇಶನ ನೀಡುವ ಸಾಮರ್ಥ್ಯ ಇರಬೇಕು. ಹೀಗೆ ಹೇಳಿಕೊಂಡಿರುವುದು ಸಾಕಷ್ಟು ನಿರ್ದೇಶಕರೊಂದಿಗೆ ಕೆಲಸ ಮಾಡಿ ಅನುಭವ ಇರುವ ಮಾದಕ ನಟಿ ನಮಿತಾ.
ತಮ್ಮ 'ನಮಿತಾ ಐ ಲವ್ ಯೂ' ಚಿತ್ರದ ಸೆಟ್‌ನಲ್ಲಿ ಮಾತನಾಡುತ್ತಾ 'ಚಿತ್ರನಿರ್ದೇಶನದಷ್ಟು ಕಷ್ಟದ ಕೆಲಸ ವಿಶ್ವದಲ್ಲಿ ಬೇರಾವುದೂ ಇಲ್ಲ' ಎಂದು ಅಭಿಪ್ರಾಯಪಟ್ಟಿದ್ದಾರೆ. (ಮುಂದಿನ ಪುಟದಲ್ಲಿ ಮುಂದುವರಿದಿದೆ)