ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ದರ್ಶನ್‌ಗೆ ಜಾಮೀನು ನಿರಾಕರಣೆ: 2 ದಿನ ಜೈಲಿನಲ್ಲೇ ಇರ್ಬೇಕು (Darshan Arrested for Assaulting Wife | Challenging Star Darshan | Kannada Actor Darshan | Vijayalaxmi)
ಹಿಂದಿನದು|ಮುಂದಿನದು
PR
ಚಾಲೆಂಜಿಂಗ್ ಸ್ಟಾರ್ ದರ್ಶನ್ ಕುಡಿದ ಅಮಲಿನಲ್ಲಿ ತನ್ನ ಪತ್ನಿ ವಿಜಯ ಲಕ್ಷ್ಮಿ ಮತ್ತು ಮಗ ವಿನೀಶ್‌ಗೆ ಥಳಿಸಿ ಜೀವಬೆದರಿಕೆ ಹಾಕಿದ್ದರಿಂದ, ಪ್ರಕರಣ ಕೋರ್ಟ್ ಮೆಟ್ಟಿಲೇರಿ ಇಕ್ಕಟ್ಟಿಗೆ ಸಿಲುಕಿ‌, ಇದೀಗ ಅವರು ಸಲ್ಲಿಸಿದ್ದ ಜಾಮೀನು ಅರ್ಜಿ ಕೂಡ ನಿರಾಕರಣೆಯಾಗಿದೆ. ಈ ನಿಟ್ಟಿನಲ್ಲಿ ಕೋರಮಂಗಳದ ಎನ್‌ಜಿವಿ ಸಮೀಪದಲ್ಲಿರುವ ಜಡ್ಜ್ ವೆಂಕಟೇಶ್ ಹುಲಗಿ ಅವರ ನಿವಾಸದಲ್ಲಿ ದರ್ಶನ್ ಪರ ವಕೀಲ ಕೃಷ್ಣೇಗೌಡ ಅವರು ಸಲ್ಲಿಸಿದ್ದ ಅರ್ಜಿ ತಿರಸ್ಕೃತವಾಗಿದ್ದು, ದರ್ಶನ್ ಎರಡು ದಿನದ ನ್ಯಾಯಾಂಗ ಬಂದನಕ್ಕೆ ಒಳಪಟ್ಟಿದ್ದಾರೆ.

ನ್ಯಾಯಾಧೀಶರು ನಟನನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಿ ಆದೇಶ ನೀಡಿದ್ದಾರೆ. ಮುಂದಿನ ವಿಚಾರಣೆ ಸೋಮವಾರ ನಡೆಯಲಿದೆ. ಇದೀಗ ಅವರು ಪರಪ್ಪನ ಅಗ್ರಹಾರದಲ್ಲಿ ಸೆರೆವಾಸ ಅನುಭವಿಸಬೇಕಾಗಿದೆ. ಅಲ್ಲದೆ ಕೆಐಡಿಬಿ ಭೂ ಹಗರಣ ಆರೋಪದಲ್ಲಿ ಸೆರೆವಾಸ ಅನುಭವಿಸುತ್ತಿರುವ ಕಟ್ಟಾ ಜಗದೀಶ್ ಅವರ ಕೋಣೆಯಲ್ಲೇ ಚಾಲೆಂಜಿಂಗ್ ಸ್ಟಾರ್ ಸೆರೆವಾಸ ಅನುಭವಿಸಲಿದ್ದಾರೆ ಎನ್ನಲಾಗಿದೆ. ಪರಪ್ಪನ ಅಗ್ರಹಾರದಲ್ಲಿ ವೈದ್ಯಕೀಯ ಪರೀಕ್ಷೆ ಪೂರ್ಣಗೊಳಿಸಿದ ನಂತರ ಆ ವರದಿಯ ಆಧಾರದಂತೆ ಮುಂದಿನ ನಿರ್ಧಾರ ಕೈಗೊಳ್ಳಲಾಗುತ್ತದೆ.

ತಿರುವು ಪಡೆದುಕೊಂಡ ಪ್ರಕರಣ...

ಮುಂಜಾನೆಯಷ್ಟೇ ತನ್ನ ಗಂಡನಿಂದ ಮಾರಣಾಂತಿಕ ಹಲ್ಲೆಗೊಳಗಾಗಿ ದೂರು ನೀಡಿದ್ದ ಪತ್ನಿ ವಿಜಯಲಕ್ಷ್ಮಿ ಇದೀಗ ಬೇರೆಯದೇ ರೀತಿಯ ಹೇಳಿಕೆ ಕೊಡುತ್ತಿದ್ದು, ತಾನು ಬಾತ್‌ರೂಮಿನಲ್ಲಿ ಜಾರಿಬಿದ್ದು ತಲೆಗೆ ಗಾಯಗಳಾಗಿದ್ದು, ನಮ್ಮ ಸಂಸಾರದಲ್ಲಿ ಯಾವುದೇ ವೈಷಮ್ಯಗಳಿಲ್ಲ. ನಾವು ಸಂತೋಷವಾಗಿಯೇ ಇದ್ದೇವೆ ಎಂಬ ಹೇಳಿಕೆ ಕೊಟ್ಟು ಪತಿ ದರ್ಶನ್ ಅವರ ಜಾಮೀನು ಕೋರಿದರಾದರೂ ಜಾಮೀನು ನಿರಾಕರಣೆಯಾಗಿದೆ.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಇದಕ್ಕೆ ಮೊದಲು, ಅಂಬರೀಷ್ ಸೇರಿದಂತೆ ಹಲವು ನಟರು ದರ್ಶನ್ ಮತ್ತು ಪತ್ನಿ ವಿಜಯ ಲಕ್ಷ್ಮಿ ನಡುವಿನ ಕಲಹಕ್ಕೆ ರಾಜಿ ಸಂಧಾನ ಕಾರ್ಯದಲ್ಲಿ ತೊಡಗಿದ್ದರು.

ಈ ನಿಟ್ಟಿನಲ್ಲಿ, ಗನ್ ವಾಪಾಸು ತೆಗೆದುಕೊಳ್ಳಬೇಕು, ಇನ್ನು ಮುಂದೆ ಯಾವತ್ತೂ ನನ್ನನ್ನು ಮತ್ತು ಮಗನನ್ನು ಹೊಡೆಯಬಾರದು, ಒಂದೇ ಮನೆಯಲ್ಲಿದ್ದರೂ ಅವರವರ ಪಾಡಿಗೆ ಇರಬೇಕು ಸೇರಿದಂತೆ ಬೇಕಿದ್ದರೆ ವಿಚ್ಚೇದನ ನೀಡಲೂ ಸಿದ್ದ ಎಂಬ ಕೆಲವೊಂದು ಷರತ್ತಿನೊಂದಿಗೆ ಸಂಸಾರದಲ್ಲಿ ರಾಜಿ ಮಾಡಿಕೊಳ್ಳಲು ಒಪ್ಪಿಕೊಂಡಿರುವ ದರ್ಶನ್ ಪತ್ನಿ ವಿಜಯಲಕ್ಷ್ಮಿ, ಆಂಬ್ಯುಲೆನ್‌ನಲ್ಲೇ ಮ್ಯಾಜಿಸ್ಟ್ರೇಟ್ ಕೋರ್ಟ್‌ಗೆ ಆಗಮಿಸಿದ್ದರು.

ಮ್ಯಾಜಿಸ್ಟ್ರೇಟ್ ಕೋರ್ಟ್‌‌ನಲ್ಲಿ 1 ನೇ ಎಪಿಎಂಸಿ ಜಡ್ಜ್ ವೆಂಕಟೇಶ್ ಹುಲಗಿ ಅವರು ಇಲ್ಲದ ಕಾರಣ ಆಂಬ್ಯುಲೆನ್ಸ್‌ನಲ್ಲೇ ನೇರವಾಗಿ ಜಡ್ಜ್‌ಮನೆಗೆ ತೆರಳಿ ಪ್ರಕರಣ ವಾಪಾಸು ತೆಗೆದುಕೊಳ್ಳುವುದಾಗಿ ಮನವಿ ಮಾಡಿಕೊಳ್ಳಲಿದ್ದಾರೆ.

ಹಲವಾರು ನಟರು, ಸಂಬಂಧಿಕರು ಜಡ್ಜ್ ಮನೆಗೆ
ಇದರೊಂದಿಗೆ ಹಲವಾರು ನಟರೂ ರಾಜಿಗಾಗಿ ಬೆಂಬಲಕ್ಕೆ ನಿಂತಿದ್ದಾರಾದರೂ, ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು ಸಲ್ಲಿರುವ ಐದು ಪುಟಗಳ ದೂರಿನಲ್ಲಿ ಪ್ರಮುಖ ಆರೋಪಗಳು ಭಾರತೀಯ ದಂಢಸಂಹಿತೆ ಸೆಕ್ಷನ್ 307 (ಪತ್ನಿ ಮೇಲೆ ಮಾರಣಾಂತಿಕ ಹಲ್ಲೆ), 498ಎ (ವರದಕ್ಷಿಣೆ ಕಿರುಕುಳ ಆರೋಪ) ಪರಿದಿಗೆ ಒಳಪಡುವುದರಿಂದ ಕಾನೂನು ರಾಜಿಸಂದಾನ ಅಷ್ಟು ಸುಲಭವಲ್ಲ ಎಂದು ಕಾನೂನು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಜಡ್ಜ್ ಮನೆಗೆ ದರ್ಶನ್ ದೌಡು.....(ಮುಂದಿನ ಪುಟದಲ್ಲಿ)
ಹಿಂದಿನದು|ಮುಂದಿನದು
ಇವನ್ನೂ ಓದಿ