ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಜಡ್ಜ್ ಮನೆಗೆ ಆಂಬ್ಯುಲೆನ್‌ನಲ್ಲೇ ಆಗಮಿಸಿದ ದರ್ಶನ್ ಪತ್ನಿ! (Darshan Arrested for Assaulting Wife | Challenging Star Darshan | Kannada Actor Darshan | Vijayalaxmi)
PR


ಸಂದಾನಕ್ಕಾಗಿ ಯಶವಂತಪುರದ ಅಜ್ಞಾತ ಪ್ರದೇಶದಿಂದ ದರ್ಶನ್ ಕೂಡ ಆಗಮಿಸಿದ್ದು, ಕೋರಮಂಗಳದ ಎನ್‌ಜಿವಿ (ನ್ಯಾಷನಲ್ ಗೇಮ್ಸ್ ವಿಲೇಜ್) ಸಮೀಪದ ಜಡ್ಜ್‌ ಮನೆಯಲ್ಲೇ ಮುಖಾಮುಖಿ ಮಾತುಕತೆ ನಡೆಯಲಿದೆ. ಇಲ್ಲಿ ಮಾತುಕತೆ ನಡೆದರೂ ಪ್ರಕರಣಗಳಿಗೆ ಅಂತ್ಯಹಾಡುವ ಸಾಧ್ಯತೆಗಳು ತೀರಾ ಕಡಿಮೆಯಿದ್ದು ನ್ಯಾಯಾಂಗ ಬಂಧನಕ್ಕೆ ಒಳಪಡುವ ಸಾಧ್ಯತೆಗಳೇ ಹೆಚ್ಚಾಗಿದೆ ಎಂದು ಕಾನೂನು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಏಕೆಂದರೆ ಪ್ರಕರಣಕ್ಕೆ ಅಂತ್ಯಹಾಡಲು ಐಪಿಸಿ ಸೆಕ್ಷನ್ 307, 498ಎ ಅಡ್ಡಿಬರುತ್ತಿದ್ದು, ಅದರಂತೆ ಪ್ರಕರಣ ವಾಪಾಸು ತೆಗೆದುಕೊಳ್ಳಲು ದರ್ಶನ್ ನ್ಯಾಯಾಲಯಕ್ಕೆ ಮನವಿ ಸಲ್ಲಿಸಬೇಕಾಗುತ್ತದೆ. ಈ ಮನವಿಗೆ ದರ್ಶನ್‌ ಪತ್ನಿ ವಿಜಯಲಕ್ಷ್ಮಿ ಅವರು ಸಮ್ಮತಿ ಸೂಚಿಸಬೇಕಾಗುತ್ತದೆ.

ಇವರಿಬ್ಬರು ಒಪ್ಪಿದರೂ ಜಾಮೀನು ಸಿಗುವುದು ಕಷ್ಟ (ಮುಂದಿನ ಪುಟದಲ್ಲಿ)
ಇವನ್ನೂ ಓದಿ