ಮುಖ್ಯ ಪುಟಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಜಡ್ಜ್ ಮನೆಗೆ ಆಂಬ್ಯುಲೆನ್‌ನಲ್ಲೇ ಆಗಮಿಸಿದ ದರ್ಶನ್ ಪತ್ನಿ! (Darshan Arrested for Assaulting Wife | Challenging Star Darshan | Kannada Actor Darshan | Vijayalaxmi)
ಜಡ್ಜ್ ಮನೆಗೆ ಆಂಬ್ಯುಲೆನ್‌ನಲ್ಲೇ ಆಗಮಿಸಿದ ದರ್ಶನ್ ಪತ್ನಿ!
ಆದರೆ ಇವರಿಬ್ಬರ ಒಪ್ಪಿಗೆಯಲ್ಲದೆ, ದೂರು ಆಧರಿಸಿ ಸಿದ್ದಪಡಿಸಲಾದ ಆರೋಪ ಪಟ್ಟಿಯ ತೀವ್ರ ಸ್ವರೂಪಕ್ಕೆ ಸಂಬಂಧಿಸಿ ಪೊಲೀಸರಿಂದ ಬಿ-ವರದಿ ಸಲ್ಲಿಸಬೇಕಾಗುತ್ತದೆ.
ಅಂದರೆ, ದೂರಿನಲ್ಲಿ-ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಿರುವಂತೆ ಮಾರಣಾಂತಿಕ ಹಲ್ಲೆ, ಸಿಗರೇಟಿನಿಂದ ಸುಟ್ಟಿರುವುದು, ಮಗುವನ್ನು ಕತ್ತು ಹಿಡಿದು ಮೇಲಕ್ಕೆ ಎತ್ತಿರುವುದು, ಪತ್ನಿಯ ಕಿವಿಯನ್ನು ಕಚ್ಚಿ ಗಾಯಮಾಡಿ ಕಿರುಕುಳ ನೀಡಿರುವುದು, ರಕ್ತ ಹೆಪ್ಪುಗಟ್ಟುವಂತೆ ತಲೆಗೆ ಹೊಡೆದಿರುವುದು ಮುಂತಾದ ಆರೋಪಗಳೆಲ್ಲಾ ಹುರುಳಿಲ್ಲದಾಗಿದ್ದು, ಆರೋಪಕ್ಕೆ ಸಂಬಂಧಿಸಿದಂತೆ ಯಾವುದೇ ಸಾಕ್ಷಿ ಆಧಾರಗಳು ಈ ಪ್ರಕರಣದಲ್ಲಿ ಕಂಡುಬಂದಿಲ್ಲ ಎಂಬ ವರದಿಯನ್ನು ಸಲ್ಲಿಸಬೇಕಾಗುತ್ತದೆ. ಆದರೆ ಇಂದೇ ದಾಖಲಾದ ದೂರಿಗೆ ವಿಶೇಷ ತನಿಖೆ ನಡೆಸಿ ಬಿ-ವರದಿ ಸಿದ್ದಪಡಿಸುವುದು ಸುಲಭಸಾಧ್ಯವಲ್ಲ ಎಂಬುದು ಕಾನೂನು ತಜ್ಞರ ಅಭಿಪ್ರಾಯ.
ಹೆಚ್ಚಿಗೆ, ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಬಹುದಾದರೂ ನಾಳೆ, ನಾಳಿದ್ದು ಶನಿವಾರ, ಭಾನುವಾರವಾದ್ದರಿಂದ ಅದೂ ಅಸಾಧ್ಯವಾಗಿದ್ದು, ಇನ್ನು ಸೋಮವಾರ ಹೊಸಬೆಳವಣಿಗೆ ಕಾಣಬಹುದಾಗಿದೆ ಎಂಬುದು ಅವರ ಅಭಿಪ್ರಾಯ.