ಮುಖ್ಯ ಪುಟಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ನಿಖಿತಾಗೆ 3 ವರ್ಷ ನಿಷೇಧ ಕ್ರಮ ಅನ್ಯಾಯ; ಸಂದೇಶ್ ನಾಗರಾಜ್ (Darshan Arrested for Assaulting Wife | Challenging Star Darshan | Kannada Actor Darshan | Nikitha | Sandesh Nagaraj)
ದರ್ಶನ್ ದಂಪತಿಯಲ್ಲಿ ವಿರಸ ಉಂಟಾಗಲು ನಟಿ ನಿಖಿತಾ ಅವರೇ ನೇರ ಹೊಣೆಗಾರರಾಗಿದ್ದಾರೆ. ಇಂತಹ ಮನೆಹಾಳು ಮಾಡುವ ಕೆಲಸಗಳನ್ನು ಯಾರೂ ಮಾಡಬಾರದು. ಒಬ್ಬ ಕಲಾವಿದನ ಮನೆ ಹಾಳಾದಂತೆ ಇನ್ನು ಮುಂದೆ ಯಾವ ಕಲಾವಿದನ ಮನೆಯೂ ಹಾಳಾಗದಂತೆ ಇರಲು ಈ ರೀತಿಯ ಕ್ರಮ ಕೈಗೊಂಡಿರುವುದಾಗಿ ನಿರ್ಮಾಪಕರ ಸಂಘದ ಅಧ್ಯಕ್ಷ ಮುನಿರತ್ನ ಸಮರ್ಥಿಸಿಕೊಂಡಿದ್ದಾರೆ.
ಸಂದೇಶ್ ನಾಗರಾಜ್ ಅವರ ಆಕ್ಷೇಪಕ್ಕೆ ಪ್ರತಿಕ್ರಿಯಿಸುತ್ತಾ, ಅವರೇ ನಮ್ಮ ಗುರುಗಳಾಗಿದ್ದು ಅವರು ಈ ಹಿಂದೆ ತೆಗೆದುಕೊಳ್ಳುತ್ತಿದ್ದ ಕೆಲವು ನಿರ್ಣಗಳನ್ನು ಆಧರಿಸಿಯೇ ನಾವಿಂದು ನಟಿ ನಿಖಿತಾ ಅವರಿಗೆ ನಿಷೇಧ ಹೇರಿರುವುದಾಗಿ ವ್ಯಂಗ್ಯವಾಡಿದ್ದಾರೆ.
ನಟಿ ನಿಖಿತಾ ಅವರಿಗೆ ಮಾತ್ರ 3 ವರ್ಷ ನಿಷೇಧ ಹೇರಿರುವುದು ಸಂದೇಶ್ ನಾಗರಾಜ್‌ಗೆ ಬೇಸರ ತರಿಸುತ್ತಿದ್ದು, ನಟ ದರ್ಶನ್‌ಗೂ 3 ವರ್ಷ ನಿಷೇಧ ಹೇರಿದ್ದರೆ ಅವರಿಗೆ ತುಂಬಾ ಸಂತೋಷವಾಗುತ್ತಿತ್ತು ಪಾಪ ಎಂದು ಕುಟುಕಿದ್ದಾರೆ.
ಕನ್ನಡ ಚಿತ್ರರಂಗ ತುಂಬಾ ಸೂಕ್ಷ್ಮ ಚಿತ್ರರಂಗವಾಗಿದ್ದು, ಈ ರೀತಿಯ ಕೆಲವೊಂದು ಪ್ರಕರಣದಿಂದ ಸಿನಿಮಾ ಉದ್ಯಮದ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಹಾಗೂ ನಟಿ ನಿಖಿತಾ ಮನೆಹಾಳು ಕೆಲಸ ಮಾಡಿದ್ದಕ್ಕೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ನಿರ್ಮಾಪಕ ಸಂಘದ ಅಧ್ಯಕ್ಷ ಮುನಿರತ್ನ ತಿಳಿಸಿದ್ದಾರೆ.