ಸಾಹಸಸಿಂಹ ವಿಷ್ಣುವರ್ಧನ್
ಗುರುವಾರ, 2 ಆಗಸ್ಟ್ 2007( 16:54 IST )
ಸುಮಾರು ಮೂರು ದಶಕಗಳ ಕಾಲ ಕನ್ನಡ ಚಿತ್ರರಂಗದಲ್ಲಿ ನೆಲೆ ನಿಂತ ಅಭಿಜಾತ ಕಲಾವಿದ ಡಾ. ವಿಷ್ಣುವರ್ಧನ್ ಅವರಿಂದ ಕನ್ನಡ ಚಿತ್ರರಂಗ ಶ್ರೀಮಂತವಾಗಿದೆ.
ಚಿತ್ರರಸಿಕರಿಗಾಗಿ ಅವರು ನೀಡಿದ ಅನೇಕ ಚಿತ್ರಗಳಲ್ಲಿ ಇನ್ನು ಕೇಲವೊಂದು ಅಷ್ಟೆ ನಿತ್ಯ ನೂತನ ಬಂಧನ, ನಿಷ್ಕರ್ಷ,ಮಲಯ ಮಾರುತ, ಸುಪ್ರಭಾತ, ಮುತ್ತಿನ ಹಾರ, ಸೂರ್ಯವಂಶ, ಮತ್ತು ಮೊನ್ನೆ ಬಿಡುಗಡೆಯಾಗಿದೆ ಅನ್ನಬಹುದಾದ ವೀರಪ್ಪ ನಾಯಕ ಅವರ ಅಭಿನಯ ಸಾಮರ್ಥ್ಯಕ್ಕೆ ಕನ್ನಡಿ ಹಿಡಿಯಬಹುದು.
ವಿಷ್ಣು ಅಭಿನಯಿಸಿದ ಹರಕೆಯ ಕುರಿ ಮತ್ತು ಮುತ್ತಿನ ಹಾರ ಚಿತ್ರಗಳು ಪ್ರಾದೇಶಿಕ ವಿಭಾಗದಲ್ಲಿ ಅತ್ಯುತ್ತಮ ಚಿತ್ರಗಳು ಎಂದು ರಾಷ್ಟ್ರ ಪ್ರಶಸ್ತಿ ಪಡೆದಿವೆ.
1972 ರಲ್ಲಿ ವಂಶ ವೃಕ್ಷದಲ್ಲಿ ಅಭಿನಯಿಸುವ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ವಿಷ್ಣುವರ್ಧನ್ ಅವರು ಇಲ್ಲಿಯವರೆಗೆ ಕನ್ನಡದಲ್ಲಿ ಸುಮಾರು 194, ತಮಿಳಿನಲ್ಲಿ 5, ತೆಲುಗಿನಲ್ಲಿ 4, ಮಲಯಾಳಂನಲ್ಲಿ 2 ಮತ್ತು ಹಿಂದಿಯಲ್ಲಿ 4 ಚಿತ್ರಗಳಲ್ಲಿ ನಟಿಸುವ ಮೂಲಕ ಪಂಚಭಾಷಾ ತಾರೆ ಎಂದು ಗುರುತಿಸಿಕೊಂಡಿರುವ ಕನ್ನಡದ ಹಿರಿಯ ನಟರಲ್ಲಿ ಮೊದಲಿಗರು ಇವರ ನಂತರದ ಸ್ಥಾನ ರಮೇಶರದು.
ಕನ್ನಡಿಗರಿಂದ ಅಭಿನವ ಭಾರ್ಗವ ಎಂದು ಕರೆಸಿಕೊಂಡ ವಿಷ್ಣು ಅಭಿನಯದ ವಿಸ್ತಾರ ಕೂಡ ಅಷ್ಟೆ ಆಳ. ಭಾವನಾತ್ಮಕ ಮತ್ತು ಹೋರಾಟದ ದೃಶ್ಯಗಳು ಪ್ರೇಕ್ಷಕರ ಮೇಲೆ ಗಾಢವಾದ ಪರಿಣಾಮ ಬೀರುತ್ತವೆ. ಉದಾರಣೆಗೆ ಬಂಧನದ ಡಾ. ಹರೀಶ ಮತ್ತು ಸುನಿಲ್ ಕುಮಾರ್ ದೇಸಾಯಿ ಅವರ ನಿಷ್ಕರ್ಷದಲ್ಲಿನ ಕಮಾಂಡೊ ಪಾತ್ರ ಮುತ್ತಿನ ಹಾರದ ಅಚ್ಚಪ್ಪನ ಪಾತ್ರ ಹೀಗೆ ಹತ್ತು ಹಲವು ಪಾತ್ರಗಳಲ್ಲಿ ಅಭಿನಯದ ಸೋಗಡನ್ನು ಕನ್ನಡ ಚಿತ್ರರಂಗಕ್ಕೆ ವಿಷ್ಣುವರ್ಧನ್ ನೀಡಿದ್ದಾರೆ