ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ತಾರಾ ಪರಿಚಯ » ಸಾಹಸಸಿಂಹ ವಿಷ್ಣುವರ್ಧನ್‌
ತಾರಾ ಪರಿಚಯ
Feedback Print Bookmark and Share
 
ಸಾಹಸಸಿಂಹ...
ಗಿರೀಶ್‌ ಕಾರ್ನಾಡರ ವಂಶವೃಕ್ಷದೊಂದಿಗೆ ಚಿತ್ರರಂಗದ ಪ್ರವೇಶವಾಯಿತು ಆದರೂ ನಾಯಕನಾಗಿ ಬಡ್ತಿ ಹೊಂದಿದ್ದು ಪುಟ್ಟಣ್ಣ ಕಣಗಾಲ್‌ ನಿರ್ಧೇಶನದ ನಾಗರ ಹಾವು ಚಿತ್ರದ ರಾಮಾಚಾರಿಯ ಮೂಲಕ.ಇದೇ ಚಿತ್ರದಲ್ಲಿ ಅವರ ಕಾಲೇಜು ಸಹಪಾಟಿ ಅಪ್ತಮಿತ್ರ ಅಂಬರೀಷ ಕೂಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.

ಜನನ ಮತ್ತು ಜೀವನ: ಸಪ್ಟಂಬರ್ 18, 1950ರಲ್ಲಿ ದಿವಂಗತ ಎಚ್ ಎಲ್ ನಾರಾಯಣರಾವ್ ಹಾಗೂ ದಿವಂಗತ ಕಾನಾಕ್ಷಮ್ಮ ಅವರ ಎರಡನೆ ಮಗನಾಗಿ ಮೈಸೂರಿನಲ್ಲಿ ಜನನ. ಪ್ರಾಥಮಿಕ ಶಿಕ್ಷಣ ಪಡೆದದ್ದು ಗೋಪಾಲ ಸ್ವಾಮಿ ಶಾಲೆಯಲ್ಲಿ, ಕಾಲೇಜು ಶಿಕ್ಷಣ ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ಆಯಿತು.

ಚಿತ್ರರಂಗಕ್ಕೆ ಕಾಲಿಟ್ಟ ಮೂರು ವರುಷಗಳ ನಂತರ ಫೆಬ್ರುವರಿ 27, 1975 ರಲ್ಲಿ ಕನ್ನಡದ ಚಿತ್ರ ನಟಿ ಭಾರತಿಯನ್ನು ವಿವಾಹವಾದರು.ಬ್ರಹ್ಮ ಕೆಲವೊಂದು ಬಾರಿ ವಿಚಿತ್ರ ಹಣೆ ಬರಹ ಬರೆದಿರುತ್ತಾನೆ ಇನ್ನೇನು ಜೀವನ ಉತ್ತುಂಗದತ್ತ ಸಾಗುತ್ತಿದೆ ಅಂದುಕೊಳ್ಳುವಷ್ಟರಲ್ಲಿ ಮಗ್ಗಲು ಮುಳ್ಳೊಂದನ್ನು ಹುಟ್ಟಿಕೊಂಡುಬಿಟ್ಟಿರುತ್ತದೆ.

ವಿಷ್ಣು ಜೀವನದಲ್ಲಿಯೂ ಇದೇ ಆಗಿದ್ದು, ಗಂಧದ ಗುಡಿ ಚಿತ್ರದ ಶೂಟಿಂಗ್ ಸಂದರ್ಭದಲ್ಲಿ ಆದ ಒಂದು ಅವಗಢ ಮೇಲಾಗಿ ಮಾಧ್ಯಮದ ತಪ್ಪು ಅಭಿಪ್ರಾಯದ ಪ್ರಚಾರ ವಿಷ್ಣುವಿನ ಇಡಿ ಜೀವನವನ್ನು ಹೋರಾಟದ ಹಾದಿಗೆ ತಂದು ನಿಲ್ಲಿಸಿದ್ದು ಇತಿಹಾಸ, ಮತ್ತು ಆ ಯುದ್ದದಲ್ಲಿ ಅವರು ಗೆದ್ದದ್ದು ಅತಿ ದೊಡ್ಡ ಇತಿಹಾಸ.