ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ತಾರಾ ಪರಿಚಯ » ಕಣ್ಣೀರಲ್ಲಿ ಕೈತೊಳೆಸಿದ ಶ್ರುತಿಗಿಂದು ಬರ್ತ್‌ಡೇ! (Shruthi | Chandrachud | Chakravarthy | Akka Thangi | Awwa)
ತಾರಾ ಪರಿಚಯ
Feedback Print Bookmark and Share
 
Shruthi
MOKSHA
ಕನ್ನಡದಲ್ಲಿ 120ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ ಎಲ್ಲರ ಮನೆಮಗಳಾಗಿ ಪ್ರತಿಯೊಬ್ಬರಲ್ಲೂ ಕಣ್ಣೀರಧಾರೆ ಹರಿಸಿದ ಚಿತ್ರನಟಿಯೆಂದರೆ ಅದು ಶ್ರುತಿ ಅಲ್ಲದೆ ಬೇರಾರು ಇರಲಾರರು. ಭಾವುಕ ದೃಶ್ಯಗಳಲ್ಲಿ ನಟಿಸಲು ಶ್ರುತಿ ಎತ್ತಿದ ಕೈ. ಗಂಡನಿಂದ ಮೋಸ ಹೋದಾಗ ಸೋಲು, ಮನೆಯಿಂದ ತಿರಸ್ಕೃತಳಾಗುವ ಅಬಲೆ ಹೆಣ್ಣು, ಅಣ್ಣತಂಗಿಯ ಸೆಂಟಿಮೆಂಟ್, ವರದಕ್ಷಿಣೆಯ ಕಿರುಕುಳ ತಾಳಲಾರದೆ ರೋಸಿಹೋದ ದುಃಖ ತಪ್ತ ಹೆಣ್ಣು.... ಹೀಗೆ ಒಂದೇ ಎರಡೇ... ಶ್ರುತಿ ನಟಿಸಿದ ಪಾತ್ರಗಳೆಲ್ಲವೂ ಹೆಣ್ಣಿನ ಮನದಾಳದ ತಾಕಲಾಟಗಳು, ಹೆಣ್ಣಿನ ಮೇಲ ಪುರುಷ ಶಕ್ತಿಯ ಅಟ್ಟಹಾಸಗಳೇ ಮೇಳೈಸುವ ಚಿತ್ರಗಳು. ಇಂತಿಪ್ಪ ಕಣ್ಣೀರ ಸುಂದರಿ ಶ್ರುತಿಗೆ ಇಂದು (ಸೆ.18) ಹುಟ್ಟುಹಬ್ಬದ ಸಂಭ್ರಮ.

ಹಾಗೆ ನಡಿದರೆ ಕಳೆದ ಬಾರಿಯ ಹುಟ್ಟುಹಬ್ಬಕ್ಕೂ ಈ ಬಾರಿಯ ಹುಟ್ಟುಹಬ್ಬಕ್ಕೂ ಶ್ರುತಿಯ ಜೀವನದಲ್ಲಿ ಸಾಕಷ್ಟು ಬದಲಾವಣೆಗಳು ಆಗಿ ಹೋಗಿವೆ. ಕಳೆದ ಬಾರಿ ಗಂಡ ನಿರ್ದೇಶಕ ಮಹೇಂದರ್ ಜತೆಗಿದ್ದ ಶ್ರುತಿ ಈ ಬಾರಿ ತಮ್ಮ ಜೀವನ ಹಾದಿಯನ್ನು ಮಹೇಂದರ್ ದಾರಿಯಿಂದ ಬದಲಿಸಿ ಪತ್ರಕರ್ತ, ನಿರ್ದೇಶಕ ಚಕ್ರವರ್ತಿಯ ಜತೆಗಿನ ಹಾದಿ ತುಳಿಯುತ್ತಿದ್ದಾರೆ. ಪತಿಗೆ ವಿಚ್ಛೇದನ ನೀಡಿ ಪತ್ರಕರ್ತರೊಬ್ಬರ ಕೈ ಹಿಡಿಯಲು ನಿರ್ಧರಿಸಿದ್ದು ಮಾಧ್ಯಮಗಳಲ್ಲಿ ಸಾಕಷ್ಟು ಚರ್ಚಿತವಾದ ಶ್ರುತಿಯ ಖಾಸಗಿ ಬದುಕು.

S. Mahender
MOKSHA
ಅದೇನೇ ಇರಲಿ. ಖಾಸಗಿ ಬದುಕು ಅವರವರ ಆಯ್ಕೆ ಎಂದು ಬಿಟ್ಟು ಹಾಕೋಣ. ಆದರೆ, ಶ್ರುತಿ ಎಂಬ ಅಪ್ಪಟ ಸಹಸ ಸೌಂದರ್ಯದ ತಾರೆಯ ಪ್ರತಿಭೆಯ ಬಗ್ಗೆ ಎರಡು ಮಾತೇ ಇಲ್ಲ. ಬೆಂಗಳೂರಿನಲ್ಲಿ ಹುಟ್ಟಿ ಹೊಳೆನರಸೀಪುರದ್ಲಲಿ ಬೆಳೆದು ಸಾಮಾನ್ಯ ಕುಟುಂಬದಲ್ಲಿ ಹುಟ್ಟಿದ ಶ್ರುತಿಯ ನಿಜವಾದ ಹೆಸರು ಪ್ರಿಯದರ್ಶಿನಿ. ಅಪ್ಪ ಅಮ್ಮನೊಂದಿಗೆ ನಾಟಕದ ಹುಚ್ಚು ಸಣ್ಣಂದಿನಲ್ಲೇ ಇದ್ದುದರಿಂದ ನಟನೆ ರಕ್ತಗತವಾಗಿತ್ತು. ಹೀಗಾಗಿ, ಆಸೆಗೊಬ್ಬ ಮೀಸೆಗೊಬ್ಬ ಎಂಬ ಚಿತ್ರದಲ್ಲಿ ನಾಯಕ ಶಿವರಾಜ್ ಕುಮಾರ್ ತಂಗಿಯಾಗಿ ಅಭಿನಯಿಸುವ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಶ್ರುತಿಯನ್ನು ಪೂರ್ಣ ಪ್ರಮಾಣದ ನಾಯಕಿಯನ್ನಾಗಿ ಮಾಡಿದ್ದು ದ್ವಾರಕೀಶ್. ದ್ವಾರಕೀಶ್ ನಿರ್ದೇಶನ, ನಿರ್ಮಾಣದ ಶ್ರುತಿ ಎಂಬ ಚಿತ್ರದಲ್ಲಿ ಶ್ರುತಿ ನಟಿಸಿದಾಗಲೇ ದ್ವಾರಕೀಶ್ ಪ್ರಿಯದರ್ಶಿನಿಯನ್ನು ಶ್ರುತಿ ಎಂದು ಹೆಸರಿಟ್ಟರು. ಮೊದಲ ಚಿತ್ರ ಶ್ರುತಿ 25 ವಾರಗಳ ಕಾಲ ಪ್ರದರ್ಶನ ಕಂಡು ಭಾರೀ ಯಶಸ್ಸು ಪಡೆಯಿತು.

ನಂತರ ತಾಯಿ ಇಲ್ಲದ ತವರು, ವೀರಪ್ಪ ನಾಯಕ, ಗೌರಿ ಗಣೇಶ, ಬೊಂಬಾಟ್ ಹೆಂಡ್ತಿ, ಮುದ್ದಿನ ಮಾವ, ಮಿಡಿದ ಹೃದಯಗಳು ಮತ್ತಿತರ ಕೆಲವು ಚಿತ್ರಗಳು ಶ್ರುತಿಯ ಜನಪ್ರಿಯ ಯಶಸ್ವಿ ಚಿತ್ರಗಳು. ಇದಲ್ಲದೆ, ಅಕ್ಕತಂಗಿ, ಅವ್ವ, ರಾಮ ಶಾಮ ಭಾವ, ಸಿಂಧೂರ ತಿಲಕ, ರಸಿಕ, ರುಪಾಯಿ ರಾಜ, ಟೈಂ ಬಾಂಬ್, ಅಳೀಮಯ್ಯ, ಪುಂಡ ಪ್ರಚಂಡ, ಮೆಚ್ಚಿದ ಮದುಮಗ, ಶಾಂಭವಿ, ಕ್ಷೀರ ಸಾಗರ, ಚಿತ್ರಲೇಖ, ಕಾದಂಬರಿ, ಅಮೃತ ಸಿಂಧು, ಸಿಬಿಐ ಶಿವ ಮತ್ತಿತರ ಸುಮಾರು 120ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.
Chakravarthy
MOKSHA


ಮನೆಯವರ ಇಚ್ಛೆಗೆ ವಿರುದ್ಧವಾಗಿ ಪ್ರೀತಿಸಿ ನಿರ್ದೇಶಕ ಎಸ್. ಮಹೇಂದರ್ ಅವರನ್ನು ಮದುವೆಯಾದ ಶ್ರುತಿ 10 ವರ್ಷಕ್ಕೂ ಹೆಚ್ಚು ಕಾಲ ಜತೆಯಾಗಿ ಸಂಸಾರ ಮಾಡಿದ್ದರು. ಆದರೆ ಶ್ರುತಿ ಹೇಳುವ ಪ್ರಕಾರ ಮದುವೆಯಾದ ಎರಡೇ ವರ್ಷಗಳಲ್ಲಿ ಸಂಸಾರದಲ್ಲಿ ಅಪಶ್ರುತಿ ಎದ್ದಿತ್ತು. ಇಷ್ಟು ವರ್ಷ ತಾಳ್ಮೆ ವಹಿಸಿ ಈಗ ತಡೆಯಲಾಗದೆ ಆ ಸಂಸಾರದಿಂದ ಹೊರಬಂದಿದ್ದೇನೆ ಎಂಬುದು ಶ್ರುತಿಯೇ ಹೇಳುವ ಮಾತು. ಅದೇನೇ ಇರಲಿ. ವಿಚ್ಛೇದನ್ಕಕೆ ಅಡಿಯಿಟ್ಟಾಗಿದೆ. ಅತ್ತ ಶ್ರುತಿಯ ಹೊಸ ಇನಿಯ ಚಂದ್ರಚೂಡ ಅಲಿಯಾಸ್ ಚಕ್ರವರ್ತಿ ತನ್ನ ಚಿತ್ರದ ಮುಹೂರ್ತ ಇಟ್ಟುಕೊಳ್ಳುವ ಮೂಲಕ ಹುಟ್ಟುಹಬ್ಬಕ್ಕೆ ಭಾರೀ ಉಡುಗೊರೆಯನ್ನೇ ನೀಡುತ್ತಿರುವುದು ಭಾರೀ ಸುದ್ದಿಯಾಗಿದೆ. ಸಹಜ ಸುಂದರಿ ಶ್ರುತಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ನೀವೂ ತಿಳಿಸಿ.

ಸಾಹಸ ಸಿಂಹ ವಿಷ್ಣು ಅವರಿಗೆ ಬರ್ತ್‌ಡೇ ವಿಶ್ ತಿಳಿಸಿ.
ರಿಯಲ್ ಸ್ಟಾರ್ ಉಪೇಂದ್ರರಿಗೂ ಹುಟ್ಟುಹಬ್ಬದ ಶುಭಾಶಯ ಕೋರಿ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಶ್ರುತಿ, ಚಂದ್ರಚೂಡ, ಮಹೇಂದರ್, ಅಕ್ಕ ತಂಗಿ, ಅವ್ವ