ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಬಜೆಟ್; ರೈಲ್ವೆ ನೌಕರರಿಗೆ ಭರ್ಜರಿ ಬಂಪರ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬಜೆಟ್; ರೈಲ್ವೆ ನೌಕರರಿಗೆ ಭರ್ಜರಿ ಬಂಪರ್
PTI
ನೌಕರರ ಮಕ್ಕಳಿಗಾಗಿಯೇ ವೈದ್ಯಕೀಯ ಕಾಲೇಜು, ರೈಲ್ವೆ ನೌಕರರ ಹೆಣ್ಣುಮಕ್ಕಳಿಗೆ ವಿದ್ಯಾರ್ಥಿವೇತನ, ನೌಕರರ ಸಹಾಯನಿಧಿ 350ರೂಪಾಯಿಗೆ ಏರಿಕೆ ಸೇರಿದಂತೆ ಈ ಬಾರಿಯ ಮಮತಾ ದೀದಿ ಮಂಡಿಸಿದ ರೈಲ್ವೆ ಬಜೆಟ್‌ನಲ್ಲಿ ಇಲಾಖೆಯ ನೌಕರರಿಗೆ ಬಂಪರ್ ‌ಕೊಡುಗೆಗಳು ಲಭಿಸಿವೆ.

ಒಟ್ಟು 14ಲಕ್ಷ ನೌಕರರನ್ನು ಹೊಂದಿರುವ ಬೃಹತ್ ವ್ಯವಸ್ಥೆಯಾಗಿರುವ ರೈಲ್ವೆ ಇಲಾಖೆಯಲ್ಲಿ ನೌಕರರ ಕಲ್ಯಾಣಕ್ಕೆ ಈ ಬಾರಿಯ ಬಜೆಟ್‌ನಲ್ಲಿ ಮಮತಾ ಬ್ಯಾನರ್ಜಿ ಹಲವು ಸೌಲಭ್ಯಗಳನ್ನು ಘೋಷಿಸಿದ್ದಾರೆ.

ಸಿಬ್ಬಂದಿ ವಸತಿ ಗೃಹಗಳು ಹಾಗೂ ಕಾಲೋನಿಗಳ ಅಭಿವೃದ್ಧಿಗೆ ಕಲ್ಯಾಣ ಯೋಜನೆಯಡಿ ತ್ವರಿತ ಕ್ರಮ ಕೈಗೊಳ್ಳುವುದು. 2009-10ನೇ ಸಾಲಿನಲ್ಲಿ ಒಟ್ಟು 6560 ಸಿಬ್ಬಂದಿ ವಸತಿ ಗೃಹ ನಿರ್ಮಿಸುವುದು.

ರೈಲ್ವೆ ನೌಕರರ ಮಕ್ಕಳಲ್ಲಿ ಕ್ರೀಡೆ, ಸಾಂಸ್ಕೃತಿಕ ಮತ್ತು ಪಠ್ಯೇತರ ಚಟುವಟಿಕೆಗಳನ್ನು ಪ್ರೋತ್ಸಾಹಿಸಲು ಪ್ರಮುಖ ರೈಲ್ವೆ ವಿಭಾಗಗಳು ಹಾಗೂ ವಲಯಗಳಲ್ಲಿ ಒಳಾಂಗಣ ಕ್ರೀಡಾಂಗಣ ನಿರ್ಮಾಣ.

ಪ್ರತಿಯೊಬ್ಬ ರೈಲ್ವೆ ನೌಕರರ ಸಹಾಯ ನಿಧಿಗೆ ಸರ್ಕಾರ ನೀಡುತ್ತಿದ್ದ ವಾರ್ಷಿಕ ಕೊಡುಗೆ 350ರೂ.ಗೆ ಹೆಚ್ಚಳ, ಇದರಲ್ಲಿ 100ರೂ.ಗಳು ಮಹಿಳಾ ಸಬಲೀಕರಣಕ್ಕೆ, ನೌಕರರ ಹೆಣ್ಣು ಮಕ್ಕಳ ಉನ್ನತ ಶಿಕ್ಷಣಕ್ಕೆ ಹಾಗೂ ಅಂಕವಿಕಲ ಮತ್ತು ಮನೋವಿಕಲ ಮಕ್ಕಳ ಕಲ್ಯಾಣಕ್ಕೆ ಬಳಕೆಯಾಗುವಂತೆ ನೋಡಿಕೊಳ್ಳುವುದು.

ರೈಲ್ವೆ ನೌಕರರ ಮಕ್ಕಳಿಗಾಗಿ ದೆಹಲಿ, ಕೋಲ್ಕತಾ, ಮುಂಬೈ, ಚೆನ್ನೈ, ಸಿಕಂದರಾಬಾದ್, ಲಕ್ನೋ ಮತ್ತು ಜಬಲ್ಪುರದಲ್ಲಿ ಖಾಸಗಿ ಮತ್ತು ಸರ್ಕಾರಿ ಸಹಭಾಗಿತ್ವದಲ್ಲಿ ನರ್ಸಿಂಗ್ ಕಾಲೇಜುಗಳ ನಿರ್ಮಾಣ.

ರೈಲ್ವೆ ಆಸ್ಪತ್ರೆಗಳಲ್ಲಿ ವೈದ್ಯಕೀಯ ಕಾಲೇಜುಗಳ ಆರಂಭ. ಇವುಗಳಲ್ಲಿ ರೈಲ್ವೆ ಇಲಾಖೆ ನೌಕರರ ಮಕ್ಕಳಿಗೆ ಮಾತ್ರ ಪ್ರವೇಶ, ರೈಲ್ವೆ ವೈದ್ಯಕೀಯ ಕಾಲೇಜುಗಳು ಚೆನ್ನೈ, ಹೈದರಾಬಾದ್, ಬಿಲಾಸ್ಪುರ್, ಲಕ್ನೋ, ಬರ್ಸಾತ್, ಭುವನೇಶ್ವರ, ಮೈಸೂರು, ಖರಗಪುರ್, ಗುವಾಹಟಿ, ದಿಬ್ರುಘರ್, ಗಾರ್ಡನ್‌ರೀಚ್, ನಾಗ್ಪುರ, ಅಹಮದಾಬಾದ್, ಬಿ.ಆರ್.ಸಿಂಗ್ ಆಸ್ಪತ್ರೆ, ಜಮ್ಮು, ತಿರುವನಂತಪುರಂಗಳಲ್ಲಿ ಆರಂಭವಾಗಲಿದೆ.

ಬಜೆಟ್ ಪೂರಕ ಓದಿಗಾಗಿ

ಕನ್ನಡಿಗ 'ಮುನಿಯ'ಲಿಲ್ಲ, ಆದರೂ ಅನ್ಯಾಯ ನಿಲ್ಲಲಿಲ್ಲ

ರೈಲ್ವೇ ಬಜೆಟ್: ಕರ್ನಾಟಕಕ್ಕೆ ಏನೇನ್ ಸಿಕ್ತು ಗೊತ್ತೇ?

ಬಜೆಟ್: ಕರ್ನಾಟಕಕ್ಕೆ ಬಂಪರ್; ಎಂಟು ಹೊಸ ರೈಲು
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಈ ಬಾರಿ ಬಜೆಟ್‌ಗಳಲ್ಲಿ ಬಂಗಾಲದ್ದೇ ಕಾರುಬಾರು..!
ಪ್ರಯಾಣದರ ಏರಿಕೆಯಿಲ್ಲ: ಪಶ್ಚಿಮ ಬಂಗಾಲ
ಆಫ್ರಿಕಾಕ್ಕೂ ಲಗ್ಗೆಯಿಡಲಿರುವ 'ಟಾಟಾ' ನ್ಯಾನೋ
ವೇತನ ವಿಳಂಬ: ಏರ್ ಇಂಡಿಯಾ ನೌಕರರಿಂದ ಮುಷ್ಕರ
ರೈಲ್ವೇಯಿಂದ ವಾರ್ಷಿಕ 40,745 ಕೋಟಿ ವಿನಿಯೋಗ
ಬಜೆಟ್: ಕರ್ನಾಟಕಕ್ಕೆ ಬಂಪರ್; ಏಳು ಹೊಸ ರೈಲು