| ರೈಲ್ವೇ ಬಜೆಟ್: ಕರ್ನಾಟಕಕ್ಕೆ ಏನೆಲ್ಲಾ ಸಿಕ್ಕಿದೆ ಗೊತ್ತೇ? | | | ನವದೆಹಲಿ, ಶುಕ್ರವಾರ, 3 ಜುಲೈ 2009( 18:28 IST ) | | | |
| | |
| ಮಮತಾ ಬ್ಯಾನರ್ಜಿ ಶುಕ್ರವಾರ ಮಂಡಿಸಿದ ರೈಲ್ವೇ ಬಜೆಟ್‌ನಲ್ಲಿ ಕರ್ನಾಟಕಕ್ಕೆ ಹೊಸದಾಗಿ 8 ರೈಲುಗಳು ಮಂಜೂರಾಗಿದ್ದು, 4 ರೈಲುಗಳ ಓಡಾಟವನ್ನು ವಿಸ್ತರಿಸಲಾಗಿದೆ ಮತ್ತು ವಾರಕ್ಕೆ ಮೂರು ಬಾರಿ ಓಡುತ್ತಿದ್ದ ಚೆನ್ನೈ-ಮಂಗಳೂರು ರೈಲನ್ನು ದಿನಂಪ್ರತಿಗೆ ಪರಿವರ್ತಿಸಲಾಗಿದೆ. ಕರ್ನಾಟಕಕ್ಕೆ ಏನೇನು ದಕ್ಕಿದೆ ಎಂಬುದರ ಪೂರ್ಣ ವಿವರ ಇಲ್ಲಿದೆ:ರಾಜ್ಯಕ್ಕೆ ಹೊಸದಾಗಿ ಲಭ್ಯವಾದ ರೈಲುಗಳು:1. ಬೆಂಗಳೂರು - ಹುಬ್ಬಳ್ಳಿ - ಸೋಲಾಪುರ ಸೂಪರ್ ಫಾಸ್ಟ್ (ವಾರಕ್ಕೆ ಮೂರು)2. ಹೌರಾ - ಬೆಂಗಳೂರು ಸೂಪರ್ ಫಾಸ್ಟ್ (ಸಾಪ್ತಾಹಿಕ)3. ಮುಂಬೈ - ಕಾರವಾರ ಸೂಪರ್ ಫಾಸ್ಟ್ (ವಾರಕ್ಕೆ ಮೂರು)4. ಹಜ್ರತ್ ನಿಜಾಮುದ್ದೀನ್ - ಬೆಂಗಳೂರು ರಾಜಧಾನಿ ಎಕ್ಸ್‌ಪ್ರೆಸ್ ವಯಾ ಕಾಚಿಗುಡ (ವಾರಕ್ಕೆ ಮೂರು)5. ಮೈಸೂರು-ಯಶವಂತಪುರ ಎಕ್ಸ್‌ಪ್ರೆಸ್ (ದೈನಿಕ)6. ಲಕ್ನೋ - ರಾಯ್‌ಬರೇಲಿ-ಬೆಂಗಳೂರು ಸೂಪರ್ ಫಾಸ್ಟ್ (ಸಾಪ್ತಾಹಿಕ)7. ಶಿವಮೊಗ್ಗ - ಬೆಂಗಳೂರು ಇಂಟರ್‌ಸಿಟಿ ಎಕ್ಸ್‌ಪ್ರೆಸ್ (ದೈನಿಕ)8. ಬೆಂಗಳೂರು -ಕೋಚುವೇಲಿ ಸೂಪರ್ ಫಾಸ್ಟ್ (ಸಾಪ್ತಾಹಿಕ).ಕರ್ನಾಟಕಕ್ಕೆ ಸಂಬಂಧಿಸಿ ವಿಸ್ತರಣೆಯಾದ ರೈಲುಗಳು:ಬೆಂಗಳೂರು-ಮಂಗಳೂರು ದೈನಿಕ ರೈಲು ಕಣ್ಣೂರುವರೆಗೆಮೈಸೂರು-ತಿರುಪತಿ ದೈನಿಕ ರೈಲು ಚಾಮರಾಜ ನಗರಕ್ಕೆಮಂಗಳೂರು-ಚೆನ್ನೈ ಸಾಪ್ತಾಹಿಕ ರೈಲು ಪುದುಚೇರಿವರೆಗೆಬೆಂಗಳೂರು-ಹುಬ್ಬಳ್ಳಿ ಇಂಟರ್‌ಸಿಟಿ ದೈನಿಕ ರೈಲು ಧಾರವಾಡಕ್ಕೆರಾಜ್ಯಕ್ಕೆ ಸಂಬಂಧಿಸಿ ಓಡಾಟ ವಿಸ್ತರಣೆಯಾದ ರೈಲು:ಚೆನ್ನೈ-ಮಂಗಳೂರು ವಾರಕ್ಕೆ ಮೂರು ದಿನ ಇದ್ದದ್ದು ಪ್ರತಿ ದಿನ ಓಡಲಿದೆಹೊಸ ರೈಲು ಮಾರ್ಗ ನಿರ್ಮಾಣ ಯೋಜನೆ:ಕೊಟ್ಟೂರು-ಹರಿಹರ ಯೋಜನೆಹಳಿ ದ್ವಿಗುಣಗೊಳಿಸುವ ಯೋಜನೆ:ಯಶವಂತಪುರ-ಯಲಹಂಕ, ಯಲಹಂಕ-ಚೆನ್ನಸಂದ್ರಹೊಸ ಮಾರ್ಗ ನಿರ್ಮಾಣದ ಅಂಗೀಕಾರಕ್ಕೆ ಮಮತಾ ಬ್ಯಾನರ್ಜಿ ಶಿಫಾರಸು ಮಾಡಿರುವ ಪ್ರಸ್ತಾವನೆಗಳು:ಚಿಕ್ಕಬಳ್ಳಾಪುರ-ಶ್ರೀಸತ್ಯಸಾಯಿ ಪ್ರಶಾಂತಿ ನಿಲಯಂಆಲಮಟ್ಟಿ-ಕೊಪ್ಪಳಯಾದಗಿರ್ - ಶಹಾಪುರ - ಶೋರಾಪುರ - ಮದ್ದೇಬಿಹಾಳ-ಆಲಮಟ್ಟಿಗದಗ-ಹಾವೇರಿಗದಗ-ವಾಡಿಗದಗ-ಹಾವೇರಿಶಿವಮೊಗ್ಗ-ಹರಿಹರಆನೆಕಲ್ ರೋಡ್ - ಬಿಡದಿನಾಂದೇಡ್-ಬೀದರ್* ಗುಂತಕಲ್-ಗುಟಿ-ಬೆಂಗಳೂರು ರೈಲು ಮಾರ್ಗ ವಿದ್ಯುದೀಕರಣ ಯೋಜನೆಗೆ ಸರ್ವೇ ನಡೆಸಲಾಗುತ್ತದೆ.* ಬೆಂಗಳೂರು ನಗರ, ಬೆಂಗಳೂರಿನ ಬೈಯಪ್ಪನಹಳ್ಳಿ ಮತ್ತು ಮಂಗಳೂರು ನಿಲ್ದಾಣಗಳನ್ನು ವಿಶ್ವದರ್ಜೆಗೆ ಏರಿಸಲಾಗುತ್ತದೆ.* ಆದರ್ಶ ನಿಲ್ದಾಣಗಳನ್ನಾಗಿ ಪರಿವರ್ತಿಸುವ ದೇಶದ ಒಟ್ಟು 375 ನಿಲ್ದಾಣಗಳಲ್ಲಿ ಬೇಲೂರು, ಬೀದರ್, ಶಿವಾಜಿನಗರ, ಸಾಗರ ನಿಲ್ದಾಣಗಳು ಸೇರಿವೆ.* ಕರ್ನಾಟಕದ ಹುಬ್ಬಳ್ಳಿ, ಮೈಸೂರು ಸಹಿತ ದೇಶದಲ್ಲಿ 49 ರೈಲು ನಿಲ್ದಾಣಗಳಲ್ಲಿ ಶಾಪಿಂಗ್, ಆಹಾರವಸ್ತು, ರೆಸ್ಟೋರೆಂಟ್, ಬುಕ್ ಸ್ಟಾಲ್, ಟೆಲಿಫೋನ್ ಬೂತ್, ಔಷಧ, ಬಜೆಟ್ ಹೋಟೆಲ್‌ಗಳು, ಅಂಡರ್‌ಗ್ರೌಂಡ್ ಪಾರ್ಕಿಂಗ್ ಮುಂತಾದ ವ್ಯವಸ್ಥೆಯುಳ್ಳ ಬಹು ಕಾರ್ಯ ಸಂಕೀರ್ಣಗಳ ಸ್ಥಾಪನೆ.* ದೀರ್ಘ ದೂರ ಪ್ರಯಾಣಿಸುವ ರೈಲುಗಳಲ್ಲಿ ಆಂಬುಲೆನ್ಸ್ ಸೇವೆಯನ್ನು ಪ್ರಾರಂಭಿಕವಾಗಿ ಅಳವಡಿಸುವ ದೇಶದ ಪ್ರಮುಖ ನಗರಗಳಲ್ಲಿ ಬೆಂಗಳೂರು ಕೂಡ ಸೇರಿದೆ. ಉಳಿದವೆಂದರೆ ಚೆನ್ನೈ, ದೆಹಲಿ, ಹೈದರಾಬಾದ್, ಮುಂಬೈ, ಕೋಲ್ಕತಾ ಮತ್ತು ಭುವನೇಶ್ವರ.* ಈಗಿರುವ ರೈಲ್ವೇ ಆಸ್ಪತ್ರೆಗಳಿಗೆ ಸಾರ್ವಜನಿಕ-ಖಾಸಗಿ ಪಾಲುದಾರಿಕೆಯಲ್ಲಿ ಹೊಸದಾಗಿ ಮೆಡಿಕಲ್ ಕಾಲೇಜುಗಳನ್ನು ಸೇರಿಸಲಾಗುತ್ತಿದ್ದು, ಮೈಸೂರಿನ ರೈಲ್ವೇ ಇಲಾಖೆ ನೌಕರರಿಗೂ ಈ ಸೌಲಭ್ಯ ಒದಗಿ ಬರಲಿದೆ. ಉಳಿದಂತೆ ಚೆನ್ನೈ, ಹೈದರಾಬಾದ್, ದೋಝಪುರ, ಅಹಮದಾಬಾದ್, ನಾಗ್ಪುರ, ಜಮ್ಮು, ತಿರುವನಂತಪುರಂ, ಗುವಾಹಟಿ ಮುಂತಾದ ಸ್ಥಳಗಳಲ್ಲಿಯೂ ವೈದ್ಯಕೀಯ ಕಾಲೇಜು ಸ್ಥಾಪಿಸಲಾಗುತ್ತದೆ.* ಬೆಂಗಳೂರು, ದೆಹಲಿ, ಮುಂಬೈ, ಚೆನ್ನೈ, ಸಿಕಂದರಾಬಾದ್ ರೈಲ್ವೇ ಆಸ್ಪತ್ರೆಗಳಲ್ಲಿ ಸುಟ್ಟ ಗಾಯ ಚಿಕಿತ್ಸಾ ಘಟಕಗಳ ಸ್ಥಾಪನೆ.* ಬೆಂಗಳೂರಿನ ರೈಲು ಗಾಲಿ ಕಾರ್ಖಾನೆಯು 2007-08ಕ್ಕೆ ಹೋಲಿಸಿದರೆ, 1,96,261 ಗಾಲಿಗಳನ್ನು ಉತ್ಪಾದಿಸುವ ಮೂಲಕ 2008-09ರಲ್ಲಿ ಅದ್ಭುತವಾದ ಶೇ.35 ಏಳಿಗೆ ದಾಖಲಿಸಿದೆ. 20009-10ರ ಉತ್ಪಾದನಾ ಗುರಿ 2,00,000 ಗಾಲಿಗಳು.ಸಮಗ್ರ ರೈಲ್ವೇ ಬಜೆಟ್ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ. |
| |
| | |
| | | |
|
| | |
|
|
| | |
|
|
| |
| ![](/images/spacer5.gif) | |