ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಈರುಳ್ಳಿ, ಬೆಳ್ಳುಳ್ಳಿ ಸಹಿತ ಚೀಲಗಳನ್ನೇ ಹೊತ್ತೊಯ್ದ ಕಳ್ಳರು! (Onion | Garlic | Theft | Bidar)
Bookmark and Share Feedback Print
 
PTI
ಇಲ್ಲೊಂದು ಭರ್ಜರಿ ದರೋಡೆ ನಡೆದಿದೆ. ಹಾಗಂತ ಇದು ಆಸ್ತಿಗಾಗಿ, ಚಿನ್ನಕ್ಕಾಗಿ ನಡೆದ ದರೋಡೆಯಲ್ಲ. ಈ ಬೆಲೆ ಏರಿಕೆ ಯುಗದಲ್ಲಿ ಚಿನ್ನ, ವಜ್ರ, ಮುತ್ತು, ರತ್ನಗಳನ್ನೆಲ್ಲಾ ಬಿಟ್ಟ ಕಳ್ಳರು, ಬಹುಮೂಲ್ಯ ಈರುಳ್ಳಿ, ಬೆಳ್ಳುಳ್ಳಿಯನ್ನೇ ಕದಿಯಲು ಹೊರಟಿದ್ದಾರೆ!

ಕ್ಷಣ ಕ್ಷಣದ ತಾಜಾ ಸುದ್ದಿಗಳಿಗೆ, ವಿಶೇಷ ಸುದ್ದಿಗಳಿಗೆ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಬೆಲೆ ಏರಿಕೆಗೆ ಕೊನೆಗೂ ಎಚ್ಚೆತ್ತು ಸಭೆ ಕರೆದ ಪ್ರಧಾನಿ


ಹೌದು, ಕಳ್ಳರ ದೃಷ್ಟಿ ಇದೀಗ ಆಭರಣದಂಗಡಿಗಳ ಬದಲು ತರಕಾರಿ ಅಂಗಡಿಗಳ ಮೇಲೆ ನೆಟ್ಟಿದೆ ಎಂಬುದಕ್ಕೆ ಜ್ವಲಂತ ಉದಾಹರಣೆ ಇಲ್ಲಿದೆ. ಸೋಮವಾರ ಬೀದರ್‌ನ ಹಾರೋಗೇರಿ ಕ್ರಾಸ್ ಎಂಬಲ್ಲಿನ ಭಾರತ್ ತರಕಾರಿ ಅಂಗಡಿಯ ತಗಡಿನ ಶೀಟು ತೆಗೆದು ನುಗ್ಗಿದ ಕಳ್ಳರು, ಈರುಳ್ಳಿ ಮತ್ತು ಬೆಳ್ಳುಳ್ಳಿ ಚೀಲಗಳನ್ನು ಕದ್ದೊಯ್ದಿದ್ದಾರೆ. ಬೇರಾವುದೇ ತರಕಾರಿಗಳೂ ಅವರಿಗೆ ಬೇಕಿರಲಿಲ್ಲವಾದ್ದರಿಂದ ಅವುಗಳನ್ನು ಮುಟ್ಟಿರಲಿಲ್ಲ.

ತಲಾ 50 ಕಿಲೋ ತೂಗುವ ಈರುಳ್ಳಿ-ಬೆಳ್ಳುಳ್ಳಿಯಿದ್ದ ಎರಡೆರಡು ಗೋಣಿ ಚೀಲಗಳು ಕಳವಾಗಿರುವ ಬಗ್ಗೆ ಅಂಗಡಿ ಮಾಲೀಕ ಅಬ್ದುಲ್ ಗನಿ ಗಾಂಧಿಗಂಜ್ ಪೊಲೀಸರಿಗೆ ದೂರು ನೀಡಿದ್ದಾರೆ. ಬೆಳ್ಳುಳ್ಳಿ ಬೆಲೆ ಕೆಜಿಗೆ 300ರಿಂದ 350 ರೂಪಾಯಿಯಷ್ಟು ಮೇಲಕ್ಕೇರಿದ್ದರೆ, ಈರುಳ್ಳಿ ಬೆಲೆ 50-60ರಲ್ಲೇ ತೂಗಾಡುತ್ತಿದೆ. ಇಷ್ಟು ಭರ್ಜರಿ ಬೆಲೆ ಇರುವಾಗ ಕಳ್ಳರು ಅದನ್ನು ಬಿಟ್ಟಾರೇ?

ಇದೀಗ ಈರುಳ್ಳಿ-ಬೆಳ್ಳುಳ್ಳಿ ವ್ಯಾಪಾರಿಗಳು ಅಂಗಡಿಗಳ ರಕ್ಷಣೆಗಾಗಿ ಕೋರಿ ಪೊಲೀಸರ ಮೊರೆ ಹೋಗಿದ್ದಾರೆ. ಇದು ಬೆಲೆ ಏರಿಕೆ ಬಗ್ಗೆ ಸುಮ್ಮನೇ ಕುಳಿತಿರುವ ಆಡಳಿತಾರೂಢರ ಆಳ್ವಿಕೆಗೊಂದು ಸಾಕ್ಷಿಯೂ ಆಯಿತಲ್ಲಾ...!
ಸಂಬಂಧಿತ ಮಾಹಿತಿ ಹುಡುಕಿ