ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಪ್ರಚಲಿತ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮೋದಿ, ಮಾಧ್ಯಮ ಮತ್ತು ರಾಜಕೀಯ
ಸೋನಿಯಾ ಬೆನ್ ಎಂದೇ ಭಾಷಣ ಶುರು ಮಾಡುತ್ತಿದ್ದ ಮೋದಿ ಪದೇ ಪದೇ ಕೇಳಿದ್ದು ಒಂದೇ ಪ್ರಶ್ನೆಯನ್ನು, ನಿಮ್ಮ ಪಕ್ಷದ ಮೂರು ವರ್ಷಗಳ ಆಡಳಿತದಲ್ಲಿ 5619 ಮುಗ್ಧರು ಜೆಹಾದಿಗಳ ಅಟ್ಟಹಾಸಕ್ಕೆ ಬಲಿಯಾಗಿದ್ದಾರೆ. ಹಾಗಿದ್ದರೆ ಸಾವಿನ ವ್ಯಾಪಾರಿಗಳು ಯಾರು ? ಅಂತಹ ಸಾವಿನ ವ್ಯಾಪಾರಿಗಳಿಗೆ ರಕ್ಷಣೆ ನೀಡುತ್ತಿರುವವರು ಯಾರು ? ಈ ಪ್ರಶ್ನೆಗಳಿಗೆ ತನ್ನ ತಪ್ಪುಗಳ ಕಾರಣ ಉತ್ತರ ನೀಡದೇ ಸೋತಿರುವ ಸಾಧ್ಯತೆ ಇದೆ.

ಇನ್ನು ಮಾಧ್ಯಮ ಮತ್ತು ರಾಜಕೀಯಕ್ಕೆ ಚುನಾವಣೆಯಲ್ಲಿ ಸಂಪೂರ್ಣ ವಿಫಲವಾದವು. ಜಾತಿ ರಾಜಕಾರಣಕ್ಕೆ ಸಿದ್ದವಾಗಿ ನಿಂತ ಕೇಶುಭಾಯ್ ಪಟೇಲ್‌ರನ್ನು ಸೌರಾಷ್ಟ್ರದಲ್ಲಿನ ಪಟೇಲರೇ ತಿರಸ್ಕರಿಸಿದ್ದಾರೆ. ಹೀಗಾಗಿ ರಾಜಕೀಯವನ್ನು ಮೀರಿ ಮೋದಿ ಬೆಳೆದು ಬಿಟ್ಟಾಗಿದೆ. ಮೋದಿ ಜನಪ್ರಿಯತೆ ಪಕ್ಷಕ್ಕೆ ವರವೂ ಆಗಬಹುದು ಮುಳುವು ಆಗಬಹುದು.

ಚುನಾವಣೆಯಲ್ಲಿ ಮಾಧ್ಯಮದ ಪಾತ್ರದ ಕುರಿತು ಹೇಳಬೇಕು ಎಂದರೆ ದೃಶ್ಯ ಮಾಧ್ಯಮ ಚುನಾವಣೆಯ ನಂತರ ನಡೆಸಿದ ಸಮೀಕ್ಷೆಯಲ್ಲಿ ಮೋದಿ ಪುನಃ ಅಧಿಕಾರಕ್ಕೆ ಬರುವುದು ಖಚಿತ ಎಂದು ಹೇಳಿತ್ತು. ಸ್ಥಾನಗಳ ಸಂಖ್ಯೆ ಸ್ವಲ್ಪ ಹೆಚ್ಚು ಕಡಿಮೆಯಾಗಿರಬಹುದು ಸಮೀಕ್ಷೆ ಸರಿಯಾಗಿತ್ತು ಎಂದು ಹೇಳಲು ಅಡ್ಡಿಯಿಲ್ಲ.

ಸುದ್ದಿ ನೀಡುವುದರ ಜೊತೆಗೆ ಮಾಧ್ಯಮಕ್ಕೆ ಇನ್ನೊಂದು ಮಹತ್ವದ ಜವಾಬ್ದಾರಿ ಇದೆ ಅದು ಜನಾಭಿಪ್ರಾಯ ಮೂಡಿಸುವುದು. 2002ರಲ್ಲಿನ ಗೋಧ್ರಾ ಹತ್ಯಾಕಾಂಡ, ಸೋಹ್ರಾಬುದ್ದೀನ್ ನಕಲಿ ಎನಕೌಂಟರ್‌ಗಳನ್ನು ಪದೇ ಪದೇ ಎತ್ತಿ ತೋರಿಸುವ ಮೂಲಕ ಮೋದಿ ವಿರುದ್ಧ ಜನಾಭಿಪ್ರಾಯ ಮೂಡಿಸುವ ಪ್ರಯತ್ನ ಮಾಡುತ್ತಿದ್ದವೋ ಏನೊ ? ದೋಷಗಳೊಂದಿಗೆ ಮೋದಿಯ ಆಡಳಿತ ಶೈಲಿ, ಅಭಿವೃದ್ದಿ ಪರ ಚಿಂತನೆಯನ್ನು ಜನರಿಗೆ ಸರಿಯಾದ ರೀತಿಯಲ್ಲಿ ಮಾಧ್ಯಮಗಳು ಮುಟ್ಟಿಸಿದ್ದರೆ ಮಾಧ್ಯಮದ ಅಭಿಪ್ರಾಯಗಳಿಗೆ ಜನರ ಸಹಮತ ಇರುತ್ತಿತ್ತು. ಇನ್ನು ತೆಹಲ್ಕಾ ನಡೆಸಿದ ಕುಟುಕು ಕಾರ್ಯಾಚರಣೆ ಜನಾದೇಶದ ವಿರುದ್ಧ ಸೋತಿದೆ. ಮಾಧ್ಯಮವೊಂದು ಪಕ್ಷದ ವಿರುದ್ಧ ಇಲ್ಲವೇ ದ್ವೇಷ ಸಾಧನೆಗೆ ನಿಂತರೆ ಜನರಲ್ಲಿ ಅದರ ಮೌಲ್ಯ ಏನು ಎನ್ನುವುದನ್ನು ಗುಜರಾತ್ ಚುನಾವಣೆಯ ಫಲಿತಾಂಶ ಎತ್ತಿತೋರಿಸಿದೆ.
 << 1 | 2   
ಮತ್ತಷ್ಟು
ಬಿಜೆಪಿ ವಿಜಯ : ದಿಲ್ಲಿ ಗದ್ದುಗೆಯಲ್ಲಿ ಪಶ್ಚಾತ್ ಕಂಪನ
ಮೋದಿ ಮೋಡಿಗೆ ಮತ್ತೆ ಅರಳಿದ '' ಕಮಲ''
ನನ್ನ ವೆಬ್‌ದುನಿಯಾ: ನಿಮ್ಮದೇ ಪೋರ್ಟಲ್ ರಚಿಸಿ
ಜಾರಿಯಾಗದ ಗಲ್ಲುಶಿಕ್ಷೆ: ಹುಯಿಲೆಬ್ಬಿಸಿದ ಬಿಜೆಪಿ
ರಥ ಯಾತ್ರಿ - ಈಗ ಬಿಜೆಪಿಯ ಮಹಾರಥಿ
ವಿಕಲಾಂಗರ ಬದುಕಲ್ಲಿ ಚೈತನ್ಯ ಸಾಧ್ಯವೇ?