ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಪ್ರಚಲಿತ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಐಐಟಿ-ಜೆಇಇ ಒಂದು ಸವಾಲೇ?
ಮೊದಲ ಪ್ರಯತ್ನದಲ್ಲಿ ಯಶಸ್ವಿಯಾಗುವುದು ಹೇಗೆ?
ನವೀನ್ ಗುಪ್ತ
ಐಐಟಿ-ಜೆಇಇಯು ವಿಶ್ವದಲ್ಲೇ ಅತ್ಯಂತ ಕಠಿಣತಮ ಪರೀಕ್ಷೆಗಳನ್ನು ಹಮ್ಮಿಕೊಳ್ಳುತ್ತದೆ. ಎಂಜಿನಿಯರಿಂಗ್ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ಪ್ರತಿ ವಿದ್ಯಾರ್ಥಿಯೂ ಐಐಟಿಯ ಕನಸು ಕಾಣದಿಲ್ಲ. ಪ್ರತಿವರ್ಷ ಸುಮಾರು ಎರಡು ಲಕ್ಷ ವಿದ್ಯಾರ್ಥಿಗಳು ಐಐಟಿ-ಜೆಇಇ ಪರೀಕ್ಷೆಗೆ ಹಾಜರಾಗುತ್ತಾರೆ. ಇವರಲ್ಲಿ ಕೇವಲ 3000 ವಿದ್ಯಾರ್ಥಿಗಳ ಕನಸುಗಳು ಮಾತ್ರ ನನಸಾಗುತ್ತವೆ.

ಯಾಕೆ ಮೂರು ಸಾವಿರ ವಿದ್ಯಾರ್ಥಿಗಳು ಮಾತ್ರ ಆಯ್ಕೆಯಾಗುತ್ತಾರೆ?
ಯಾಕೆಂದರೆ ಇಷ್ಟು ವಿದ್ಯಾರ್ಥಿಗಳು ಮಾತ್ರ ಸೂಕ್ತ ಕಾರ್ಯತಂತ್ರದ ತಯಾರಿ ನಡೆಸುತ್ತಾರೆ. ಹೆಚ್ಚಿನ ವಿದ್ಯಾರ್ಥಿಗಳಿಗೆ ಈ ಪರೀಕ್ಷಾ ತಯಾರಿಗಳನ್ನು ಯಾವಾಗ ಆರಂಭಿಸಬೇಕು ಎಂಬುದು ತಿಳಿದಿರುವುದಿಲ್ಲ. ಪ್ರತಿಯೊಬ್ಬರಿಗೂ ಮೂರು ಆಯ್ಕೆಗಳಿವೆ.
ಪ್ಲಸ್ 2 ತರಗತಿಯ ಮಂಡಳಿ ಪರೀಕ್ಷೆಗಳ ಬಳಿಕ
ಪ್ಲಸ್ 1 ತರಗತಿ ಪರೀಕ್ಷೆ ಬಳಿಕ
ಹತ್ತನೆ ತರಗತಿ ಪರೀಕ್ಷೆ ಬಳಿಕ

ಐಐಟಿ ಮತ್ತು ಜೆಇಇ ಪರೀಕ್ಷೆಗಳ ಹೊಸ ಮಾದರಿಯ ಪ್ರಕಾರ ವಿದ್ಯಾರ್ಥಿಗಳಿಗೆ ಎರಡು ಪ್ರಯತ್ನಗಳು ಮಾತ್ರ ಲಭ್ಯ. ಒಂದು ಪ್ಲಸ್ 2 ಜತೆಗೆ, ಮತ್ತೊಂದು ಪ್ಲಸ್ 2 ಉತ್ತೀರ್ಣವಾದ ಬಳಿಕ. ಹಾಗಾಗಿ ಇಂತಹ ಪರಿಸ್ಥಿತಿಯಲ್ಲಿ ಈ ಪರೀಕ್ಷೆಗಳಿಗೆ ಸಿದ್ಧತೆ ನಡೆಸಲು ಹತ್ತನೆ ತರಗತಿ ಪರೀಕ್ಷೆ ಬಳಿಕ (ಪ್ಲಸ್ 1 ಕಲಿಯುತ್ತಿರುವ) ಪ್ರಶಸ್ತ ಸಮಯ. ಏಕೆಂದರೆ ಹತ್ತನೆ ತರಗತಿ ವಿದ್ಯಾರ್ಥಿ ಹೊಸದಾಗಿ ವಿಶೇಷವಾದುದನ್ನು ಕಲಿಯಲು ಇಚ್ಛಿಸುತ್ತಾನೆ. ಐಐಟಿ-ಜೆಇಇ ಪರೀಕ್ಷಾ ತಯಾರಿಗೆ ಪ್ಲಸ್ 1 ಪಠ್ಯಸೂಚಿಯು ಪ್ರಾಮುಖ್ಯವಾದುದು. ವಿದ್ಯಾರ್ಥಿಯು ಮೂಲಭೂತ ಪರಿಕಲ್ಪನೆಗಳಲ್ಲಿ ಸದೃಢವಾಗಿರಬೇಕಾಗುತ್ತದೆ. ಹೀಗಿದ್ದಲ್ಲಿ ಮಾತ್ರ ಮೊದಲನೆ ಪ್ರಯತ್ನದಲ್ಲೇ ಪಾಸಾಗಬಹುದಾಗಿದೆ.

ಕಠಿಣ ಆಯ್ಕೆಗಳು! ಆದರೆ ಹೆದರುವಂತಹುದೇನಿಲ್ಲ. ಸೂಕ್ತ ಯೋಜನೆಯ ಕಾರ್ಯತಂತ್ರವು ಅಚ್ಚರಿಯ ಫಲಿತಾಂಶನೀಡಬಲ್ಲುದು. ಪ್ರವೇಶ ಪರೀಕ್ಷೆಗಳು ಕಠಿಣವಾಗುತ್ತಿವೆ. ವರ್ಷದಿಂದ ವರ್ಷಕ್ಕೆ ವಿದ್ಯಾರ್ಥಿಗಳು ಹೆಚ್ಚು ಗಂಭೀರ, ಹೆಚ್ಚು ಸಿದ್ಧತೆಯ, ಸಾಂದ್ರವಾಗಿ ತರಬೇತು ಹೊಂದಿದ, ಏಕಾಗ್ರತೆಯ ಮತ್ತು ಯಶಸ್ಸಿನ ಇಚ್ಛಾಶಕ್ತಿಯನ್ನು ಹೊಂದಿದವರಾಗುವ ಕಾರಣ ತಯಾರಿಯು ಉತ್ತಮ ಮಟ್ಟದಲ್ಲಿರಬೇಕು. ಶಿಕ್ಷಣದ ಗುಣಮಟ್ಟದೊಂದಿಗೆ ರಾಜಿಯಾಗಲು ಸಾಧ್ಯವೇ ಇಲ್ಲ. ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರಗಳನ್ನು ಧೈರ್ಯ, ವಿಶ್ವಾಸ ಮತ್ತು ದೃಢನಿರ್ಧಾರದೊಂದಿಗೆ ಕೈಗೊಳ್ಳುವ ಮಂದಿ ತಮ್ಮ ಗುರಿ ಸಾಧಿಸುತ್ತಾರೆ. ಸೂಕ್ತ ಮಾರ್ಗದರ್ಶನ ಮತ್ತು ಸೂಕ್ತ ಸಂಯೋಜನೆಯ ವಿಚಾರವಿದು. (ಕಲ್ಪನೆಗಳ ಸ್ಪಷ್ಟತೆ + ತಾಂತ್ರಿಕತೆ)

ಮೊದಲ ಹಂತದಲ್ಲಿ ಈ ಕಾರ್ಯತಂತ್ರಗಳನ್ನು ಹಮ್ಮಿಕೊಳ್ಳಿ

ನಿಮ್ಮ ಮೇಲೆ ನಂಬಿಕೆ ಇರಲಿ:
ಉತ್ತಮ ಮನಸ್ಸಿನೊಂದಿಗೆ ಆರಂಭಿಸಿ. ಯಾವಾಗಲು ಧನಾತ್ಮಕ ಮನೋಭಾವವಿರಲಿ. ನಿರಂತರತೆ ಮತ್ತು ನಿಯತತೆಯನ್ನು ಮುರಿಯದಿರಿ. ಪರೀಕ್ಷೆಯ ಕುರಿತ ಎಲ್ಲ ಭ್ರಮೆಗಳಿಂದ ಹೊರಬನ್ನಿ ಮತ್ತು ನೀವದನ್ನು ಸಾಧಿಸಬಲ್ಲಿರಿ ಎಂಬುದನ್ನು ಯಾವಾಗಲು ನಂಬಿ ಮತ್ತು ಯಾವತ್ತಿಗೂ ನಿಮ್ಮ ಪ್ರಯತ್ನವನ್ನು ಅರ್ಧಕ್ಕೆ ಬಿಡಬೇಡಿ.
1 | 2  >>  
ಮತ್ತಷ್ಟು
ಹೋರಾಡು ಕನ್ನಡಿಗ- ಉಗ್ರರ ಬೇರು ಕೀಳಲು, ಆಡಳಿತ ಎಚ್ಚೆತ್ತುಕೊಳ್ಳಲು!
ಇಂಧನ ಬೆಲೆ ಏರಿಕೆ: ಅಂತಿಮ ಹೊರೆ ಜನರ ಮೇಲೆ
ಮದುವೆ ವಿಷಯದಲ್ಲೂ ಈತ ಚಿನ್ನದ ಹುಡುಗನೇ
ಪತ್ರಿಕೋದ್ಯಮದಲ್ಲಿ ಕೈಯಾಡಿಸಲಿರುವ ಪ್ರಿನ್ಸ್ ವಿಲಿಯಂ
ಗಣರಾಜ್ಯೋತ್ಸವ ದಿನಾಚರಣೆಗಾಗಿ ವಿಶೇಷ ಪುಟ
ದೇವೇಗೌಡ್ರ ಮಾತು ಕನ್ನಡಿಗರೆಲ್ಲಾ ಒಪ್ತಾರೆ!