ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಪ್ರಚಲಿತ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಐಐಟಿ-ಜೆಇಇ ಒಂದು ಸವಾಲೇ?
ಮೊದಲ ಪ್ರಯತ್ನದಲ್ಲಿ ಯಶಸ್ವಿಯಾಗುವುದು ಹೇಗೆ?
ಬೇಗ ಆರಂಭಿಸಿ:
ಪ್ಲಸ್ 1 ತರಗತಿಯಿಂದಲೇ ನಿಮ್ಮ ತಯ್ಯಾರಿ ಆರಂಭಿಸಿ. ಆಯ್ಕೆಯಾಗಿರುವ ಮೊದಲ 100 ವಿದ್ಯಾರ್ಥಿಗಳಲ್ಲಿ ಹೆಚ್ಚಿನವರು ಪ್ಲಸ್ 1 ನಿಂದ ತಯಾರಿ ಆರಂಭಿಸಿದವರು.

ಸರಿಯಾದ ಮಾರ್ಗದರ್ಶಿಯನ್ನು ಆರಿಸಿ:
ಉತ್ತಮ, ಸೂಕ್ತ, ತಕ್ಕುದಾದ ತರಗತಿ, ಯೋಜನೆ/ಅಂಚೆಶಿಕ್ಷಣಕ್ಕೆ ಸೇರ್ಪಡೆಗೊಳ್ಳಿ. ಇಂದಿನ ಸ್ಫರ್ಧಾ ಜಗತ್ತಿನಲ್ಲಿ, ನಿಮ್ಮ ಸ್ಫರ್ಧಿ ನಿಮ್ಮನ್ನು ದಾಟಿ ಮುಂದುವರಿಯುವಂತೆ ನೀವು ಬಿಡುವಂತಿಲ್ಲ.

ಒಂದೇ ಕಡೆ ಕೇಂದ್ರೀಕರಣಗೊಳ್ಳಿ:
ಹಲವಾರು ಕೋರ್ಸ್‌ಗಳಿಗೆ ಸೇರುವುದು ಅಥವಾ ಹಲವಾರು ಪುಸ್ತಕಗಳನ್ನು ಓದುವುದಾಗಲಿ ಮಾಡಬೇಡಿ. ನಿಮ್ಮ ಸೀನಿಯರ್ ವಿದ್ಯಾರ್ಥಿಗಳೊಂದಿಗೆ ಸಮಾಲೋಚನೆ ಮಾಡಿ ಆರಂಭದಲ್ಲಿಯೇ ನಿಮ್ಮ ತರಬೇತಿ ಕೋರ್ಸ್ ಮತ್ತು ಪುಸ್ತಕಗಳನ್ನು ನಿರ್ಧರಿಸಿ, ಮತ್ತು ಅದಕ್ಕೆ ಅಂಟಿಕೊಳ್ಳಿ. ಈ ವಿಚಾರದಲ್ಲಿ ಚಂಚಲತೆ ಬೇಡ.

ನಿಮ್ಮ ಅಧ್ಯಯನ ಮತ್ತು ವೇಳಾಪಟ್ಟಿಯನ್ನು ಯೋಜಿಸಿ:
ನೀವು ಶಾಲೆಗೆ ತೆರಳುವ ವಿದ್ಯಾರ್ಥಿಯಾಗಿದ್ದಲ್ಲಿ, ನಿಮ್ಮ ಶಾಲಾ ಅಧ್ಯಯನ ಹಾಗೂ ಪ್ರವೇಶ ಪರೀಕ್ಷೆ ಅಧ್ಯಯನಗಳು ಒಂದಕ್ಕೊಂದು ಪೂರಕವಾಗಿರುವಂತೆ ಅಧ್ಯಯನವನ್ನು ಯೋಜಿಸಿ. ನಿಮ್ಮ ವೇಳಾಪಟ್ಟಿಯನ್ನು ಯಾವಾಗಲೂ ಕಣ್ಣಿಗೆ ಬೀಳುವ ಜಾಗದಲ್ಲಿ ಅಂಟಿಸಿಡಿ. ಮತ್ತು ಸಾಧಿಸಬಹುದಾದ ಗುರಿಗಳನ್ನು ಹಮ್ಮಿಕೊಂಡು ನೈಜ ಪ್ರಯತ್ನಕ್ಕಿಳಿಯಿರಿ. ತುರ್ತು ಹಾಗೂ ಅನಿರೀಕ್ಷಿತ ಚಟುವಟಿಕೆಗಳ ಕುರಿತು ಮುಕ್ತವಾಗಿರಿ.

ನಿಮ್ಮ ದುರ್ಬಲ ವ್ಯಾಪ್ತಿಯನ್ನು ಗುರುತಿಸಿ:
ಯಾವ ವಿಷಯ/ಪಾಠಕ್ಕೆ ನೀವು ಹೆಚ್ಚು ಒತ್ತು ಕೊಡಬೇಕು ಎಂಬುದನ್ನು ಕಂಡುಕೊಳ್ಳಿ ಮತ್ತು ಇದಕ್ಕಾಗಿ ಹೆಚ್ಚಿನ ವೇಳೆ ವ್ಯಯಿಸಿ ಆ ವಿಷಯವನ್ನು ಪಳಗಿಸಿಕೊಳ್ಳಿ.

ನೈಜಯತ್ನ ಮಾಡಿ:
ನೀವು ನಿಮ್ಮಷ್ಟಕ್ಕೆ ಸಾಧ್ಯವಿರುವಷ್ಟು ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬೇಕು. ಯಾವುದೇ ಸಿದ್ಧ ಉತ್ತರವನ್ನು ನೆಚ್ಚಿಕೊಳ್ಳಬೇಡಿ. ನೀವು ಹೀಗೆ ಮಾಡಿದಲ್ಲಿ ನಿಮ್ಮ ಪರೀಕ್ಷಾ ಸಿದ್ಧತೆಯ ಉದ್ದೇಶ ವಿಫಲವಾಗುತ್ತದೆ.

ಪ್ರಮಾಣಕ್ಕಿಂತ ಗುಣಮಟ್ಟ ಪ್ರಮುಖ:
ನೀವು ಎಷ್ಟು ಪ್ರಶ್ನೆಗಳನ್ನು ಬಿಡಿಸಿದ್ದೀರಿ ಎಂಬುದಕ್ಕಿಂತ ಯಾವ ಪ್ರಶ್ನೆಯನ್ನು ಬಗೆಹರಿಸಿದ್ದೀರಿ ಎಂಬುದು ಮುಖ್ಯ. ನೀವು ಸುಲಭವಾಗಿ ಬಿಡಿಸುವ ಪ್ರಶ್ನೆಗಿಂತ ನಿಮಗೆ ಕಷ್ಟ ಎನ್ನುವ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ.

ಕಠಿಣ ಮತ್ತು ನಿರಂತರ ಪ್ರಯತ್ನ ಮಾಡಿ:
ಪ್ರಶ್ನೆಯೊಂದರಿಂದ ನುಣುಚಿಕೊಳ್ಳಬೇಡಿ. ಇದಕ್ಕೆ ಪರಿಹಾರ ಕಂಡುಹುಡುಕುವ ತನಕ ಹೆಣಗಾಡಿ. ನೀವು ಪ್ರಶ್ನೆಯನ್ನು ಬಿಡಿಸಿದರೂ ಪರ್ಯಾಯ ಪರಿಹಾರವಿದೆಯೇ ಎಂದು ಚಿಂತಿಸಲು ಯತ್ನಿಸಿ.

ನಿಮ್ಮ ಪ್ರಗತಿಯ ವಿಮರ್ಶಾತ್ಮಕ ಮೌಲ್ಯಮಾಪನ ಮಾಡಿ:
ನಿಮ್ಮ ಗುರಿಸಾಧನೆ ಕುರಿತ ಪ್ರಯತ್ನದ ನಿಯಮಿತ ಪರಾಮರ್ಷೆಯು ನಿಮ್ಮ ಸಿದ್ಧತೆ ಪ್ರಮುಖ ಅಂಶವಾಗಿದೆ. ಪರೀಕ್ಷೆಯ ಉದ್ದೇಶ ನಿಮ್ಮ ಪ್ರಗತಿಯನ್ನು ಕಂಡುಕೊಳ್ಳುವುದರೊಂದಿಗೆ ಎಲ್ಲಿ ನೀವು ದುರ್ಬಲರಾಗಿದ್ದೀರಿ ಮತ್ತು ಎಲ್ಲಿ ನೀವು ತೀಕ್ಷ್ಣವಾಗಿದ್ದೀರಿ ಎಂಬುದನ್ನು ಕಂಡುಕೊಳ್ಳುವುದಾಗಿದೆ. ದುರ್ಬಲ ವ್ಯಾಪ್ತಿಯಲ್ಲಿ ಕಠಿಣ ಶ್ರಮವಹಿಸಿದರೆ ನಿಮ್ಮ ಕಾರ್ಯಸಾಧನೆ ಉತ್ತಮಗೊಳ್ಳುತ್ತದೆ.

ಎಷ್ಟು ಸಾಧ್ಯವೋ ಅಷ್ಟು ಪರೀಕ್ಷೆಗಳಿಗೆ ಒಡ್ಡಿಕೊಳ್ಳಿ:
ಇದು ನಿಮ್ಮ ಬಲಹೀನತೆ ಮತ್ತು ತಪ್ಪುಗಳ ಮಾಪನಕ್ಕೆ ಸಹಾಯಕವಾಗುತ್ತದೆ. ಇದನ್ನು ಸರಿಪಡಿಸಿಕೊಳ್ಳಿ. ಇದು ಸೂಕ್ತ ಪರೀಕ್ಷಾ ಮನೋಭಾವ ಮತ್ತು ವೇಗವನ್ನು ಒಗ್ಗಿಸಿಕೊಳ್ಳಲು ಸಹಕರಿಸುತ್ತದೆ.

ಸಹ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ:
ಇದು ಸ್ಫರ್ಧೆಯ ವ್ಯಾಪ್ತಿಯನ್ನು ಅರಿತುಕೊಳ್ಳಲು ಸಹಕರಿಸುತ್ತದೆ ಮತ್ತು ಹೊಸಬೆಳವಣಿಗೆಗಳ ಅರಿವಿರುತ್ತದೆ.
ಏನು ಮಾಡಬೇಕು ಎಂಬುದನ್ನು ಕಲಿಯುವುದರೊಂದಿಗೆ, ಏನು ಮಾಡಬಾರದು ಎಂಬುದನ್ನೂ ಕಲಿಯಿರಿ. ತಂತ್ರಗಳ ಕುರಿತು ನಿಮಗೆ ಅರಿವಿರಬೇಕು. ಪ್ರಶ್ನೆಗಳನ್ನು ಬಿಡಿಸುವಲ್ಲಿ ಸರಿ ಎಂದು ಕಂಡರೂ ಕೆಲವು ವಿಧಾನಗಳು ತಪ್ಪು ಅಥವಾ ಸುತ್ತುಬಳಸಿನದ್ದಿರಬಹುದು. ಇವುಗಳ ಮೇಲೆ ನಿಗಾವಹಿಸಿ.

ನಿಮ್ಮ ಪರೀಕ್ಷಾ ತಯಾರಿಗೆ ಶುಭಹಾರೈಕೆಗಳು.
(ಲೇಖಕರು ಮಾಸ್ಟರ್‌ಮೈಂಡ್ ತರಗತಿಗಳ ನಿರ್ದೇಶಕರು)
<< 1 | 2 
ಮತ್ತಷ್ಟು
ಹೋರಾಡು ಕನ್ನಡಿಗ- ಉಗ್ರರ ಬೇರು ಕೀಳಲು, ಆಡಳಿತ ಎಚ್ಚೆತ್ತುಕೊಳ್ಳಲು!
ಇಂಧನ ಬೆಲೆ ಏರಿಕೆ: ಅಂತಿಮ ಹೊರೆ ಜನರ ಮೇಲೆ
ಮದುವೆ ವಿಷಯದಲ್ಲೂ ಈತ ಚಿನ್ನದ ಹುಡುಗನೇ
ಪತ್ರಿಕೋದ್ಯಮದಲ್ಲಿ ಕೈಯಾಡಿಸಲಿರುವ ಪ್ರಿನ್ಸ್ ವಿಲಿಯಂ
ಗಣರಾಜ್ಯೋತ್ಸವ ದಿನಾಚರಣೆಗಾಗಿ ವಿಶೇಷ ಪುಟ
ದೇವೇಗೌಡ್ರ ಮಾತು ಕನ್ನಡಿಗರೆಲ್ಲಾ ಒಪ್ತಾರೆ!