ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಪ್ರಚಲಿತ > 'ಹುಲಿ' ಹತ್ಯೆ: ರಕ್ತ ಸಿಕ್ತ ತಮಿಳು ಹೋರಾಟ ಅಂತ್ಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
'ಹುಲಿ' ಹತ್ಯೆ: ರಕ್ತ ಸಿಕ್ತ ತಮಿಳು ಹೋರಾಟ ಅಂತ್ಯ
ಹಾಗಂತ, ತನ್ನ ಜತೆ ಜತೆಯಾಗಿಯೇ ಹೋರಾಡಿದ್ದ ಕಾಮ್ರೇಡ್‌ಗಳನ್ನೂ ಆತ ಬಿಡಲಿಲ್ಲ. ಪಿಎಲ್ಒಟಿಇ ನಾಯಕ ಉಮಾಮಹೇಶ್ವರನ್, ಟಿಇಎಲ್ಒ ಮುಖಂಡ ಸಿರಿ ಸಬರತಿನಮ್, ಇಪಿಆರ್ಎಲ್ಎಫ್‌ನ ಪದ್ಮನಾಭ ಮತ್ತು ಎಲ್ಟಿಟಿಇ ಬಂಡಾಯ ನಾಯಕ ಮಾತಯ್ಯರನ್ನು ಕೊಲೆ ಮಾಡಿಸಿದ.

ಒಂದು ಕಾಲದಲ್ಲಿ 1970ರ ಅವಧಿಯಲ್ಲಿ ಶ್ರೀಲಂಕನ್ನರ ದೌರ್ಜನ್ಯದಿಂದ ಲಂಕಾ ತಮಿಳರನ್ನು ರಕ್ಷಿಸಿ ಅವರನ್ನು ಸ್ವತಂತ್ರವಾಗಿಸುವ ಧ್ಯೇಯದೊಂದಿಗೆ ಕಾರ್ಯಾರಂಭಿಸಿದ್ದ ಪ್ರತ್ಯೇಕತಾವಾದಿ ಸಂಘಟನೆಯು ಹಾದಿ ತಪ್ಪಿ ರಾಜಕೀಯ ವಿರೋಧಿಗಳನ್ನು ನಿರ್ನಾಮ ಮಾಡುವುದು ತನ್ನ ನ್ಯಾಯಬದ್ಧ ಹಕ್ಕು ಎಂಬಂತೆ ನಂಬಿದ ಭಯೋತ್ಪಾದಕ ಸಂಘಟನೆಯಾಗಿ ಬೆಳೆಯಿತು. ಆದರೂ, ಪ್ರಭಾಕರನ್‌ನ ಸಂಘಟನಾ ಸಾಮರ್ಥ್ಯಕ್ಕೆ ಇಡೀ ಜಗತ್ತೆ ಬೆರಗಾಗಿದೆ. ಸರ್ವ ಸಜ್ಜಿತ ಪಡೆಗಳನ್ನು ಕಟ್ಟಿಕೊಂಡು, ಅದನ್ನು ರಾಜಕೀಯ, ಬೇಹುಗಾರಿಕೆ, ಸೇನಾ ಕಾರ್ಯಾಚರಣೆ, ಹಣಕಾಸು ಮುಂತಾದ ಘಟಕಗಳನ್ನಾಗಿ ವಿಂಗಡಿಸಿ ನಿಭಾಯಿಸುತ್ತಿದ್ದ ರೀತಿ, ಬಹುತೇಕ ಒಂದು ಪರ್ಯಾಯ ಸರಕಾರವನ್ನೇ ಚಲಾಯಿಸುವಂತಿತ್ತು.

ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಬೆಳೆದು, ತಮಿಳರ ಹಕ್ಕಿಗಾಗಿ ನಿಧಿ ಸಂಗ್ರಹಣೆಯಲ್ಲಿ ಯಶಸ್ವಿಯಾದ ಪ್ರಭಾಕರನ್‌ಗೆ ವಿಶ್ವ ಸಮುದಾಯದಲ್ಲಿ ಹಲವಾರು ತಮಿಳರ ಬೆಂಬಲವಿದೆ. ಆದರೆ ಹಲವಾರು ಕಾರ್ಯತಂತ್ರಗಳಲ್ಲಿ ಎಡವಿದ್ದು, ತಪ್ಪೆಸಗಿದ್ದು ಆತನ ಉದ್ದೇಶಕ್ಕೆ ಮಾರಕವಾಯಿತು. ಉತ್ತರೀಯ ಭಾಗದಿಂದ ಮುಸ್ಲಿಮರನ್ನು ಓಡಿಸಿದ್ದು, ರಾಜೀವ್ ಗಾಂಧಿ ಹತ್ಯೆ, 2003ರಲ್ಲಿ ರನಿಲ್ ವಿಕ್ರಮಸಿಂಘೆ ಸರಕಾರದೊಂದಿಗಿನ ಶಾಂತಿ ಒಪ್ಪಂದ ಮುರಿದದ್ದು, 2005ರಲ್ಲಿ ಚುನಾವಣೆ ಬಹಿಷ್ಕಾರ ಕರೆ ನೀಡುವ ಮೂಲಕ ಮಹಿಂದಾ ರಾಜಪಕ್ಸೆ ಆಯ್ಕೆ ಸುಲಭವಾಗಿಸಿದ್ದು... ಇವೆಲ್ಲ ತಂತ್ರಗಳು ಆತನಿಗೆ ಮುಳುವಾಯಿತು. ಮುಸ್ಲಿಮರ ಮತ್ತು ಅಂತಾರಾಷ್ಟ್ರೀಯ ಸಮುದಾಯದ ಬೆಂಬಲ ಕಳೆದುಕೊಂಡದ್ದು ಮತ್ತು ಎಲ್ಟಿಟಿಇಯನ್ನು ಮುಗಿಸಿಯೇ ಸಿದ್ಧ ಎಂದು ಮಹಿಂದಾ ರಾಜಪಕ್ಸೆ ಅವರ ಪಣದಿಂದಾಗಿ ಆತನ ಆಟ ನಡೆಯಲಿಲ್ಲ.

ರಾಜೀವ್ ಗಾಂಧಿ ಹತ್ಯ
ಎಲ್ಟಿಟಿಇ ಭಾರತಕ್ಕೆ ಯಾವುದೇ ತೊಂದರೆ ಮಾಡದು ಎಂಬ ನಂಬಿಕೆಗಳನ್ನು ಆತ ಹುಸಿ ಮಾಡಿದ್ದು ಭಾರತೀಯ ಶಾಂತಿ ಸ್ಥಾಪನಾ ಪಡೆಗಳ ಮೇಲೆ ಮಾಡಿದ ದಾಳಿಯ ಮೂಲಕ.

1991ರಲ್ಲಿ ಶ್ರೀಪೆರಂಬದೂರಿನಲ್ಲಿ ಚುನಾವಣಾ ರ‌್ಯಾಲಿಯಲ್ಲಿ ರಾಜೀವ್ ಗಾಂಧಿಯನ್ನು ಆತ್ಮಾಹುತಿ ಬಾಂಬರ್ ಮೂಲಕ ಹತ್ಯೆಗೈಯಲಾಯಿತು. 1987ರಲ್ಲಿ ತಮಿಳರು ಶಾಂತಿ ಒಪ್ಪಂದಕ್ಕೆ ಒಪ್ಪುವಂತೆ ರಾಜೀವ್ ಗಾಂಧಿ ಬಲವಂತ ಮಾಡಿದ್ದರು ಮತ್ತು ವ್ಯಾಘ್ರಗಳ ಮೇಲೆ ದಾಳಿ ಮಾಡಲು ಭಾರತೀಯ ಶಾಂತಿ ಸ್ಥಾಪನಾ ಪಡೆ (ಐಪಿಕೆಎಫ್)ಯನ್ನು ಬಳಸಲಾಯಿತು ಎಂಬುದು ಎಲ್ಟಿಟಿಇಗಿದ್ದ ರೋಷ.

1993ರಲ್ಲಿ ಶ್ರೀಲಂಕಾ ಅಧ್ಯಕ್ಷ ಪ್ರೇಮದಾಸ ಹತ್ಯೆಯ ಬಳಿಕವಂತೂ ಎಲ್ಟಿಟಿಇ ಅತ್ಯಂತ ಭಯಾನಕ ಆತ್ಮಾಹುತಿ ಬಾಂಬರ್ ಪಡೆಯೆಂದೇ ಹೆಸರಾಯಿತು. ಆ ಆತ್ಮಾಹುತಿ ದಳಗಳಲ್ಲಿ ತರುಣಿಯರೇ ಹೆಚ್ಚಾಗಿದ್ದರು. ಸರಕಾರಿ ಕೇಂದ್ರಗಳ ಮೇಲೆ, ಮಿಲಿಟರಿ ಮುಖ್ಯಾಲಯದ ಮೇಲೆ, ದೇಶದ ಏಕೈಕ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆಲ್ಲಾ ಈ ಆತ್ಮಾಹುತಿ ಬಾಂಬರುಗಳು ದಾಳಿ ಮಾಡಿದರು.

ಮೊದಲ ಹತ್ಯ
1975ರಲ್ಲಿ ಹಿಂದೂ ದೇವಳಕ್ಕೆ ಪ್ರವೇಶಿಸುತ್ತಿದ್ದ ಜಾಫ್ನಾ ಮೇಯರ್ ಅಲ್ಫ್ರೆಡ್ ದುರೈಯಪ್ಪ ಎಂಬವರನ್ನು ಅತ್ಯಂತ ಸಮೀಪದಿಂದ ಗುಂಡು ಹಾರಿಸಿ ಹತ್ಯೆ ಮಾಡಿದ್ದು ಪ್ರಭಾಕರನ್‌ನ ಮೊದಲ ಹತ್ಯಾ ಕೃತ್ಯ ಎನ್ನಲಾಗುತ್ತಿದೆ. ತಮಿಳರ ಹಕ್ಕುಗಳಿಗೆ ವಿರುದ್ಧವಾಗಿ ಯಾರೇ ಇದ್ದರೂ, ಶ್ರೀಲಂಕಾ ಸರಕಾರದ ಕೈಗೊಂಬೆಯಾಗಿ ಯಾರೇ ವರ್ತಿಸಿದರೂ ಅವರಿಗೆ ಸಾವು ಕಟ್ಟಿಟ್ಟ ಬುತ್ತಿ ಎಂಬ ಸಂದೇಶ ನೀಡಲಾರಂಭಿಸಿದ ಪ್ರಭಾಕರನ್.

ಪ್ರಭಾಕರನ್ ವೈಯಕ್ತಿಕ ಜೀವನದ ಬಗ್ಗೆ ಬಹುತೇಕ ಮಾಹಿತಿ ಲಭ್ಯವಿಲ್ಲದಿದ್ದರೂ, ಈತ 1984ರ ಅಕ್ಟೋಬರ್ 1ರಂದು ಮಾಧಿ ವಧಾನಿ ಎಂಬಾಕೆಯನ್ನು ಚೆನ್ನೈ ಸಮೀಪದ ತಿರುಪ್ಪೊರೂರು ಎಂಬಲ್ಲಿ ವಿವಾಹವಾಗಿದ್ದ ಎನ್ನಲಾಗಿದೆ. ಈತನಿಗೆ ದುವಾರಕಾ ಎಂಬ ಹೆಸರಿನ ಪುತ್ರಿ, ಇಬ್ಬರು ಪುತ್ರರಾದ ಚಾರ್ಲ್ಸ್ ಆಂತೋನಿ ಮತ್ತು ಬಾಲಚಂದ್ರನ್ ಇದ್ದು, ಇದರಲ್ಲಿ ಚಾರ್ಲ್ಸ್ ಕೂಡ ಈಗ ಹತನಾಗಿದ್ದಾನೆ ಎಂದು ಶ್ರೀಲಂಕಾ ಸೇನೆ ಹೇಳಿದೆ. ಉಳಿದವರು ಎಲ್ಲಿದ್ದಾರೆ ಎಂಬುದು ತಿಳಿದಿಲ್ಲವಾದರೂ, ಅವರು ಶ್ರೀಲಂಕಾದಲ್ಲಿ ಇರಲಾರರು ಎಂದು ನಂಬಲಾಗಿದೆ.

ಸಿಂಹಳದ ದೌರ್ಜನ್ಯದಿಂದ ತಮಿಳರನ್ನು ರಕ್ಷಿಸುವ ಸ್ವಾತಂತ್ರ್ಯ ಹೋರಾಟಗಾರ ಎಂದು ಆತನ ಬೆಂಬಲಿಗರು ಪರಿಗಣಿಸಿದ್ದರೂ, ಭಾರತವೂ ಸೇರಿದಂತೆ ಹಲವು ರಾಷ್ಟ್ರಗಳು ಎಲ್ಟಿಟಿಇಗೆ ನಿಷೇಧ ಹೇರಿದ್ದು, ಆತನನ್ನು ಭಯೋತ್ಪಾದಕ ಎಂದು ಪರಿಗಣಿಸಿವೆ.

ಸುಸಂಘಟಿತ ಎಲ್ಟಿಟಿ
ಟೈಗರ್ಸ್ (ಭೂಸೇನೆ), ಸೀ ಟೈಗರ್ಸ್ (ನೌಕಾದಳ) ಹಾಗೂ ಏರ್ ಟೈಗರ್ಸ್ (ವಾಯುದಳ) ಎಂಬ ಮೂರು ಶಸ್ತ್ರ ಸಜ್ಜಿತ ಹೋರಾಟ ಪಡೆಗಳನ್ನು ಹೊಂದಿರುವ ವಿಶ್ವದ ಏಕೈಕ ಉಗ್ರಗಾಮಿ ಸಂಘಟನೆ ಎಲ್ಟಿಟಿಇ ಎಂಬುದು ಅದರ ಹೆಗ್ಗಳಿಕೆ. ಇನ್ನೂ ಒಂದು ಘಟಕವಿದೆ. ಬ್ಲ್ಯಾಕ್ ಟೈಗರ್ಸ್. ಇದು ಆತ್ಮಾಹುತಿ ದಳ. ಈ ಪಡೆಯನ್ನು ಉದ್ಘಾಟನೆ ಮಾಡಿದ್ದೇ ಶ್ರೀಲಂಕಾ ಸೇನೆಯ ಮೇಲೆ. ಲಂಕಾ ಶಿಬಿರದ ಮೇಲೆ ಈ ಪಡೆ ದಾಳಿ ನಡೆಸಿ 40 ಸೈನಿಕರನ್ನು ಕೊಂದಿತ್ತು.

ಸೇನೆಯ ವಿರುದ್ಧ ಹೋರಾಡಲು ಎಲ್ಟಿಟಿಇ ಮಕ್ಕಳನ್ನೆಲ್ಲಾ ಬಳಸಿಕೊಳ್ಳುತ್ತಿದೆ ಎಂಬುದು ಮಾನವ ಹಕ್ಕುಗಳ ಸಂಘಟನೆಗಳ ಕೆಂಗಣ್ಣಿಗೆ ಕಾರಣವಾಗಿತ್ತು.

ಕರುಣಾ ಬಂಡಾ
ಬಲಗೈ ಬಂಟನಂತಿದ್ದ 'ಕರ್ನಲ್' ಕರುಣಾ, ಎಲ್ಟಿಟಿಇಯಿಂದ ಸಿಡಿದು ತನ್ನದೇ ಸಂಘಟನೆ ಕಟ್ಟಿಕೊಂಡಾಗ ಎಲ್ಟಿಟಿಇ ಮತ್ತು ಪ್ರಭಾಕರನ್‌ಗೆ ತಡೆಯಲಾರದ ಆಘಾತ. ಇದಕ್ಕೆ ಪ್ರಧಾನ ಕಾರಣವೆಂದರೆ, ಕರುಣಾ ಆ ಬಳಿಕ ತಮಿಳು ಆಂದೋಲನದ ವಿರೋಧಿಯಾಗಿ ಮಾರ್ಪಟ್ಟಿದ್ದು, ಈಗ ಶ್ರೀಲಂಕಾದಲ್ಲಿ ಸಚಿವ ಪದವಿಯಲ್ಲಿ ರಾರಾಜಿಸುತ್ತಿರುವುದು. ಆತನಿಗೆ ಪ್ರಭಾಕರನ್ ಸೂಕ್ಷ್ಮ ಸಂಗತಿಗಳೆಲ್ಲವೂ ತಿಳಿದಿರುವುದು ಎಲ್ಟಿಟಿಇಯ ಅವಸಾನಕ್ಕೆ ಪ್ರಧಾನ ಕಾರಣ ಎಂದು ನಂಬಲಾಗುತ್ತಿದೆ.
<< 1 | 2 
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ವೆಬ್‌ದುನಿಯಾದಲ್ಲಿ ಚುನಾವಣಾ ಫಲಿತಾಂಶ ಲೈವ್
ವೆಬ್‌ದುನಿಯಾದಲ್ಲಿ ಅಮರ ಚಿತ್ರ ಕಥಾ ಮಾಲಿಕೆ
ಹಣದುಬ್ಬರ ಶೂನ್ಯವಾದರೂ ಆಹಾರ ಕೈಗೆಟಕುತ್ತಿಲ್ಲವೇಕೆ?
ಕಾನೂನಿಗೆ ಅಂಜದ ಕಾನೂನು ಭಂಜಕರೇ ಇವರು?
ಭಸ್ಮಾಸುರನ ಸ್ಥಿತಿಯತ್ತ ಪಾಕಿಸ್ತಾನ !
ನೈತಿಕ ಅಧಃಪತನ: ಡ್ಯಾಡಿ-ಮಮ್ಮಿ ಆಗೋ ಮಕ್ಕಳು!