ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಪ್ರಚಲಿತ » ಗೆದ್ದದ್ದು ಗಣಿಧಣಿ, ಸಿಎಂ ಅಲ್ಲ, ಸೋತದ್ದು ಬಿಜೆಪಿ! (Karnataka Politics | BJP Dissidence | Bellary Reddy Brothers | Sushma Swaraj | Yaddyurappa)
Feedback Print Bookmark and Share
 
ಗಣಿಧಣಿಗಳೂ ಗೆಲ್ಲಲಿಲ್ಲ, ಸಿಎಮ್ಮೂ ಗೆಲ್ಲಲಿಲ್ಲ, ಬಿಜೆಪಿ ಸೋತಿದೆ...

ಇಷ್ಟೆಲ್ಲ ಪ್ರಶ್ನೆಗಳ ನಡುವೆ, 'ಇದೆಲ್ಲ ನಾಟಕ' ಎಂದು ಕಾಂಗ್ರೆಸ್ ರಾಜ್ಯಾಧ್ಯಕ್ಷ ಆರ್.ವಿ.ದೇಶಪಾಂಡೆ ಹೇಳಿರುವುದರಲ್ಲಿ ಕೂಡ ಹುರುಳಿಲ್ಲದಿಲ್ಲ ಎಂಬ ಅನಿಸಿಕೆ ಬರುವುದಿಲ್ಲವೇ?

ಮಾಜಿ ಸಚಿವ, ಹಾಲಿ ಕಾಂಗ್ರೆಸ್ ಸಂಸದ ಎಚ್.ವಿಶ್ವನಾಥ್ ಅವರ ಹೇಳಿಕೆಯನ್ನು ಗಮನಿಸಬೇಕು. 'ರೆಡ್ಡಿಗಳನ್ನು ಮಟ್ಟಹಾಕಲೇಬೇಕು. ಇಲ್ಲದಿದ್ದಲ್ಲಿ ರಾಜ್ಯಕ್ಕೆ ಉಳಿಗಾಲವಿಲ್ಲ. ಈ ಕ್ರಮಕ್ಕೆ ರಾಜ್ಯ ಸರಕಾರವನ್ನು ಎಲ್ಲರೂ ಬೆಂಬಲಿಸಬೇಕು' ಎಂದವರು ಕಳೆದ ವಾರಾಂತ್ಯ ಮೈಸೂರಿನಲ್ಲಿ ನೀಡಿದ್ದರು. ಇದು ನೈತಿಕ ರಾಜಕಾರಣ. ರಾಜ್ಯದ ಅಭಿವೃದ್ಧಿ ಬಗೆಗಿನ ಚಿಂತನೆ.

ಮಾತೆತ್ತಿದರೆ 'ನಮಗೆ ಜನ ಹಿತ ಮುಖ್ಯ, ಜನಸೇವೆಯೇ ನಮ್ಮ ಗುರಿ' ಎಂಬಂತಹಾ ವಾಕ್ಯಗಳನ್ನು ಉದುರಿಸುತ್ತಿದ್ದ ರೆಡ್ಡಿ ಸಹೋದರರು, ಇದುವರೆಗೆ ಯಾವುದೇ ಭ್ರಷ್ಟಾಚಾರ ಪ್ರಕರಣಗಳು ದಾಖಲಾಗದಿರುವ ಶೋಭಾ ಕರಂದ್ಲಾಜೆಯನ್ನು ಸಂಪುಟದಿಂದ ಕೈಬಿಡುವಂತೆ ಹಠ ಹೂಡಿದ್ದು, ಸ್ವತಃ ಮುಖ್ಯಮಂತ್ರಿಯ ಪ್ರಧಾನ ಕಾರ್ಯದರ್ಶಿ ವಿ.ಪಿ.ಬಳಿಗಾರ್ ಅವರನ್ನು ಎತ್ತಂಗಡಿ ಮಾಡಿಸುವಂತೆ ಒತ್ತಾಯಿಸಿದ್ದು, ಅದಿರು ಲಾರಿಗಳ ಮೇಲೆ ತಲಾ 1000 ರೂ. ಸುಂಕ ಹೇರಿದ್ದನ್ನು ವಿರೋಧಿಸಿದ್ದು (ಇದೇ ಹಣವನ್ನು ಅದಿರು ಲಾರಿಗಳು ಕುಲಗೆಡಿಸಿದ್ದ ರಸ್ತೆಗಳ ಅಭಿವೃದ್ಧಿಗೋ, ಅಥವಾ ಅವು ಎಸಗುವ ನಿತ್ಯ ಅಪಘಾತದಲ್ಲಿ ಕೊಂಚ ಪರಿಹಾರ ಹಣಕ್ಕೋ ಬಳಸಬಹುದು!) ಯಾವ 'ಜನ ಹಿತ' ಕಾರ್ಯ?

ಲೋಕಸಭೆ ಚುನಾವಣೆಯ ಸೋಲಿನ ಬಳಿಕವೂ ಬಿಜೆಪಿ ಯಾವುದೇ ರಾಜ್ಯಗಳಲ್ಲಿ ಚೇತರಿಸಿಕೊಳ್ಳದಿರುವುದಕ್ಕೆ ಪಕ್ಷದ ಇಂಥದ್ದೇ ಕ್ರಮಗಳು ಕಾರಣ ಎಂಬುದು ಅದರ ಕೇಂದ್ರೀಯ ನಾಯಕತ್ವದ ಅರಿವಿಗೆ ಬರುವಾಗ ಬಹುಶಃ ಸಮಯ ಮೀರಿರುತ್ತದೆ!

ಒಟ್ಟಿನಲ್ಲಿ, ಈ ರೀತಿ ಲಾಬಿ ನಡೆಸುವ, ಭೂಮಿಯ ಗರ್ಭ ಅಗೆಯುತ್ತಾ ಜೇಬು ತುಂಬಿಕೊಳ್ಳುವ, ನಾನೇ ಜನರ ಉದ್ಧಾರಕ ಎನ್ನುತ್ತಾ ಗರಿ ಗರಿ ನೋಟು ಹಂಚುವ ರಾಜಕಾರಣಿಗಳಾಗಿ ಪರಿವರ್ತನೆಗೊಳ್ಳುವ ಕಟ್ಟಾ ಉದ್ಯಮಿಗಳಿಗೆ, ಅವರ ಜನಮರುಳು ಮಾತುಗಳಿಗೆ, ಹೆಂಡ-ಸೀರೆ-ನೋಟಿಗೆ ಜನರು ಮರುಳಾಗುತ್ತಿರುವವರೆಗೆ ಮತದಾರನಿಗೆ ಮಾತ್ರ ಇದೇ ಅವಸ್ಥೆ ಕಟ್ಟಿಟ್ಟ ಬುತ್ತಿ.
 
ಸಂಬಂಧಿತ ಮಾಹಿತಿ ಹುಡುಕಿ