Webdunia RSS ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಸರ್ವಜ್ಞ (Sarvajna)
ಬೆಂಗಳೂರಿನಲ್ಲಿ ತಿರುವಳ್ಳುವರ್ ಪ್ರತಿಮೆ ಅನಾವರಣ ಸಂದರ್ಭ ನಡೆದ 'ಅಣ್ಣ-ತಂಬಿ' (ತಮ್ಮ) ಬೆಸುಗೆ ಚೆನ್ನೈ ಕಾರ್ಯಕ್ರಮದಲ್ಲಿಯೂ ಮುಂದುವರಿಯಿತು. ಮುಖ್ಯಮಂತ್ರಿ ಯಡಿಯೂರಪ್ಪ ಅವರು ತಮ್ಮ ಭಾಷಣದಲ್ಲಿ ಇದನ್ನು ಪ್ರಸ್ತಾಪಿಸಿ, ಎರಡು ವರ್ಷಗಳ ಹಿಂದೆ ನಾನು ಅಣ್ಣನನ್ನು ಕಳೆದುಕೊಂಡ ನೋವನ್ನು ಆ ಸ್ಥಾನ ತುಂಬುವ ಮೂಲಕ ಕರುಣಾನಿಧಿ ನೀಗಿಸಿದ್ದಾರೆ. ಕರುಣಾನಿಧಿಯವರಲ್ಲಿ ನಾನು ನನ್ನ ಅಣ್ಣನನ್ನು ಕಂಡೆ. ಪ್ರೀತಿ ಪೂರ್ವಕ ಅಣ್ಣನಿಗೆ ವಂದನೆ, ಅಭಿವಂದನೆ ಎಂದಾಗ ಸಭೆಯಲ್ಲಿ ಕರತಾಡನ.
  ಮುಂದೆ ಓದಿ
Karunanidhi
 
ಚೆನ್ನೈ: ಯಾವುದೇ ಒಪ್ಪಂದ ಅಥವಾ ಷರತ್ತುಗಳನ್ನು ಮುಂದಿಟ್ಟು ತಿರುವಳ್ಳುವರ್-ಸರ್ವಜ್ಞ ಪ್ರತಿಮೆಗಳ ಅನಾವರಣ ನಡೆದಿಲ್ಲ ಎಂದು ಸ್ಪಷ್ಟಪಡಿಸಿರುವ ತಮಿಳುನಾಡು ಮುಖ್ಯಮಂತ್ರಿ ಎಂ.ಕರುಣಾನಿಧಿ, ಉಭಯ ರಾಜ್ಯಗಳ ಮಧ್ಯೆ ಭಾಷಾ ಸಾಮರಸ್ಯ ಏರ್ಪಡುತ್ತಿದೆ. ತಮಿಳರು ಮತ್ತು ಕನ್ನಡಿಗರು ಸಹೋದರತೆಯ ಭಾವನೆ ಪ್ರದರ್ಶಿಸುತ್ತಿದ್ದಾರೆ. ಆದರೆ ಕೆಲವರಿಗೆ ಇದು ಸಹಿಸಲಾಗುತ್ತಿಲ್ಲ, ಈ ರೀತಿ ಸ್ನೇಹ-ಪ್ರೀತಿ ಮುಂದುವರಿಯುವುದು ಅವರಿಗೆ ಬೇಕಾಗಿಲ್ಲ ಎಂದು ಹೇಳಿದರು.
Yaddyurappa
 
ಚೆನ್ನೈ: ಕರ್ನಾಟಕ ಮತ್ತು ತಮಿಳುನಾಡು ಮಧ್ಯೆ ಕೆಲವೊಂದು ವಿವಾದಗಳಿರುವುದು ನಿಜ. ಅದನ್ನು ಮಾತುಕತೆ ಮೂಲಕ ಪರಿಹರಿಸಿಕೊಳ್ಳುತ್ತೇವೆ. ಪರಸ್ಪರ ಕೊಡು-ಕೊಳ್ಳುವಿಕೆಯ ನೀತಿಯಿಂದ ವಿವಾದವನ್ನು ಪರಿಹರಿಸಿಕೊಳ್ಳಬಹುದಾಗಿದೆ ಎಂದು ಹೇಳಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಜನ್ಮಭೂಮಿ ಮತ್ತು ಕರ್ಮಭೂಮಿಗೆ ನಿಷ್ಠರಾಗಿರಬೇಕಾದುದು ಧರ್ಮ. ಹೀಗಾಗಿ ಕರ್ನಾಟಕದಲ್ಲಿರುವ ತಮಿಳು ಭಾಷಿಗರು, ತಮಿಳುನಾಡಿನಲ್ಲಿರುವ ಕನ್ನಡಿಗರು ಈ ರೀತಿ ನಡೆದು...
ಚೆನ್ನೈ ಅಯನಾವರಂನಲ್ಲಿ ಕನ್ನಡ ಬಾವುಟ ಪಟಪಟ
ಚೆನ್ನೈ: ಅಯನಾವರಂನ ಐಸಿಎಫ್ ಮೈದಾನದ ಬೃಹತ್ ವೇದಿಕೆಯಿಂದ ರಿಮೋಟ್ ಮೂಲಕ ಯಡಿಯೂರಪ್ಪ ಅವರು ಪ್ರತಿಮೆ ಅನಾವರಣಗೊಳಿಸುತ್ತಲೇ ಸಭಾಂಗಣಗಲ್ಲಿ ಕೆಂಪು ಹಳದಿ ಬಣ್ಣದ ಕನ್ನಡ ಬಾವುಟಗಳು ಪಟಪಟನೆ ಹಾರಿದವು. ಸಂತಸದ ಚಪ್ಪಾಳೆ ಎಲ್ಲೆಡೆ ಮೊಳಗಿದವು. ನಾದಸ್ವರ ಮೊಳಗಿತು.
ಚೆನ್ನೈಯಲ್ಲಿ ಅನಾವರಣಗೊಂಡಿತು ಸರ್ವಜ್ಞ ಪ್ರತಿಮೆ
ಚೆನ್ನೈ: ಸುಮಾರು ಒಂಬತ್ತು ವರ್ಷಗಳಿಂದ ತೆರೆಮರೆಯಲ್ಲೇ ಇದ್ದ ಕನ್ನಡದ ಶ್ರೇಷ್ಠೋತ್ತಮ ಕವಿ, ದಾರ್ಶನಿಕ ಸರ್ವಜ್ಞನ ಪ್ರತಿಮೆ ಅನಾವರಣವು ಚೆನ್ನೈಯಲ್ಲಿ ನಡೆಯುತ್ತಿರುವ ಅದ್ಧೂರಿಯ ಸಮಾರಂಭದಲ್ಲಿ ಗುರುವಾರ ಸಂಜೆ ಅನಾವರಣಗೊಂಡಿತು.