ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಪ್ರಚಲಿತ » ಕನ್ನಡದಲ್ಲಿ ಕಾಮೆಂಟ್ ಬರೆಯೋದು ಹೇಗೆ? ಕ್ಲಿಕ್ ಮಾಡಿ (How to type Kannada Correctly)
Bookmark and Share Feedback Print
 
ಅವಿನಾಶ್ ಬಿ.
ಕಾಮೆಂಟ್ ಹಾಕುವುದು ಹೇಗೆ, ಕನ್ನಡದಲ್ಲಿ ಟೈಪ್ ಮಾಡುವುದು ಹೇಗೆ, ದಯವಿಟ್ಟು ತಿಳಿಸಿಕೊಡಿ ಎಂಬ ಕುರಿತು ಹಲವಾರು ಓದುಗರು ಇತ್ತೀಚೆಗೆ ಇ-ಮೇಲ್ ಮುಖಾಂತರ, ದೂರವಾಣಿ ಮೂಲಕ ಮತ್ತು ಕಾಮೆಂಟ್ ಹಾಕುವೆಡೆಗಳಲ್ಲೆಲ್ಲಾ ಕೇಳಿದ್ದಾರೆ. ಈ ಕಾರಣಕ್ಕೆ ಓದುಗರು ತಪ್ಪಿಲ್ಲದೆ ಕನ್ನಡ ಟೈಪ್ ಮಾಡಲು ಅನುಕೂಲವಾಗಲು ಈ ಒಂದು ಲೇಖನ.

ವೆಬ್‌ದುನಿಯಾ ಕಾಮೆಂಟ್ ಹಾಳೆಯಲ್ಲಿ ಟೈಪ್ ಮಾಡಲು ಸುಲಭ ಸಾಧ್ಯವಾದ ವಿಧಾನವನ್ನು ನಮ್ಮ ತಂಡವು ಓದುಗರಿಗೆ ಒದಗಿಸಿದೆ.

ಹಾಗಾದ್ರೆ ಹೇಗೆ ತಪ್ಪಿಲ್ಲದೆ ಟೈಪ್ ಮಾಡುವುದು?
ಇದು ಧ್ವನ್ಯಾತ್ಮಕ ಲಿಪ್ಯಂತರ ವಿಧಾನ. ಅಂದರೆ ಇಂಗ್ಲಿಷಿನಲ್ಲಿ ನೀವು ಕನ್ನಡವನ್ನು ಹೇಗೆ ಬರೆಯುತ್ತೀರೋ ಅದೇ ರೀತಿ ಬರೆಯುತ್ತಾ ಹೋಗುವುದು, ಆದರೆ ಒಂದು ವ್ಯತ್ಯಾಸ. ಕೆಲ ಅಕ್ಷರಗಳಿಗೆ, ವಿಶೇಷವಾಗಿ ಮಹಾಪ್ರಾಣ, ದೀರ್ಘ, ಅನುಸ್ವಾರ, ವಿಸರ್ಗ ಅಕ್ಷರಗಳಿಗೆ Shift ಕೀ ಒತ್ತಿ ಹಿಡಿದು ಟೈಪಿಸಬೇಕಾಗುತ್ತದೆ.

ಈ ಕೆಳಗಿನ ಕೋಷ್ಟಕವು ನಿಮಗೆ ಅನುಕೂಲವಾಗಬಹುದು.
ಸ್ವರಾಕ್ಷರಗಳು
aaa, Aiee, Iu
oo, URueEai
oOau, ouಅಂaMಅಃaH

ವ್ಯಂಜನಗಳು
kaKa, khagagha~ga
ca, chaCajaJa~ja
TaThaDaDhaNa
tathadadhana
papha, fa, Pababhama
yaralava, washa, Sa
ShasahaLaLxa

ಉದಾಹರಣೆಗೆ, 'ಕನ್ನಡ' ಎಂಬುದಾಗಿ ಟೈಪ್ ಮಾಡಬೇಕಿದ್ದರೆ kannaDa ಎಂದು ಟೈಪ್ ಮಾಡಬೇಕು. ಇಲ್ಲಿ D ಎಂಬುದು shift-d ಆಗಿರುತ್ತದೆ.

'ಕರ್ನಾಟಕ' ಎಂದು ಟೈಪಿಸಲು karnaaTaka ಅಂತಾನೇ ಬರೆಯಬೇಕು. karnataka ಅಂತ ಬರೆದ್ರೆ ಅದು 'ಕರ್ನತಕ' ಆಗಿಬಿಡುತ್ತದೆ. 'ಕರ್ಣಾಟಕ' ಅಂತ ಬರೆಯಬೇಕಿದ್ದರೆ karNaaTaka ಅಂತ ಟೈಪಿಸಬೇಕು.

ಅದೇ ರೀತಿ, "ಮಂಗಳೂರು" ಬರೆಯಲು maMgaLooru ಎಂದು ಬರೆದರಾಯಿತು. mangaluru ಅಂತ ಬರೆದರೆ "ಮನ್ಗಲುರು" ಅಂತಾಗಿಬಿಡುತ್ತದೆ.

ದೀರ್ಘಾಕ್ಷರಗಳಿಗೆ ಕೂಡ ಇದೇ ರೀತಿಯಾಗಿ Shift ಒತ್ತಿಹಿಡಿದುಕೊಂಡು ಅಕ್ಷರ ಟೈಪಿಸಬೇಕು. ಉದಾಹರಣೆಗೆ "ಶಿಕ್ಷಣ ಕೇಂದ್ರ" ಎಂದು ಟೈಪಿಸಲು shikshaNa kEMdra ಅಂತ ಬರೆಯಬೇಕಾಗುತ್ತದೆ. ಅಂತೆಯೇ ದೇವೇಗೌಡ ಬರೆಯಬೇಕಿದ್ದರೆ dEvEgouDa (ಕ್ಯಾಪಿಟಲ್ ಮತ್ತು ಸ್ಮಾಲ್ ಅಕ್ಷರಗಳ ಕಾಂಬಿನೇಶನ್ ಗಮನಿಸಿ.)

ಒಟ್ಟಿನಲ್ಲಿ ನೀವು ನೆನಪಿನಲ್ಲಿಟ್ಟುಕೊಳ್ಳಬೇಕಾದದ್ದು:
1. ದೀರ್ಘಾಕ್ಷರ ಬೇಕಿದ್ದರೆ ಸ್ವರಾಕ್ಷರಗಳನ್ನು ಎರಡೆರಡು ಬಾರಿ ಬಳಸಬೇಕು. ಉದಾ: ಆ (aa), ಈ (ee) ('ಕಾ, ಕೀ'ಯಲ್ಲಿರುವಂತೆ)
ಕೂ (kU), ಕೇ (kE), ಕೈ (kai), ಕೋ (kO), ಕೌ (kau), ಕಂ (kaM), ಕಃ (kaH).

2. ಮಹಾಪ್ರಾಣ ಅಥವಾ ಟ (Ta), ಠ (Tha), ಡ (Da), ಢ (Dha), ಣ (Na) ಬರೆಯಲು Shift ಕೀ ಬಳಸಬೇಕು.
ತಥದಧನ ಬರೆಯುವುದು: ta tha da dha na (ಅಂದರೆ Shift ಕೀ ಬಳಸದಿದ್ದರೆ ಮಹಾಪ್ರಾಣಾಕ್ಷರಗಳು ಈ ರೀತಿಯೂ ತಪ್ಪಾಗಬಹುದು!)

3. ಅನುಸ್ವಾರ ಮತ್ತು ವಿಸರ್ಗ: 'ಕಂದ' ಬರೆಯಬೇಕಿದ್ದರೆ kaMda (M ಕ್ಯಾಪಿಟಲ್ ಅಕ್ಷರ) ಬರೆಯಿರಿ. 'ಮೂಲತಃ' ಬರೆಯಲು mUlatH ಬರೆದ್ರೆ ಸಾಕು. mUlataha (ಮೂಲತಹ) ಬರೆದ್ರೆ ವಿಸರ್ಗ (ಃ) ಬರೋದಿಲ್ಲ.

4. ಋ ಕಾರ ಬರೆಯೋದು: ಕೃಷ್ಣ ಎಂಬುದನ್ನು ಹೇಗೆ ಬರೀಬೇಕಂದ್ರೆ, kRushNa (R ಮತ್ತು N ಕ್ಯಾಪಿಟಲ್ ಅಕ್ಷರ)

5. ಅರ್ಕ ಒತ್ತು : ಬಹಳ ಸುಲಭ, ಅರ್ಕಾವತಿ ಅಂತ ಬರೆಯಲು arkaavati ಅಂತ ಟೈಪಿಸಿ

6. ಞ ಬಳಕೆ: ~ja (ಅಂದರೆ ಎಸ್ಕೇಪ್ ಕೀಲಿಯಿರುವ ಸಾಲಿನ ಕೆಳಗೆ ಅಂಕಿಗಳಿರುವ ಸಾಲಿನಲ್ಲಿ, ಮೊದಲು (ಅಂಕಿ 1 ಕ್ಕಿಂತ ಮುನ್ನ) ಬರುವ ಕೀಲಿಯನ್ನು Shift ಹಿಡಿದು ಒತ್ತಿದ ಬಳಿಕ ja). ವಿಜ್ಞಾನ ಬರೆಯುವುದು ಹೀಗೆ: vij~jnaana, ಸರ್ವಜ್ಞ ಬರೆಯಲು: sarvaj~jna,

ಕಯ್ಯಾರ ಕಿಞ್ಞಣ್ಣ ರೈ ಬರೆಯಬೇಕಿದ್ದರೆ, kayyaara ki~j~jaNNa rai

7. ಙ ಬಳಕೆ: ~ga. ಉದಾಹರಣೆಗೆ, ವಾಙ್ಮಯ ಬರೆಯಬೇಕಿದ್ದರೆ, vaa~gmaya ಅಂತ ಟೈಪ್ ಮಾಡಿದರಾಯಿತು.

8. ನಾನು ಬರೆದ್ರೆ ರಾಜ್ಕುಮಾರ್ ಆಗುತ್ತದೆ, ಅದನ್ನು ರಾಜ್‌ಕುಮಾರ್ ಅಂತ ಹೇಗೆ ಬರೆಯುವುದು ಎಂಬ ಪ್ರಶ್ನೆ ನಿಮ್ಮಲ್ಲಿರಬಹುದು. ಅದಕ್ಕೊಂದು ಪರಿಹಾರ. ಹಲಂತ (ಅರ್ಧಾಕ್ಷರ)ದ ಬಳಿಕ Zero Width Non Joiner ಅಂತ ಒಂದು ಯುನಿಕೋಡ್ ಅಕ್ಷರವಿದೆ. ಅದನ್ನು ಸೇರಿಸಿ ಮುಂದಿನ ಅಕ್ಷರ ಟೈಪ್ ಮಾಡಿದರೆ ಎರಡು ವ್ಯಂಜನಾಕ್ಷರಗಳು ಪರಸ್ಪರ ಕೂಡಿಕೊಳ್ಳುವುದಿಲ್ಲ. ಅದನ್ನು ಸೇರಿಸಲು ನೀವು ಬಳಸಬೇಕಾದ ಕೀಲಿ Shift+6 ಒತ್ತಿದಾಗ ದೊರೆಯುವ ^ ಎಂಬ ಚಿಹ್ನೆಯನ್ನು ಎರಡು ಬಾರಿ ನಮೂದಿಸಬೇಕು.
ಉದಾಹರಣೆಗೆ: ರಾಜ್‌ಕುಮಾರ್ ಬರೆಯಲು raaj^^kumar ಅಂತ ಟೈಪ್ ಮಾಡಬೇಕು. ಸಿಮ್‌ಕಾರ್ಡ್ ಬರೆಯಲು: sim^^kaarD.

9. ಇದು ಮಾತ್ರವಲ್ಲದೆ, ಹಳೆಗನ್ನಡದ ೞ ಅಕ್ಷರವನ್ನು ಕೂಡ ನೀವು ಈಗಲೂ ಬಳಸಬಹುದು. ಅದಕ್ಕೆ ನೀವು Lxa ಅಕ್ಷರಗಳನ್ನು ಟೈಪಿಸಿದರಾಯಿತು.

ನೀವು Shift ಕೀಲಿಯನ್ನು ಸರಿಯಾಗಿ ಬಳಸದೇ ಹೋದರೆ, ನೀವು ಬರೆದ ಕಾಮೆಂಟ್ ಅಪಾರ್ಥವಾಗಿಯೂ ಅನರ್ಥವಾಗಿಯೂ ಕಾಣಿಸಬಹುದು, ಹೀಗಾಗಿ ಎಚ್ಚರಿಕೆ ವಹಿಸಿ!

ಇವೆಲ್ಲವುಗಳ ಬಳಿಕ (ವಾಸ್ತವವಾಗಿ ಎಲ್ಲಕ್ಕಿಂತ ಮೊದಲು!), ಅಥವಾ ನಿಮ್ಮ ಬ್ರೌಸರಿನಲ್ಲಿ ಪೆಟ್ಟಿಗೆಗಳ ಸಾಕು ಕಂಡುಬಂದರೆ, ಅಂದರೆ □□□□□ □□□□ ಎಂಬಿತ್ಯಾದಿಯಾಗಿ ಕಂಡುಬಂದರೆ, ನಿಮ್ಮ ಆಪರೇಟಿಂಗ್ ಸಿಸ್ಟಂ ವಿಂಡೋಸ್ ಎಕ್ಸ್‌ಪಿಗಿಂತ ಹಳೆಯದು (ಅಂದರೆ ವಿಂಡೋಸ್ 98, ವಿಂಡೋಸ್ 2000) ಇತ್ಯಾದಿ ಇರಬಹುದು ಎಂದು ಭಾವಿಸಬಹುದು. ಅವುಗಳು ಯುನಿಕೋಡ್ ಬೆಂಬಲಿಸುವುದಿಲ್ಲ.

ಕೊನೆಯಲ್ಲಿ ಒಂದು ಮನವಿ: ಪ್ರೀತಿಯ ಓದುಗರೆ, ನಿಮ್ಮ ಸಲಹೆ ಸೂಚನೆಗಳು ನಮಗೂ ಪ್ರೋತ್ಸಾಹದ ಟಾನಿಕ್ ಇದ್ದಂತೆ. ಹೆಚ್ಚು ಹೆಚ್ಚು ವೆಬ್‌ದುನಿಯಾದೊಂದಿಗೆ ನೀವು ಹೆಚ್ಚು ಹೆಚ್ಚು ಆತ್ಮೀಯವಾಗುತ್ತಿರುವುದು ನಮ್ಮ ಉತ್ಸಾಹವನ್ನು ಹೆಚ್ಚಿಸುತ್ತದೆ. ಹೀಗಾಗಿ ನಿಮ್ಮಲ್ಲೊಂದು ಅರಿಕೆ. ನೀವು ಹಾಕುವ ಕಾಮೆಂಟುಗಳು ಶಿಷ್ಟವಾಗಿರಲಿ. ಆನ್‌ಲೈನ್ ಓದುಗರು ಸಭ್ಯರು ಎಂಬುದು ನಮ್ಮ ಭಾವನೆ. ವ್ಯಕ್ತಿ ನಿಂದನೆ, ಜಾತಿ ನಿಂದನೆ, ಅಶ್ಲೀಲ, ಅಸಭ್ಯ ಪದಗಳ ಪ್ರಯೋಗ ಬೇಡವೇ ಬೇಡ. ಇದು ನಿಮ್ಮ ಅಭಿಪ್ರಾಯ ಹಂಚಿಕೊಳ್ಳಲು, ಚರ್ಚೆ ಮಾಡಿಕೊಳ್ಳಲು ಇರುವ ಅತ್ಯುತ್ತಮ ವೇದಿಕೆ. ಇದನ್ನು ಸಭ್ಯವಾಗಿ, ಸಮರ್ಥವಾಗಿ ಬಳಸಿಕೊಳ್ಳಿ.

ಕಾಮೆಂಟ್ ಬರವಣಿಗೆ ಬಗ್ಗೆ ಏನಾದರೂ ಸಂದೇಹಗಳಿದ್ದಲ್ಲಿ, ನಮ್ಮನ್ನು [email protected] ಇ-ಮೇಲ್ ಮೂಲಕ ಸಂಪರ್ಕಿಸಬಹುದು.
- ಸಂಪಾದಕ
ಸಂಬಂಧಿತ ಮಾಹಿತಿ ಹುಡುಕಿ