| ನವದೆಹಲಿ: ಆದಾಯ ತೆರಿಗೆದಾರರಿಗೆ ಈ ಬಜೆಟ್ ಕೊಂಚ ಮಟ್ಟಿಗೆ ನೆಮ್ಮದಿಯ ಸುದ್ದಿ ಒದಗಿಸಿದೆ. ಪ್ರಣಬ್ ಮುಖರ್ಜಿ ಸೋಮವಾರ ಮಂಡಿಸಿದ 2009-10 ಆಯವ್ಯಯ ಪತ್ರದಲ್ಲಿ ಆದಾಯ ಮಿತಿಯನ್ನು 1.50ರಿಂದ 1.60 ಲಕ್ಷ ರೂ.ಗೆ, ಮಹಿಳೆಯರ ಆದಾಯ ಮಿತಿಯನ್ನು 1.80 ಲಕ್ಷದಿಂದ 1.90 ಲಕ್ಷ ಹಾಗೂ ಹಿರಿಯ ನಾಗರಿಕರ ಆದಾಯ ಮಿತಿಯನ್ನು 2.25 ಲಕ್ಷದಿಂದ 2.40 ಲಕ್ಷ ರೂಪಾಯಿಗೆ ಏರಿಸಲಾಗಿದೆ. ಈ ಮಧ್ಯೆ, ರಾಜಕೀಯ ದೇಣಿಗೆಗೆ ಸಂಪೂರ್ಣ ತೆರಿಗೆ ವಿನಾಯಿತಿ ನೀಡಿರುವುದು ರಾಜಕೀಯ ಪಕ್ಷಗಳ ನೆಲೆ ಭದ್ರಪಡಿಸುವ ಗುರಿ ಹೊಂದಿದೆ. | ನವದೆಹಲಿ: ಪ್ರಣಬ್ ಮುಖರ್ಜಿಯವರು ಗ್ರಾಮಾಂತರ ಪ್ರದೇಶ, ಬಡವರು ಹಾಗೂ ಕೃಷಿ ಕ್ಷೇತ್ರಕ್ಕೆ ಭರಪೂರ ಯೋಜನೆಗಳನ್ನು 2009-10ರ ಸಾಲಿನ ಆಯವ್ಯಯ ಪತ್ರದಲ್ಲಿ ಪ್ರಕಟಿಸಿದ್ದಾರೆ. ಪ್ರಮುಖವಾಗಿ ಕಳೆದ ವರ್ಷ ಚಿದಂಬರಂ ಮಂಡಿಸಿದ್ದ ಬಜೆಟ್‌ನಲ್ಲಿ 60,000 ಕೋಟಿ ರೂಪಾಯಿ ರೈತರ ಸಾಲ ಮನ್ನಾ ಮಾಡಲಾಗಿದ್ದ ಯೋಜನೆಯ ಅವಧಿಯನ್ನು ಆರು ತಿಂಗಳಿಗೆ ವಿಸ್ತರಿಸಿದ್ದು. ಅದೂ ಅಲ್ಲದೆ ಶೇ.7 ಬಡ್ಡಿ ದರದಲ್ಲಿ ಕೃಷಿಕರಿಗೆ ಸಾಲ, ಕೃಷಿಗೆ 3.25 ಲಕ್ಷ ಕೋಟಿ ರೂಪಾಯಿ ಅನುದಾನದ ಮೂಲಕ ಮುಖರ್ಜಿಯವರು ಕೂಡ... |