ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಬೆಲೆ ಏರಿಕೆ ಬೆಂಕಿಗೆ 'ಪೆಟ್ರೋಲ್': ಇಂದಿನಿಂದಲೇ ತುಟ್ಟಿ (Budget 2010 | UPA Budget 2010 | General Budget 2010 | Pranab Mukherjee | Central Budget 2010)
Bookmark and Share Feedback Print
 
ಕಾರು ಮತ್ತು ಇತರ ವಾಹನಗಳ ಆಮದು ಸುಂಕ ಏರಿಕೆ, ಸಿಗರೇಟು, ಬೀಡಿ ಮತ್ತು ಇತರ ತಂಬಾಕು ಉತ್ಪನ್ನಗಳ ಮೇಲಿನ ಸುಂಕ ಹೆಚ್ಚಿಸಲಾಗಿದ್ದು, ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಸುಂಕವನ್ನೂ ಹೆಚ್ಚಿಸಲಾಗಿದ್ದು, ಜನ ಸಾಮಾನ್ಯರು ಮತ್ತಷ್ಟು ಬೆಲೆ ಏರಿಕೆಗಳಿಂದ ತತ್ತರಿಸುವಂತಾಗುವ ಸಾಧ್ಯತೆಗಳಿವೆ.

ಜನ ಸಾಮಾನ್ಯರ ಮೇಲಿನ ಮೊದಲ ಏಟು ಬಿದ್ದಿರುವುದು ಪೆಟ್ರೋಲ್, ಡೀಸೆಲ್ ಮೂಲಕ. ಇಂದು ಮಧ್ಯರಾತ್ರಿಯಿಂದಲೇ ಜಾರಿಗೆ ಬರುವಂತೆ ಪೆಟ್ರೋಲ್ ಬೆಲೆ ಲೀಟರಿಗೆ 2.67 ರೂ. ಹಾಗೂ ಡೀಸೆಲ್ ಬೆಲೆ ಲೀಟರಿಗೆ 2.58 ರೂ. ಏರಿಕೆಯಾಗುತ್ತಿದೆ. ಇದನ್ನು ಸರಕಾರಿ ಅಧಿಕಾರಿಗಳು ಈಗಾಗಲೇ ಘೋಷಿಸಿಬಿಟ್ಟಿದ್ದಾರೆ.

ಸಂಸತ್ತಿನಲ್ಲಿ ಶುಕ್ರವಾರ ವಿತ್ತ ಸಚಿವ ಪ್ರಣಬ್ ಮುಖರ್ಜಿ ಮಂಡಿಸಿದ ಕೇಂದ್ರ ಬಜೆಟ್ 2010ರಲ್ಲಿ, ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕ ಹೆಚ್ಚಿರುವುದರಿಂದ ಅದಕ್ಕೆ ಹೊಂದಿಕೊಂಡಂತಿರುವ ಸಾರಿಗೆ, ಸಾಗಾಟ ವೆಚ್ಚಗಳೆಲ್ಲವೂ ಏರಲಿದ್ದು, ತತ್ಪರಿಣಾಮವಾಗಿ ಜೀವನಾವಶ್ಯಕ ಬೆಲೆಗಳೂ ಏರುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ.

ಪ್ರತಿಪಕ್ಷಗಳಿಂದ ಒಗ್ಗಟ್ಟಿನ ಸಭಾತ್ಯಾ

ಈ ಬಗ್ಗೆ ಸದನದಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಎಲ್ಲ ಪ್ರತಿಪಕ್ಷಗಳು, ಸಾಮೂಹಿಕವಾಗಿ ಸಭಾತ್ಯಾಗ ಮಾಡಿ ಆಕ್ರೋಶ ವ್ಯಕ್ತಪಡಿಸಿದವು.

ಈಗಾಗಲೇ ಬೆಲೆ ಏರಿಕೆಯ ಬಿಸಿಯಲ್ಲಿ ಬೇಯುತ್ತಿರುವ ಜನಸಾಮಾನ್ಯನ ಮೇಲೆ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ಮತ್ತೆ ಬರೆ ಎಳೆದಿದೆ. ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯೊಂದಿಗೆ ಎಲ್ಲಾ ವಸ್ತುಗಳ ಬೆಲೆಯೂ ಮತ್ತೆ ಗಗನಮುಖಿಯಾಗಲಿವೆ ಎಂದು ಪ್ರತಿಪಕ್ಷ ನಾಯಕಿ ಸುಷ್ಮಾ ಸ್ವರಾಜ್ ಹೇಳಿದ್ದಾರೆ.

ಈ ವಿಷಯವು ಎಡಪಕ್ಷಗಳ ಸಹಿತ ಪ್ರತಿಪಕ್ಷಗಳೆಲ್ಲವನ್ನೂ ಒಂದುಗೂಡಿಸಿತು. ಎಡರಂಗದ ಗುರುದಾಸ ದಾಸಗುಪ್ತಾ, ಎಸ್ಪಿಯ ಮುಲಾಯಂ ಸಿಂಗ್ ಯಾದವ್ ಹಾಗೂ ಆರ್‌ಜೆಡಿಯ ಲಾಲು ಪ್ರಸಾದ್ ಯಾದವ್ ಎಲ್ಲರೂ ಸಂಸತ್ ಹೊರಗೆ ಬಂದು ಪತ್ರಿಕಾಗೋಷ್ಠಿಯಲ್ಲಿ ಜೊತೆಯಾಗಿ ಮಾತನಾಡಿದರು. ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ಜನ ಸಾಮಾನ್ಯರ ಹಿತಾಸಕ್ತಿಯ ಮೇಲೆ 'ಸರ್ವಾಧಿಕಾರಿ' ಧೋರಣೆ ತಾಳುತ್ತಿದೆ ಎಂದು ಅವರು ಆರೋಪಿಸಿದರು.
ಸಂಬಂಧಿತ ಮಾಹಿತಿ ಹುಡುಕಿ