ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಸಿಗರೇಟು, ಪೆಟ್ರೋಲ್ ತುಟ್ಟಿ; ತೆರಿಗೆ ಮಿತಿ ಏರಿಕೆ (Budget 2010 | UPA Budget 2010 | General Budget 2010 | Pranab Mukherjee | Central Budget 2010)
Bookmark and Share Feedback Print
 
ಬೆಲೆಯೇರಿಕೆಯಿಂದ ತತ್ತರಿಸುತ್ತಿದ್ದ ಬಡ ಮತ್ತು ಮಧ್ಯಮ ವರ್ಗದ ಜನತೆಗೆ ಹಲವು ಯೋಜನೆಗಳನ್ನು ಪ್ರಕಟಿಸಿರುವ ಹೊರತಾಗಿಯೂ ಪೆಟ್ರೋಲ್, ಡೀಸೆಲ್ ಸುಂಕಗಳಲ್ಲಿ ಹೆಚ್ಚಳ ಮಾಡುವ ಮೂಲಕ ಬಜೆಟ್‌ನಲ್ಲಿ ಕೇಂದ್ರ ವಿತ್ತ ಸಚಿವ ಪ್ರಣಬ್ ಮುಖರ್ಜಿ ಹೊಡೆತಗಳನ್ನು ನೀಡಿದ್ದಾರೆ.

ಕೃಷಿ, ಶಿಕ್ಷಣ, ಮೂಲಭೂತ ಸೌಕರ್ಯಗಳಿಗೆ ಹೆಚ್ಚು ನೀಡಲಾಗಿರುವ ಈ ಬಜೆಟಿನಲ್ಲಿ ಚಿನ್ನ, ಬೆಳ್ಳಿ, ಬೀಡಿ, ಸಿಗರೇಟು, ಗುಟ್ಕಾ, ಆಮದು ಕಾರುಗಳು, ಎಸಿ, ಫ್ರಿಡ್ಜುಗಳ ಮೇಲಿನ ತೆರಿಗೆಯನ್ನೂ ಹೆಚ್ಚಳಗೊಳಿಸಲಾಗಿದೆ. ಅತ್ತ ಆದಾಯ ತೆರಿಗೆ ಮಿತಿಯನ್ನು ಮತ್ತಷ್ಟು ಹೆಚ್ಚಳಗೊಳಿಸುವ ಮೂಲಕ ಉದ್ಯೋಗ ಕ್ಷೇತ್ರದ ಒಲವನ್ನು ಗಿಟ್ಟಿಸಿಕೊಳ್ಳುವಲ್ಲಿ ಕೇಂದ್ರ ಸಫಲವಾಗಿದೆ.

ಸಾಲ ಮರುಪಾವತಿಯ ಅವಧಿಯನ್ನು ವಿಸ್ತರಿಸಿರುವುದು, ಸಬ್ಸಿಡಿ ದರವನ್ನು ಹೆಚ್ಚಿಸಿರುವುದು, ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಗೆ ಒತ್ತು ಮುಂತಾದುವು ಕೃಷಿಕರಿಗೆ ಸಂತೋಷ ತರುವ ಬಜೆಟ್ ಅಂಶಗಳು.

ಶುಕ್ರವಾರ ಬೆಳಿಗ್ಗೆ 10 ಗಂಟೆ ಹೊತ್ತಿಗೆ ಸಂಸತ್ತಿಗೆ ಆಗಮಿಸಿದ ಮುಖರ್ಜಿಯವರು ಪ್ರತಿ ಪಕ್ಷಗಳ ತೀವ್ರ ವಿರೋಧದ ನಡುವೆಯೇ ಬಜೆಟ್ ಮಂಡಿಸಿದ್ದಾರೆ. ಆರಂಭದಲ್ಲಿ ವಿರೋಧ ಪಕ್ಷಗಳು ಸುಮ್ಮನಿದ್ದರೂ, ಕಚ್ಚಾ ಪೆಟ್ರೋಲಿಯಂ ಉತ್ಪನ್ನದ ಮೇಲಿನ ತೆರಿಗೆ ಹೆಚ್ಚಳಗೊಳಿಸಲಿರುವುದನ್ನು ಸಚಿವರು ಪ್ರಕಟಿಸಿದಾಗ ತೀವ್ರ ಆಕ್ರೋಶಗೊಂಡು ಸಭಾ ತ್ಯಾಗ ಮಾಡಿದವು.

ಬಜೆಟ್ ಮುಖ್ಯಾಂಶಗಳು

ಕೃಷಿ ಮತ್ತು ರೈತರ ಕ್ಷೇತ್ರ...
* ರೈತರ ಸಾಲ ಮರುಪಾವತಿ ಅವಧಿ ಆರು ತಿಂಗಳಿಗೆ ವಿಸ್ತರಣೆ.
* ರೈತರಿಗೆ ಶೇ.5ರ ಬಡ್ಡಿದರದಲ್ಲಿ ಸಾಲ.
* ರೈತರ ಸಾಲದ ಮೇಲೆ ಕೇಂದ್ರದಿಂದ ಶೇ.2ರಷ್ಟು ಸಬ್ಸಿಡಿ.
* ರೈತರ ಸಾಲ ವಿತರಣೆಗೆ 3.75 ಲಕ್ಷ ಕೋಟಿ ಮೀಸಲು.
* ಈ ವರ್ಷ ರಸಗೊಬ್ಬರ ದರ ಏರಿಕೆ ಮಾಡುವುದಿಲ್ಲ.
* ರಸಗೊಬ್ಬರ ಸಬ್ಸಿಡಿ ಇಳಿಕೆ.
* ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಗೆ 300 ಕೋಟಿ ರೂ.
* ಸಹಾಯಧನದ ಮೊತ್ತ ರೈತರಿಗೆ ನೇರವಾಗಿ ಸಿಗುವಂತೆ ನೂತನ ಪದ್ಧತಿ.
* 2010ರಲ್ಲಿ ಕೃಷಿ ಉತ್ಪಾದನೆಯಲ್ಲಿ ಪ್ರಗತಿ.

ಮೂಲಭೂತ ಸೌಕರ್ಯ ಮತ್ತು ಶಿಕ್ಷಣ ಕ್ಷೇತ್ರ...
* ಮೂಲಭೂತ ಸೌಕರ್ಯ ಅಭಿವೃದ್ಧಿಗೆ 1,73,552 ಕೋಟಿ ರೂಪಾಯಿ.
* ಆರೋಗ್ಯ ವಲಯದ ಅಭಿವೃದ್ಧಿಗೆ 22.300 ಕೋಟಿ ರೂ. ಅನುದಾನ.
* ಗ್ರಾಮೀಣಾಭಿವೃದ್ಧಿಗೆ 66.100 ಕೋಟಿ ರೂ. ಅನುದಾನ
* ಆಹಾರ, ಭದ್ರತೆ, ಶಿಕ್ಷಣಕ್ಕೆ ಒತ್ತು
* ಶಿಕ್ಷಣ ಕ್ಷೇತ್ರಕ್ಕೆ 20,000 ಕೋಟಿ ಅನುದಾನ ಹೆಚ್ಚಳ
* ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ರಾಜ್ಯಗಳಿಗೆ 3675 ಕೋಟಿ.
* ಅಸಂಘಟಿತ ಕ್ಷೇತ್ರದ ಅಭಿವೃದ್ಧಿಗೆ 1,000 ಕೋಟಿ ರೂ.
* ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಗೆ 40,100 ಕೋಟಿ
* ಉದ್ಯೋಗ ಖಾತ್ರಿ ಯೋಜನೆ ಫಲಾನುಭವಿಗಳಿಗೆ ಸ್ಮಾರ್ಟ್ ಕಾರ್ಡ್
* ನಗರಗಳಲ್ಲಿ ರೋಜಗಾರ್ ಯೋಜನೆಗೆ 5,600 ಕೋಟಿ

ತೆರಿಗೆ ಹೆಚ್ಚಳ-ಕಡಿಮೆಯಾದುವು...
* ಪೆಟ್ರೋಲ್, ಡೀಸೆಲ್ ಮೇಲಿನ ಸುಂಕ ಹೆಚ್ಚಳ.
* ಕಚ್ಚಾ ಪೆಟ್ರೋಲಿಯಂ ಮೇಲೆ ಶೇ.5ರಷ್ಟು ತೆರಿಗೆ.
* ಬೀಡಿ, ಸಿಗರೇಟು, ಗುಟ್ಕಾಗಳ ಮೇಲಿನ ತೆರಿಗೆ ಹೆಚ್ಚಳ.
* ಕಾರು ಮತ್ತು ಇತರ ಆಮದು ವಾಹನಗಳ ಮೇಲಿನ ತೆರಿಗೆಯಲ್ಲಿ ಏರಿಕೆ.
* ಸಿಮೆಂಟ್ ದರದಲ್ಲಿ ಮತ್ತಷ್ಟು ಹೆಚ್ಚಳ
* ಕೃಷಿ, ಯಂತ್ರೋಪಕರಣಗಳ ದರದಲ್ಲಿ ಅಗ್ಗ.
* 1.6 ಲಕ್ಷ ವಾರ್ಷಿಕ ವರಮಾನವುಳ್ಳವರಿಗೆ ತೆರಿಗೆಯಿಲ್ಲ.
* 1.6 ಲಕ್ಷದಿಂದ 5 ಲಕ್ಷದವರೆಗೆ ಶೇ.10 ತೆರಿಗೆ
* 5 ಲಕ್ಷದಿಂದ 8 ಲಕ್ಷದವರೆಗೆ ಶೇ.20 ತೆರಿಗೆ
* 8 ಲಕ್ಷಕ್ಕಿಂತ ಹೆಚ್ಚು ಆದಾಯ ಹೊಂದಿರುವವರಿಗೆ ಶೇ.30ರ ತೆರಿಗೆ
* ಸೆಕ್ಷನ್ 80 ಸಿ ಅಡಿಯ ತೆರಿಗೆ ವಿನಾಯಿತಿಯಲ್ಲಿ 20 ಸಾವಿರ ಹೆಚ್ಚಳ
* ಪವನ ವಿದ್ಯುತ್ ಯಂತ್ರಗಳ ಮೇಲಿನ ತೆರಿಗೆ ರದ್ದು.
* ಚಿನ್ನ, ಬೆಳ್ಳಿ, ಪ್ಲಾಟಿನಂ, ವಜ್ರಗಳ ಮೇಲಿನ ಆಮದು ಸುಂಕ ಹೆಚ್ಚಳ
* 10 ಗ್ರಾಂ ಚಿನ್ನದ ಮೇಲೆ 300 ರೂಪಾಯಿ ಆಮದು ಸುಂಕ.
* ಪ್ರತೀ ಕಿಲೋ ಬೆಳ್ಳಿಯ ಮೇಲೆ 1,500 ರೂಪಾಯಿ ಆಮದು ತೆರಿಗೆ.
* ಎಸಿ, ಫ್ರಿಡ್ಜ್‌ಗಳ ಮೇಲಿನ ತೆರಿಗೆ ಹೆಚ್ಚಳ
* ಭಾರತೀಯ ಕಲ್ಲಿದ್ದಲು ಪ್ರತೀ ಟನ್ ಮೇಲೆ 50 ರೂಪಾಯಿ ತೆರಿಗೆ.
* ದೇಶಿ ಮೊಬೈಲ್ ಅಗ್ಗ, ಆಟಿಕೆಗಳ ಬೆಲೆ ಕಡಿಮೆ.

ಇತರ ಮುಖ್ಯಾಂಶಗಳು...
* ರಕ್ಷಣಾ ವೆಚ್ಚ 1,47,334 ಕೋಟಿಗೆ ಏರಿಕೆ
* ಪೆಟ್ರೋಲಿಯಂ ದರ ನಿಗದಿ (ನಿಯಂತ್ರಣ ಮುಕ್ತ) ಕುರಿತು ಪಾರೀಖ್ ಸಮಿತಿ ಶಿಫಾರಸು ಪರಿಗಣನೆ.
* 25 ಸಾವಿರ ಕೋಟಿ ರೂ. ಬಂಡವಾಳ ಹಿಂತೆಗೆತ.
* ಸಾರ್ವಜನಿಕ ಕ್ಷೇತ್ರದಿಂದ ಬಂಡವಾಳ ವಾಪಸ್
* 2010ರ ಏಪ್ರಿಲ್ ತಿಂಗಳಿಂದ ನೇರ ತೆರಿಗೆ ಪದ್ಧತಿ ಜಾರಿ
* ತೆರಿಗೆ ಪದ್ಧತಿಯನ್ನು ಸರಳೀಕೃತಗೊಳಿಸಲು ಅಗತ್ಯ ಕ್ರಮ
* ಬೆಲೆ ಏರಿಕೆ ನಿಯಂತ್ರಣಕ್ಕೆ ರಾಜ್ಯ ಸರಕಾರಗಳೊಂದಿಗೆ ಸಮಾಲೋಚನೆ.
* ಖಾಸಗಿ ಕ್ಷೇತ್ರಕ್ಕೆ ಹೆಚ್ಚುವರಿ ಬ್ಯಾಂಕಿಂಗ್ ಪರವಾನಗಿ
* ಕೇಂದ್ರದಿಂದ ಸರಕಾರಿ ಬ್ಯಾಂಕುಗಳಿಗೆ 1,200 ಕೋಟಿ ಸಹಾಯಧನ.
* ಅಭಿವೃದ್ಧಿಗಾಗಿ ಸಾರ್ವಜನಿಕ ಕ್ಷೇತ್ರದ ಬ್ಯಾಂಕುಗಳಿಗೆ 16,500 ಕೋಟಿ ರೂಪಾಯಿ ನೆರವು.
* ಉತ್ತಮ ಪ್ಯಾಕೇಜುಗಳ ಮರುಪರಿಶೀಲನೆ
* ವಿಶೇಷ ಆರ್ಥಿಕ ವಲಯಗಳಿಗೆ ಧನಸಹಾಯ ಮುಂದುವರಿಕೆ.
* ವಿದೇಶಿ ಬಂಡವಾಳ ನೀತಿ ಸರಳೀಕರಣ ಯತ್ನ.
* 2010-11 ಸಾಲಿನಲ್ಲಿ ಶೇ.9 ಪ್ರಗತಿ ಗುರಿ
* ಸಾರ್ವಜನಿಕ ವಿತರಣಾ ವ್ಯವಸ್ಥೆ ಬಲಗೊಳಿಸಲು ಕ್ರಮ
* ಆಹಾರ ಭದ್ರತೆಗೆ ಹೆಚ್ಚಿನ ಒತ್ತು
* ಸಾರ್ವಜನಿಕ ವಿತರಣಾ ವ್ಯವಸ್ಥೆಯನ್ನೂ ಬಲಪಡಿಸಬೇಕಾಗಿದೆ.
* ಜಿಡಿಪಿ ವೃದ್ಧಿಯಲ್ಲಿ ಸರಕಾರ ಯಶಸ್ವಿಯಾಗಿದೆ.
* ಆರ್ಥಿಕ ಹಿಂಜರಿತ ಎದುರಿಸುವಲ್ಲಿ ದೇಶ ಸಫಲ.
* ಹವಾಮಾನ ವೈಪರೀತ್ಯದಿಂದ ಉತ್ಪಾದನೆಯಲ್ಲಿ ಏರುಪೇರು.
* 2010ರಲ್ಲಿ ಕೃಷಿ ಉತ್ಪಾದನೆ ಸ್ಥಿರತೆ.
* ಬೆಲೆ ಹೆಚ್ಚಳದಿಂದ ಆರ್ಥಿಕ ಸಂಕಷ್ಟು ಉಂಟಾಗಿತ್ತು.
* ಪ್ರಸಕ್ತ ಸಾಲಿನಲ್ಲಿ ರಫ್ತು ವ್ಯವಹಾರವೂ ಅತ್ಯುತ್ತಮವಾಗಿದೆ.
* ಪ್ರತಿ ದಿನ 20 ಕಿಲೋ ಮೀಟರ್ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ.
* ರಫ್ತು ಉತ್ತೇಜನಕ್ಕೆ ಶೇ.2ರ ಸಹಾಯಧನ.
* ಐದು ಬೃಹತ್ ಆಹಾರ ಪಾರ್ಕ್ ಸ್ಥಾಪನೆ.
* ಕೃಷಿ ವಲಯಕ್ಕೆ 3 ಲಕ್ಷ 75 ಸಾವಿರ ಕೋಟಿ ಸಾಲ
* ಆಹಾರ ಧಾನ್ಯಗಳ ಸಂಗ್ರಹಣೆಗೆ ಖಾಸಗಿ ಗೋದಾಮು ಪಡೆಯುವುದು.
* ರೈಲ್ವೇಗೆ 16 ಸಾವಿರ 772 ಕೋಟಿ ಅನುದಾನ
* ವಿದ್ಯುತ್ ಉತ್ಪಾದನೆ ಹೆಚ್ಚಳಕ್ಕೆ ಆದ್ಯತೆ.
* ವಿದ್ಯುತ್ ಉತ್ಪಾದನಾ ವಲಯಕ್ಕೆ ಹಂಚಿಕೆ ಪ್ರಮಾಣ 5,130 ಕೋಟಿ ರೂ.ಗಳಿಗೆ ಏರಿಕೆ
* ಉತ್ತೇಜನಾ ಪ್ಯಾಕೇಜುಗಳ ಮರುಪರಿಶೀಲನೆ ಅಗತ್ಯ. ವಿಶಾಲ ಪ್ರಗತಿಯಾಧರಿತ ಕ್ಷೇತ್ರಕ್ಕೆ ಒತ್ತು ನೀಡುವ ಅಗತ್ಯ.
* ಗೋವಾ ಬೀಚುಗಳ ಹಸಿರೀಕರಣಕ್ಕೆ 200 ಕೋಟಿ ರೂಪಾಯಿ.
* 2010-11ರಲ್ಲಿ ಆರೋಗ್ಯ ಸಮೀಕ್ಷೆ.
* ನೆರೆ, ಬರ ಹೀಗೆ ಪ್ರಕೃತಿ ವಿಕೋಪ ಪೀಡಿತರ ಸಾಲ ಮರುಪಾವತಿ ಅವಧಿ ವಿಸ್ತರಣೆ.
* 2000 ಜನಸಂಖ್ಯೆ ಇರುವ ಗ್ರಾಮಗಳಲ್ಲಿ ಬ್ಯಾಂಕ್ ಸ್ಥಾಪನೆ.
* ಗಂಗಾ ನದಿ ನೀರು ಸ್ವಚ್ಛತೆಗೆ 500 ಕೋಟಿ.
* ಇಂದಿರಾ ವಸತಿ ಯೋಜನೆಗೆ 10,000 ಕೋಟಿ ರೂ.
* ಕೊಳೆಗೇರಿ ಮುಕ್ತ ಭಾರತ ನಿರ್ಮಾಣಕ್ಕೆ ಸಂಕಲ್ಪ
* ಡಾಲರ್ ಮತ್ತು ಯುರೋ ಮಾದರಿಯಲ್ಲಿ ಭಾರತೀಯ ರೂಪಾಯಿಗೆ ಚಿಹ್ನೆ ನೀಡಲು ಚಿಂತನೆ.
* ಈ ವರ್ಷ ಪ್ರಾಯೋಗಿಕವಾಗಿ ಗುರುತು ಚೀಟಿ ವಿತರಣೆ.
* ಅಲ್ಪಸಂಖ್ಯಾತರ ಅಭಿವೃದ್ದಿಗೆ 2,600 ಕೋಟಿ ರೂ.
ಸಂಬಂಧಿತ ಮಾಹಿತಿ ಹುಡುಕಿ