ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಪ್ರಚಲಿತ » ಸಂಗೀತ ಕಲಾವಿದರಿಗೆ ಪ್ರಶಸ್ತಿ ಪ್ರದಾನ ಸಮಾರಂಭ (Kartik Fine Arts | mridangist Vaidhyanathan | Art Festival | Bharathanatiyam)
Bookmark and Share Feedback Print
 
PR
ಕಾರ್ತಿಕ್ ಫೈನ್ ಆರ್ಟ್ಸ್ ವತಿಯಿಂದ ಮೃದಂಗ ಮತ್ತು ಭರತನಾಟ್ಯ ಕಲೆಯಲ್ಲಿ ಅಪಾರ ಸೇವೆ ಸಲ್ಲಿಸಿದವರಿಗೆ ಇಲ್ಲಿನ ಎಗ್ಮೋರ್‌ನ 'ಪಾರ್ಕ್ ವೇ'ಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿರುದು ನೀಡಿ ಗೌರವಿಸಲಾಯಿತು.

ಬುಧವಾರ ನಡೆದ 36ನೇ ಕಲಾ ಉತ್ಸವದ ಉದ್ಘಾಟನಾ ಸಮಾರಂಭದಲ್ಲಿ ಭರತನಾಟ್ಯ ಪ್ರವೀಣೆ ಶ್ರೀಮತಿ ಲಾವಣ್ಯ ಶಂಕರ್ ಅವರಿಗೆ 'ನಟನಾ ಮಾಮಣಿ', ಹಾಗೂ ಹೆಸರಾಂತ ಮೃದಂಗವಾದಕ ಜೆ. ವೈದ್ಯನಾಥನ್ ಅವರಿಗೆ 'ಇಸೈ ಪೇರೊಳಿ' ಬಿರುದನ್ನು ನೀಡಿ ಗೌರವಿಸಲಾಯಿತು. ಪ್ರಶಸ್ತಿ 25,000 ರೂ. ನಗದು ಮತ್ತು ಪದಕವನ್ನು ಒಳಗೊಂಡಿತ್ತು.

ಕ್ಷಣ ಕ್ಷಣದ ತಾಜಾ ಸುದ್ದಿಗಳಿಗೆ, ವಿಶೇಷ ಸುದ್ದಿಗಳಿಗೆ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಇದೇ ಸಂದರ್ಭದಲ್ಲಿ ಮುದ್ರಾ ಸಂಸ್ಥೆಯ ಕಾರ್ಯದರ್ಶಿ ಭಾಸ್ಕರ್ ಅವರಿಗೆ 2010 ರ ಶ್ರೇಷ್ಠತಾ ಪ್ರಶಸ್ತಿ ಹಾಗೂ ಅಮೃತಾ ವೆಂಕಟೇಶ್‌ಗೆ ಡಿ.ಕೆ ಪಟ್ಟಮ್ಮಾಳ್ ಶ್ರೇಷ್ಠತಾ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

ಮದ್ರಾಸ್ ಹೈಕೋರ್ಟ್‌ನ ನ್ಯಾಯಾಧೀಶ ಚೊಕ್ಕಲಿಂಗಂ ಮತ್ತು ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್‌ನ ಪ್ರಧಾನ ಕಾರ್ಯದರ್ಶಿ ಕೆ. ಅಲ್ಲಾವುದೀನ್ ಪ್ರಶಸ್ತಿ ಪ್ರದಾನ ಮಾಡಿದರು.

ಉದ್ಘಾಟನಾ ಕಾರ್ಯಕ್ರಮದ ಬಳಿಕ ಶುಭಾಂಜಲಿ ಸದ್ಗುರುದಾಸ್ ಅವರ ಭರತನಾಟ್ಯ ಪ್ರದರ್ಶನ ನಡೆಯಿತು. ಕಾರ್ತಿಕ್ ಫೈನ್ ಆರ್ಟ್ಸ್‌ನ ಚೇರ್ಮನ್ ಎಲ್.ಸಬರೆತ್ನಂ ಮತ್ತು ಅಧ್ಯಕ್ಷ ಎವಿಎಸ್ ರಾಜಾ ಉಪಸ್ಥಿತರಿದ್ದರು.

ಕಲಾ ಉತ್ಸವ 2011 ಜನವರಿ 17ರ ವರೆಗೆ ನಡೆಯಲಿದೆ.

ಚಿತ್ರದಲ್ಲಿ: ಎಡದಿಂದ ಬಲಕ್ಕೆ ಜೆ.ವೈದ್ಯನಾಥನ್‌, ಕೆ.ಅಲ್ಲಾವುದ್ದೀನ್, ನ್ಯಾ|ಚೊಕ್ಕಲಿಂಗಂ, ಎಲ್. ಸಬರೆತ್ನಂ, ಶ್ರೀಮತಿ ಲಾವಣ್ಯ ಶಂಕರ್
ಸಂಬಂಧಿತ ಮಾಹಿತಿ ಹುಡುಕಿ