ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಪ್ರಚಲಿತ » ವೆಬ್‌ದುನಿಯಾ ಶ್ರೇಷ್ಠರು 2010: ನಿಮ್ಮ ಮತ ಯಾರಿಗೆ? (Webdunia Survey 2010 | Webdunia Kannada Survey | Online Poll)
Bookmark and Share Feedback Print
 
ಅವಿನಾಶ್ ಬಿ.
WD
ಪ್ರಿಯ ಓದುಗರೇ,
ಕಣ್ಣು ಮುಚ್ಚಿ ತೆರೆಯುವುದರೊಳಗೆ 2010 ಮುಗಿದೇಬಿಟ್ಟಿತಲ್ಲ! ಎಷ್ಟೆತ್ತರ ಏರಿದರೂ ನಾವೇರಿದ ಏಣಿಯನ್ನೊಮ್ಮೆ ಹಿಂತಿರುಗಿ ನೋಡು ಎಂಬ ನಾಣ್ಣುಡಿಯಂತೆ, ಒಮ್ಮೆ ಹಿನ್ನೋಟ ಹರಿಸಿ ನೋಡೋಣ! ಅಚ್ಚಳಿಯದೇ ನೆನಪಿನಲ್ಲಿ ಉಳಿಯಬಹುದಾದ ಅದೆಷ್ಟೋ ಸಂಗತಿಗಳು ನಮ್ಮ ಮನದ ಮೂಸೆಯಿಂದ ಧುತ್ತನೇ ಬಂದು ಕಣ್ಣೆದುರು ನಿಲ್ಲುತ್ತವೆ. ಅವುಗಳನ್ನು ಮತ್ತೊಮ್ಮೆ ನೆನಪಿಸಿಕೊಳ್ಳುತ್ತಾ, ಅವುಗಳಲ್ಲಿ ಮನಸ್ಸನ್ನು ಅತಿಯಾಗಿ ತಟ್ಟಿದವು, ಮುಟ್ಟಿದವು ಯಾವುವು, ಯಾರು ನಮ್ಮ ಗಮನವನ್ನು ಅತೀ ಹೆಚ್ಚು ಸೆಳೆದುಕೊಂಡಿದ್ದಾರೆ ಎಂದೆಲ್ಲಾ ತಿಳಿದುಕೊಳ್ಳಲು, ಮತ್ತು ಉಳಿದವರೆಲ್ಲರೂ ಯಾವ ರೀತಿಯಾಗಿ ಯೋಚಿಸಿದ್ದಾರೆ ಎಂಬುದನ್ನೂ ತಿಳಿದುಕೊಳ್ಳಲು ವೆಬ್‌ದುನಿಯಾ ನಿಮಗೆ ಒಂದು ವೇದಿಕೆ ಒದಗಿಸಿಕೊಡುತ್ತಿದೆ. ಇದು ಭಾಷಾ ಪೋರ್ಟಲ್ ಒಂದು ನಡೆಸುವ ಏಕೈಕ ಆನ್‌ಲೈನ್ ಸಮಗ್ರ ಸಮೀಕ್ಷೆ.

9 ಭಾರತೀಯ ಭಾಷೆಗಳಲ್ಲಿ ಸೇವೆ ನೀಡುತ್ತಿರುವ ಏಕೈಕ ಪೋರ್ಟಲ್ ವೆಬ್‌ದುನಿಯಾ, ಪ್ರತಿವರ್ಷದಂತೆ ಈ ವರ್ಷವೂ ಇದಕ್ಕಾಗಿ ನಿಮಗೊಂದು ವೇದಿಕೆ ಒದಗಿಸುತ್ತಿದೆ. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಯಾರು ಶ್ರೇಷ್ಠರು ಎಂಬುದನ್ನು ಆರಿಸಲು ಮತ್ತು ಉಳಿದವರೂ ನಿಮ್ಮಂತೆಯೇ ಯೋಚಿಸಿದ್ದಾರೆಯೇ ಎಂಬುದನ್ನು ತಿಳಿದುಕೊಳ್ಳಲು ನೀವು ಈ ಕೆಳಗೆ ನೀಡಲಾದ ಲಿಂಕ್ ಕ್ಲಿಕ್ ಮಾಡಿ ನಿಮ್ಮ ಮತ ಚಲಾಯಿಸಿ.

ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ 2010 ವರ್ಷದ ಶ್ರೇಷ್ಠರು ಯಾರು ಎಂದು ಆರಿಸಲು ಇಲ್ಲಿ ಕ್ಲಿಕ್ ಮಾಡಿ .

ವಿಭಿನ್ನ ಕ್ಷೇತ್ರಗಳಿಗೆ ಸಂಬಂಧಿಸಿ ನೀಡಲಾಗಿರುವ ಪ್ರತ್ಯೇಕ ಪ್ರಶ್ನೆಗಳಿಗೆ ತಲಾ 10 ಆಯ್ಕೆಗಳನ್ನು ನೀಡಲಾಗಿದೆ. ಓದುಗರು ತಮಗಿಷ್ಟವಾದ ಹೆಸರನ್ನು ಆರಿಸಿದರಾಯಿತು. ನೆನಪಿಡಿ: ಇಲ್ಲಿ ದಾಖಲಾಗುವ ಮತಗಳು ವೆಬ್‌ದುನಿಯಾ ಕನ್ನಡ ಸೇರಿದಂತೆ ಹಿಂದಿ, ತಮಿಳು, ತೆಲುಗು, ಮಲಯಾಳಂ, ಗುಜರಾತಿ, ಪಂಜಾಬಿ, ಬಂಗಾಳಿ ಮತ್ತು ಮರಾಠಿ ಭಾಷೆಗಳ ಎಲ್ಲ ಓದುಗರು ಚಲಾಯಿಸಿದ ಮತಗಳ ಒಟ್ಟಾರೆ ಸರಾಸರಿ ಆಗಿರುತ್ತದೆ.

ಇದೇ ವೇಳೆ, ಕನ್ನಡ ನಾಡಿನಲ್ಲಿ ಏನೇನು ನಡೆಯಿತು, ಯಾರ್ಯಾರು ನಿಮಗಿಷ್ಟವಾದರು, ಯಾರು ವಿವಾದಾಸ್ಪದರು ಎಂದೆಲ್ಲಾ ತಿಳಿದುಕೊಂಡು ಆಯ್ಕೆ ಮಾಡಲು ನಿಮಗೆ ಮತ್ತೊಂದು ಸಮೀಕ್ಷೆಯ ಪಟ್ಟಿ ನೀಡಲಾಗಿದೆ. ಇದಕ್ಕಾಗಿ ಈ ಕೆಳಗೆ ನೀಡಿದ ಲಿಂಕ್ ಕ್ಲಿಕ್ ಮಾಡಿ. ಇದು ಕನ್ನಡಿಗರು ಮಾತ್ರವೇ ಚಲಾಯಿಸುವ ಮತಗಳನ್ನು ಒಳಗೊಂಡಿರುತ್ತದೆ.

2010ರಲ್ಲಿ ರಾಜ್ಯದಲ್ಲಿ ಯಾರು ಉತ್ತಮರು ಎಂದು ಆರಿಸಲು ಇಲ್ಲಿ ಕ್ಲಿಕ್ ಮಾಡಿ .

ಕಳೆದ ಬಾರಿಯೂ ವೆಬ್‌ದುನಿಯಾದ ಒಂಬತ್ತು ಭಾಷೆಗಳ ಪೋರ್ಟಲ್‌ಗಳು ಸಂಯುಕ್ತವಾಗಿ ಏರ್ಪಡಿಸಿದ್ದ ಈ ಓದುಗರ ಆಯ್ಕೆಯ ಸಮೀಕ್ಷೆಯಲ್ಲಿ ವಿಶ್ವದ ಅತ್ಯಂತ ಖ್ಯಾತ ವ್ಯಕ್ತಿಗಳಾಗಿ ಬರಾಕ್ ಒಬಾಮ, ಭಾರತದ ಅತ್ಯಂತ ಖ್ಯಾತಿ ಪಡೆದ ವ್ಯಕ್ತಿಯಾಗಿ ರಾಹುಲ್ ಗಾಂಧಿ, ಭಾರತದ ನೆಚ್ಚಿನ ರಾಜಕಾರಣಿಯಾಗಿ ನರೇಂದ್ರ ಮೋದಿ (ಸತತ ಎರಡನೇ ವರ್ಷ), ಜನಪ್ರಿಯ ರಾಜಕಾರಣಿಯಾಗಿ ಸೋನಿಯಾ ಗಾಂಧಿ, ಜನಪ್ರಿಯ ನಟ, ನಟಿಯರಾಗಿ ಅಕ್ಷಯ್ ಕುಮಾರ್ ಮತ್ತು ಐಶ್ವರ್ಯಾ ರೈ, ಅತ್ಯುತ್ತಮ ಚಿತ್ರವಾಗಿ 'ಸ್ಲಂ ಡಾಗ್ ಮಿಲಿಯನೇರ್', ಸೆಕ್ಸೀ ನಟಿಯಾಗಿ ಬಿಪಾಷಾ ಬಸು (ಸತತ ಎರಡನೇ ಬಾರಿ), ಭಾರತದ ನೆಚ್ಚಿನ ಕ್ರಿಕೆಟಿಗರಾಗಿ ಸಚಿನ್ ತೆಂಡುಲ್ಕರ್ (ಸತತ 2ನೇ ಬಾರಿ), ನೆಚ್ಚಿನ ಕ್ರೀಡಾ ತಾರೆಯಾಗಿ ವಿಶ್ವನಾಥನ್ ಆನಂದ್ ಅವರು ಅತೀ ಹೆಚ್ಚು ಮತಗಳನ್ನು ಪಡೆದಿದ್ದರು. ಅದರ (ಇದು 2009 ರ ಸಮೀಕ್ಷೆ ) ಪೂರ್ಣ ಫಲಿತಾಂಶವನ್ನು ನೀವು ಇಲ್ಲಿ ಕ್ಲಿಕ್ ಮಾಡಿ ನೋಡಬಹುದು.

ರಾಜ್ಯದ ವಿವಿಧ ಕ್ಷೇತ್ರಗಳಲ್ಲಿ ಅತ್ಯಂತ ಶ್ರೇಷ್ಠ ವ್ಯಕ್ತಿಯಾಗಿ ಲೋಕಾಯುಕ್ತ ಸಂತೋಷ ಹೆಗ್ಡೆ, ಜನಪ್ರಿಯ ರಾಜಕಾರಣಿಯಾಗಿ ಕುಮಾರಸ್ವಾಮಿ, ವಿವಾದಾಸ್ಪದ ರಾಜಕಾರಣಿಯಾಗಿ ಜನಾರ್ದನ ರೆಡ್ಡಿ, ಕ್ರೀಡಾಪಟುವಾಗಿ ರಾಹುಲ್ ದ್ರಾವಿಡ್ (ಸತತ ಎರಡನೇ ಬಾರಿ), ಅತ್ಯುತ್ತಮ ಚಿತ್ರವಾಗಿ ಮನಸಾರೆ, ಜನಪ್ರಿಯ ತಾರೆ ಆಗಿ ಉಪೇಂದ್ರ, ಅತ್ಯುತ್ತಮ ನಟಿಯಾಗಿ ಐಂದ್ರಿತಾ ರೇ ಹಾಗೂ ವರ್ಷದ ಅತ್ಯಂತ ಪ್ರಮುಖ ಘಟನೆಯಾಗಿ ಉತ್ತರ ಕರ್ನಾಟಕದ ನೆರೆ ಹಾವಳಿಯನ್ನು ಓದುಗರು ಗುರುತಿಸಿ ಅತೀ ಹೆಚ್ಚು ಮತಗಳನ್ನು ನೀಡಿದ್ದರು. ಅದರ (ಇದು 2009 ರ ಸಮೀಕ್ಷೆ ) ವಿವರಗಳನ್ನು ನೀವು ಇಲ್ಲಿ ಕ್ಲಿಕ್ ಮಾಡಿ ನೋಡಬಹುದು.

ಈ ಬಾರಿಯೂ ಸಮೀಕ್ಷೆಯ ಬಳಿಕ ವಿವರವಾದ ವರದಿ ಪ್ರಕಟಿಸಲಾಗುತ್ತದೆ. ಈ ಸಮೀಕ್ಷೆಯಲ್ಲಿ ಎಲ್ಲಾ ಓದುಗರು ಜನವರಿ 20, 2011ರವರೆಗೆ ಭಾಗವಹಿಸಬಹುದಾಗಿದೆ.

-ಸಂಪಾದಕ

ಸಂಬಂಧಿತ ಮಾಹಿತಿ ಹುಡುಕಿ