ನೇಪಾಳಿ ಪ್ರಧಾನಿ ಪುಷ್ಪಕಮಲ್ ದಹಲ್ ಪ್ರಚಂಡ ಅವರಿಗೆ ತೀವ್ರ ಮುಖಭಂಗ ಉಂಟುಮಾಡಿರುವ ರಾಮ್ ಬರನ್ ಯಾದವ್ ಅವರು, ಪ್ರಧಾನಿ ವಜಾಗೊಳಿಸಿರುವ ಸೇನಾಮುಖ್ಯಸ್ಥ ಜನರಲ್ ರುಕ್ಮಾಂಗದ್ ಕಟವಾಲ್ ಅವರಿಗೆ ಸ್ಥಾನ ತೊರೆಯದಂತೆ ಹೇಳಿದ್ದಾರೆ. ಅಲ್ಲದೆ ಅವರನ್ನು ವಜಾಗೊಳಿಸಿರುವ ಕ್ರಮವು ಸಾಂವಿಧಾನಿಕ ಅವಶ್ಯಕತೆಗಳನ್ನು ಪೂರೈಸಿಲ್ಲ ಎಂದು ಅಭಿಪ್ರಾಯಿಸಿದ್ದಾರೆ." ಸೇನಾಧಿಕಾರಿಯವರನ್ನು ವಜಾಗೊಳಿಸಿರುವುದು ಮತ್ತು ಹೊಸ ಸೇನಾಧಿಕಾರಿಯ ನೇಮಕ ಪ್ರಕ್ರಿಯೆಯು ಸಾಂವಿಧಾನಿಕ ಅವಶ್ಯಕತೆಗಳನ್ನು ಪೂರೈಸುವುದಿಲ್ಲ, ನೇಪಾಳ ಸೇನಾ ಮುಖ್ಯಸ್ಥರಾಗಿ ಮುಂದುವರಿಯುವಂತೆ ತಾನು ಈ ಮೂಲಕ ನಿರ್ದೇಶನ ನೀಡುತ್ತಿದ್ದೇನೆ" ಎಂಬುದಾಗಿ ಅಧ್ಯಕ್ಷರು ಕಟವಾಲ್ ಅವರಿಗೆ ಬರೆದಿರುವ ಪತ್ರದಲ್ಲಿ ಹೇಳಿದ್ದಾರೆ.ಕಟವಾಲ್ ಅವರನ್ನು ವಜಾಗೊಳಿಸಿರುವುದಾಗಿ ಪ್ರಧಾನಿ ಆದೇಶ ನೀಡಿದ ಕೆಲವೇ ಗಂಡೆಗಳಲ್ಲಿ ಅಧ್ಯಕ್ಷರ ನಿರ್ದೇಶನ ಹೊರಬಿದ್ದಿದೆ. ಸರ್ಕಾರಿ ಆಜ್ಞೆಗಳಿಗೆ ಸೇನಾಮುಖ್ಯಸ್ಥರು ಅವಿಧೇಯತೆ ತೋರುತ್ತಾರೆ ಎಂಬುದಾಗಿ ಆಪಾದಿಸಿ ವಜಾಗೊಳಿಸಿರುವುದಕ್ಕೆ ತಕ್ಷಣ ಪ್ರತಿಕ್ರಿಯಿಸಿದ್ದ ಕಟವಾಲ್, ಪ್ರಧಾನಿಯವರಿಗೆ ಈ ನಿರ್ಧಾರ ಕೈಗೊಳ್ಳುವ ಹಕ್ಕಿಲ್ಲ ಎಂದು ಹೇಳಿದ್ದರು.ಪ್ರಚಂಡ ಅವರ ನಿರ್ಧಾವರನ್ನು ಅವರ ಮಿತ್ರಪಕ್ಷಗಳೇ ವಿರೋಧಿಸಿದ್ದವು. ಅಲ್ಲದೆ ಈ ಸಂಬಂಧ ಕರೆಯಲಾಗಿದ್ದ ಸಂಪುಟ ಸಭೆಯನ್ನು ನಾಲ್ಕು ಮಿತ್ರಪಕ್ಷಗಳಾದ ಸಿಪಿಎನ್-ಯುಎಂಎಲ್, ಮಧೇಶಿ ಪೀಪಲ್ಸ್ ರೈಟ್ಸ್ ಫೋರಮ್, ಸದ್ಭಾವನ್ ಪಕ್ಷ ಮತ್ತು ಸಿಪಿಎನ್-ಸಂಯುಕ್ತ ಪಕ್ಷಗಳು ಬಹಿಷ್ಕರಿಸಿದ್ದವು. ಸಂವಿಧಾನವನ್ನು ರಕ್ಷಿಸುವಂತೆ ಸೇನಾಧಿಕಾರಿ ವಿರುದ್ಧ ಕೈಗೊಂಡಿರುವ ಕ್ರಮವನ್ನು ತಡೆಯುವಂತೆ 18 ರಾಜಕೀಯ ಪಕ್ಷಗಳು ಅಧ್ಯಕ್ಷರನ್ನು ಒತ್ತಾಯಿಸಿರುವ ಹಿನ್ನೆಲೆಯಲ್ಲಿ, ಅಧ್ಯಕ್ಷರು ಸ್ಥಾನ ತೊರೆಯದಂತೆ ಕಟವಾಲ್ ಅವರಿಗೆ ನಿರ್ದೇಶನ ನೀಡಿದ್ದಾರೆ. ನೇಪಾಳ ಸರ್ಕಾರದಿಂದ ಸೇನಾಮುಖ್ಯಸ್ಥರ ವಜಾ |