ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಜನಾಂಗೀಯ ದ್ವೇಷ: ಬಾಲಕರಿಂದ ವೃದ್ಧರೊಬ್ಬರ ಹತ್ಯೆ (Kolkata | London | Ekram | Schoolboys)
 
ಜನಾಂಗೀಯ ದ್ವೇಷದ ಶಂಕಿತ ದಾಳಿಯಲ್ಲಿ ಅಪ್ರಾಪ್ತ ವಯಸ್ಕ ಶಾಲಾ ವಿದ್ಯಾರ್ಥಿಗಳ ಗುಂಪೊಂದು ಕೊಲ್ಕತಾ ಸಂಜಾತ ಹಿರಿಯ ವ್ಯಕ್ತಿಯೊಬ್ಬರನ್ನು ಅಮಾನವೀಯವಾಗಿ ಥಳಿಸಿದ್ದರಿಂದ ಲಂಡನ್ನಿನ ಆಸ್ಪತ್ರೆಯೊಂದರಲ್ಲಿ ಸೋಮವಾರ ಮೃತಪಟ್ಟಿದ್ದಾರೆ. ನಿವೃತ್ತ ಆರೋಗ್ಯ ಸೇವೆ ಕಾರ್ಯಕರ್ತರಾದ 67 ವರ್ಷ ವಯಸ್ಸಿನ ಎಕ್ರಾಂ ಉಲ್ ಹಕ್ ಅವರನ್ನು ಐದು ವರ್ಷ ವಯಸ್ಸಿನ ಮೊಮ್ಮಗಳ ಸಮ್ಮುಖದಲ್ಲಿ ನೆಲಕ್ಕೆ ಕೆಡವಿ ಥಳಿಸಲಾಯಿತು.

ಲಂಡನ್ ಮಸೀದಿಯೊಂದರಿಂದ ಅವರು ಹಿಂತಿರುಗುತ್ತಿದ್ದಂತೆ 12, 14 ಮತ್ತು 15ರ ಪ್ರಾಯದ ಮ‌ೂವರು ಬಾಲಕರು ದಕ್ಷಿಣ ಲಂಡನ್‌ನ ನೆರೆಯ ಟೂಟಿಂಗ್‌ನಲ್ಲಿ ಹಕ್ ಮತ್ತು 40ರ ಪ್ರಾಯದ ವ್ಯಕ್ತಿಯನ್ನು ಥಳಿಸಿದರು. ಟೂಟಿಂಗ್ ಪಶ್ಚಿಮಬಂಗಾಳ ಮತ್ತು ಬಾಂಗ್ಲಾದೇಶದ ಅನೇಕ ಮಂದಿಗೆ ಆವಾಸಸ್ಥಾನವಾಗಿದೆ. ಹಕ್ಸ್ ಮೊಮ್ಮಗಳಾದ ಮಾರಿಯನ್ ಈ ಘಟನೆಯಲ್ಲಿ ಗಾಯವಿಲ್ಲದೇ ಪಾರಾಗಿದ್ದು, ಆ.31ರಂದು ನಡೆದ ಘಟನೆಯ ಬಗ್ಗೆ ವಿಸ್ತೃತವಾದ ಹೇಳಿಕೆ ನೀಡಿದ್ದಾಳೆ.

ಒಂದು ವಾರದ ಕೆಳಗೆ ದಕ್ಷಿಣ ಏಷ್ಯಾದ ಇಬ್ಬರು ಹಿರಿಯರ ಮೇಲೆ ಇದೇ ಮಾದರಿಯ ಹಲ್ಲೆ ಯತ್ನಗಳನ್ನು ಮಾಡಲಾಗಿದ್ದು, ಹತ್ಯೆ ದಳದ ಪತ್ತೆದಾರರು ಈ ದಾಳಿಗೂ ಹಿಂದೆ ನಡೆದ ದಾಳಿಗಳಿಗೂ ನಂಟು ಕಲ್ಪಿಸಿದ್ದಾರೆ. ಸಿಸಿಟಿವಿಯಲ್ಲಿ ದಾಳಿ ನಡೆದ ಚಿತ್ರಗಳನ್ನು ಸೆರೆಹಿಡಿಯಲಾಗಿದ್ದು, ಸ್ಥಳೀಯ ಸಮುದಾಯದಲ್ಲಿ ಉದ್ವಿಗ್ನತೆ ಮ‌ೂಬಡಿದ ಹಿನ್ನೆಲೆಯಲ್ಲಿ ಭದ್ರತೆಯನ್ನು ಚುರುಕುಗೊಳಿಸಲು ನಿರ್ಧರಿಸಲಾಗಿದೆ.

ಈ ದಾಳಿಯನ್ನು ವರ್ಣದ್ವೇಷದ ದಾಳಿಯೆಂದು ಸ್ಕಾಟ್‌ಲ್ಯಾಂಡ್ ಯಾರ್ಡ್ ದೃಢಪಡಿಸಿದೆ. ಸಂಪ್ರದಾಯವಾದಿ ಮುಸ್ಲಿಂ ಹಕ್, ರಮ್ಝಾನ್ ಪವಿತ್ರ ಮಾಸದಲ್ಲಿ ಸಂಜೆಯ ಪ್ರಾರ್ಥನೆ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದಾಗ ಹದಿಹರೆಯದ ಬಾಲಕರು ಅವರ ಹಿಂದೆ ಓಡಿ ತಲೆಗೆ ದೊಣ್ಣೆಯಿಂದ ಹೊಡೆದಿದ್ದರಿಂದ ಅವರು ಅಸುನೀಗಿದರು
• Play Free Online Games Click Here
• Blogs, Videos and More Click Here
• Send Musical and Animated Cards Click Here
• Simple,Fast & Free Email Service Click Here
ಸಂಬಂಧಿತ ಮಾಹಿತಿ ಹುಡುಕಿ